ಐಎಎಸ್ ಹುದ್ದೆಗೆ ಬರೋದು ಸುಲಭದ ಮಾತಲ್ಲ ಹಾಗಂತ ಕಠಿಣದ ಹಾದಿಯೂ ಇದಲ್ಲ. ಸರಿಯಾದ ಓದು, ನಿರಂತರತೆ, ಶ್ರಮ, ಪ್ರಮುಖವಾಗುತ್ತದೆ. ಇದೇ ಹಾದಿಯಲ್ಲಿ ಅಭ್ಯಾಸ ಮಾಡಿ ಚೊಚ್ಚಲ ಯುಪಿಎಸ್ಸಿ ಪರೀಕ್ಷೆಯಲ್ಲಿಯೇ ಪಾಸ್ ಆದವರು ಈ ಸೃಷ್ಟಿ ದೇಶಮುಖ್.
ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ಪರೀಕ್ಷೆ ಭಾರಿ ಕಷ್ಟ ಎನ್ನಲಾಗುತ್ತದೆ.. ಈ ಪರೀಕ್ಷೆಯನ್ನು ಒಂದೇ ಬಾರಿಗೆ ಪಾಸ್ ಮಾಡೋಕೆ ಆಗೋದೇ ಇಲ್ವಂತೆ ಹೀಗೆ ಸುಮಾರು ಕಟ್ಟುಕಥೆಗಳಿವೆ ನೋಡಿ ಈ ಪರೀಕ್ಷೆಯ ಸುತ್ತ. ಹೌದು ಮೊದಲ ಪ್ರಯತ್ನದಲ್ಲಿ ಪಾಸ್ ಆಗದೇ ಹಲವಾರು ಪ್ರಯತ್ನಗಳ ಬಳಿಕ ಪಾಸ್ ಆಗಿ ಐಎಎಸ್ ಪಟ್ಟಕ್ಕೇರಿದ್ದಾರೆ. ಹಾಗಂತ ಮೊದಲ ಪ್ರಯತ್ನದಲ್ಲಿ (First Attempt) ಯಾರೂ ಪಾಸೇ ಆಗಿಲ್ಲ ಅನ್ನೋದು ತಪ್ಪು ಕಲ್ಪನೆ. ಮತ್ತು ನಮ್ಮ ದೇಶದಲ್ಲಿರುವ ಕಠಿಣ ಪರೀಕ್ಷೆಗಳಲ್ಲಿ ಇದು ಕೂಡ ಒಂದು.
ಚೊಚ್ಚಲ ಪ್ರಯತ್ನದಲ್ಲಿಯೇ ಪರೀಕ್ಷೆ ಜಯಸಿದ ಸಾವಿರಾರು ಉದಾಹರಣೆಗಳಿವೆ. ಈ ಜಯ ಅವರ ಪರಿಶ್ರಮ, ಅಭ್ಯಾಸ ಕ್ರಮ, ಜ್ಞಾನ, ಧೈರ್ಯ, ಆತ್ಮವಿಶ್ವಾಸ ಇವುಗಳ ಮೇಲೆ ಆಧಾರಿತವಾಗಿರುತ್ತದೆ. ಮೊದಲ ಘಟ್ಟದಲ್ಲಿಯೇ ಯುಪಿಎಸ್ಸಿ ಎಂಬ ಪರೀಕ್ಷೆ ಪಾಸ್ ಮಾಡಿರುವ ಐಎಎಸ್ ಅಧಿಕಾರಿ ಸೃಷ್ಟಿ ದೇಶಮುಖ್ ಬಗ್ಗೆ ಹೇಳ್ತೀದ್ದೀವಿ ಕೇಳಿ.
ಮೊದಲ ಪ್ರಯತ್ನದಲ್ಲಿಯೇ ಯುಪಿಎಸ್ಸಿ ಪರೀಕ್ಷೆ ಪಾಸ್
ಐಎಎಸ್ ಹುದ್ದೆಗೆ ಬರೋದು ಸುಲಭದ ಮಾತಲ್ಲ ಹಾಗಂತ ಕಠಿಣದ ಹಾದಿಯೂ ಇದಲ್ಲ. ಸರಿಯಾದ ಓದು, ನಿರಂತರತೆ, ಶ್ರಮ, ಪ್ರಮುಖವಾಗುತ್ತದೆ. ಇದೇ ಹಾದಿಯಲ್ಲಿ ಅಭ್ಯಾಸ ಮಾಡಿ ಚೊಚ್ಚಲ ಯುಪಿಎಸ್ಸಿ ಪರೀಕ್ಷೆಯಲ್ಲಿಯೇ ಪಾಸ್ ಆದವರು ಈ ಸೃಷ್ಟಿ ದೇಶಮುಖ್.
ಟಾಪರ್ ಆಗಿದ್ದ ಸೃಷ್ಟಿ
ಪ್ರತಿಭಾವಂತ ಅಧಿಕಾರಿ ತನ್ನ ಮೊದಲ ಪ್ರಯತ್ನದಲ್ಲಿ AIR-5 ಅನ್ನು ಪಡೆದುಕೊಂಡರು. 2018 ರಲ್ಲಿ ಪರೀಕ್ಷೆಗೆ ಹಾಜರಾದ 182 ಮಹಿಳಾ ಅಭ್ಯರ್ಥಿಗಳಲ್ಲಿ ಸೃಷ್ಟಿ ದೇಶಮುಖ್ ಟಾಪರ್ ಆಗಿ ಹೊರಹೊಮ್ಮಿದ್ದರು.
ಶಿಕ್ಷಣ
1995 ರಲ್ಲಿ ಜನಿಸಿದ ಸೃಷ್ಟಿ, ಮಧ್ಯಪ್ರದೇಶದ ಭೋಪಾಲ್ ಮೂಲದವರು. ಡಿಎನ್ಎ ಇಂಡಿಯಾದಲ್ಲಿನ ವರದಿಯ ಪ್ರಕಾರ, ಸೃಷ್ಟಿ ಐಐಟಿಯಲ್ಲಿ ಎಂಜಿನಿಯರಿಂಗ್ ಓದಲು ಬಯಸಿದ್ದರು, ಆದರೆ ಜೆಇಇ ತೇರ್ಗಡೆಯಾಗಲು ಸಾಧ್ಯವಾಗದ ಕಾರಣ ನಂತರ ಅವರು ಭೋಪಾಲ್ನ ಲಕ್ಷ್ಮಿ ನರೇನ್ ಕಾಲೇಜ್ ಆಫ್ ಟೆಕ್ನಾಲಜಿಗೆ ಸೇರಿಕೊಂಡರು ಮತ್ತು ಕೆಮಿಕಲ್ ಇಂಜಿನಿಯರಿಂಗ್ನಲ್ಲಿ ಬಿ.ಟೆಕ್ ಅನ್ನು ಪೂರ್ಣಗೊಳಿಸಿದರು.
ಇಂಜಿನಿಯರ್ ಪದವಿ ಪಡೆದರೂ ಆ ಕ್ಷೇತ್ರದತ್ತ ವಾಲದ ಇವರು ಸರ್ಕಾರಿ ಅಧಿಕಾರಿಯಾಗುವ ಇಂಗಿತ ವ್ಯಕ್ತಪಡಿಸಿದರು. ದೃಢವಾದ ನಿರ್ಧಾರ ಮಾಡಿಕೊಂಡು ಯುಪಿಎಸ್ಸಿ ಪರೀಕ್ಷೆ ಸಿದ್ಧತೆಗಳನ್ನು ಪ್ರಾರಂಭಿಸಲು ನಿರ್ಧರಿಸಿದರು.
ಪ್ರತಿದಿನ 6-7 ಗಂಟೆಗಳ ಕಾಲ ಓದಿನಲ್ಲಿ ತಲ್ಲೀನ
ಸೃಷ್ಟಿ ಪ್ರತಿದಿನ 6-7 ಗಂಟೆಗಳ ಕಾಲ ಅಧ್ಯಯನ ಮಾಡುತ್ತಿದ್ದರು ಮತ್ತು ಪರೀಕ್ಷೆ ವಸ್ತು ವಿಷಯಗಳಿಗೆ ಆನ್ಲೈನ್ ಸಂಪನ್ಮೂಲಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದರು.
ಅಂತರ್ಜಾಲವನ್ನು ಜ್ಞಾನ ಮತ್ತು ಮಾಹಿತಿಯ ಅತ್ಯುತ್ತಮ ಮೂಲವೆಂದು ಭಾವಿಸಿದ್ದ ಸೃಷ್ಟಿಯವರು ಹೆಚ್ಚು ಅಲ್ಲಿಯೇ ಮಾಹಿತಿಯನ್ನು ಕಲೆ ಹಾಕುತ್ತಿದ್ದರು.
ಸಾಕಾರಗೊಂಡ ಪ್ರಯತ್ನ
ತಯಾರಿಗಾಗಿ ದೆಹಲಿ ಸೇರಿ ಬೇರೆ ಬೇರೆ ಕಡೆ ಸ್ಥಳಾಂತರಗೊಳ್ಳುವ ಇತರ ಆಕಾಂಕ್ಷಿಗಳಿಗಿಂತ ಭಿನ್ನವಾಗಿ, ಸೃಷ್ಟಿ ಮನೆಯಲ್ಲಿ ಉತ್ತಮವಾಗಿ ತಯಾರಿ ನಡೆಸಿದರು. ಅಂತಿಮವಾಗಿ ಕಷ್ಟಕ್ಕೆ ಪ್ರತಿಫಲ ಎಂಬ ಮಾತಿನಂತೆ ಹಗಲಿರುಳು ಓದಿದ ಪ್ರಯತ್ನ ಸಾಕಾರಗೊಂಡಿತು. 2018 ರಲ್ಲಿ UPSC ನಾಗರಿಕ ಸೇವಾ ಪರೀಕ್ಷೆಯಲ್ಲಿ ಅರ್ಹತೆ ಪಡೆದ 759 ಅಭ್ಯರ್ಥಿಗಳಲ್ಲಿ 182 ಮಹಿಳೆಯರು ಮತ್ತು 182 ಮಹಿಳಾ ಅಭ್ಯರ್ಥಿಗಳ ಪೈಕಿ ಸೃಷ್ಟಿ ಟಾಪರ್ ಆಗಿ ಪಾಸ್ ಆದರು.
ಪರೀಕ್ಷೆ ಪಾಸ್ ಆದಾಗ ಸೃಷ್ಟಿ ಅವರಿಗೆ ಕೇವಲ 23 ವರ್ಷ ವಯಸ್ಸಾಗಿತ್ತು. ಈ ಮೂಲಕ ಐಎಎಸ್ ಕನಸನ್ನು ನನಸಾಗಿಸಿದ ಕಿರಿಯ ಆಕಾಂಕ್ಷಿಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದರು. ಇನ್ನೂ ಇವರ ಪತಿ ಕೂಡ ಐಎಎಸ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಯುಪಿಎಸ್ಸಿ ಆಕಾಂಕ್ಷಿಗಳಿಗೆ ಪರೀಕ್ಷೆ ಪಾಸ್ ಮಾಡುವ ಹಾದಿಯಲ್ಲಿ ಸ್ಥಿರತೆ ಕಾಪಾಡಿಕೊಳ್ಳುವಂತೆ ಸಲಹೆ ನೀಡುತ್ತಾರೆ ಸೃಷ್ಟಿ ದೇಶ್ಮುಖ್.