Uncategorized

ಅಮೆರಿಕಾ ಅಮೆರಿಕಾ’ 2ಗಾಗಿ ಯುಸ್‌ಗೆ ಹಾರಿದ ಶಾನ್ವಿ & ಟೀಮ್

Share

‘ಅಮೆರಿಕಾ ಅಮೆರಿಕಾ’ ಖ್ಯಾತಿಯ ನಾಗತಿಹಳ್ಳಿ ಚಂದ್ರಶೇಖರ್ (Nagathihalli Chandrashekar) ಹೊಸ ಸಿನಿಮಾದ ಶೂಟಿಂಗ್‌ಗಾಗಿ ಟೀಮ್ ಜೊತೆ ಯುಸ್‌ಗೆ (US) ಹಾರಿದ್ದಾರೆ. ಟ್ರಯಾಂಗಲ್ ಲವ್ ಸ್ಟೋರಿ ಚಿತ್ರದಲ್ಲಿ ನಿರೂಪ್ ಭಂಡಾರಿ (Nirup Bhandari), ಶಾನ್ವಿ ಶ್ರೀವಾಸ್ತವ್, ಪೃಥ್ವಿ ಅಂಬರ್ ಪ್ರಮುಖ ಪಾತ್ರಕ್ಕೆ ಜೀವತುಂಬುತ್ತಿದ್ದಾರೆ. ಸದ್ಯ ಚಿತ್ರೀಕರಣದ ಫೋಟೋ ವೈರಲ್ ಆಗುತ್ತಿವೆ.

‘ಮಾಸ್ಟರ್ ಪೀಸ್’ ಸುಂದರಿ ಶಾನ್ವಿ (Shanvi Srivastav) ಲೀಡ್ ರೋಲ್‌ನಲ್ಲಿ ನಟಿಸುತ್ತಿರೋ ಚಿತ್ರಕ್ಕೆ ನಾಗತಿಹಳ್ಳಿ ಚಂದ್ರಶೇಖರ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ವಿಭಿನ್ನ ಪ್ರೇಮ ಕಥೆಯೊಂದಿಗೆ ಬರುತ್ತಿದ್ದಾರೆ. ಯುಸ್‌ನ ಸುಂದರ ತಾಣಗಳಲ್ಲಿ ಶಾನ್ವಿ ಮತ್ತು ನಟ ಪೃಥ್ವಿ ಅಂಬರ್ ಜೊತೆ ಶೂಟಿಂಗ್ ಭರದಿಂದ ಸಾಗುತ್ತಿದೆ. ಇದನ್ನೂ ಓದಿ:’ಅಮೆರಿಕಾ ಅಮೆರಿಕಾ’ 2ಗಾಗಿ ಯುಸ್‌ಗೆ ಹಾರಿದ ಶಾನ್ವಿ & ಟೀಮ್

ಮೂಲಗಳ ಪ್ರಕಾರ, ಸೂಪರ್ ಹಿಟ್ ಚಿತ್ರ ‘ಅಮೆರಿಕಾ ಅಮೆರಿಕಾ’ (America America 2) ಚಿತ್ರದ ಪಾರ್ಟ್ 2 ಎಂದು ಹೇಳಲಾಗುತ್ತಿದೆ. ಅಮೆರಿಕಾ ಅಮೆರಿಕಾದಂತಹ ಸಿನಿಮಾ ಕೊಟ್ಟ ನಾಗತಿಹಳ್ಳಿ ಮೇಷ್ಟ್ರು ಮತ್ತೊಂದು ಸಿನಿಮಾ ಮಾಡ್ತಿದ್ದಾರೆ. ಇದು ಒಂದು ರೀತಿಯ ಅಮೆರಿಕಾ ಅಮೆರಿಕಾ ಚಿತ್ರಕ್ಕೆ ಟ್ರಿಬ್ಯೂಟ್ ಥರವೇ ಇದೆ. ಹೆಸರಿಡದ ಈ ಚಿತ್ರದಲ್ಲೂ ತ್ರಿಕೋನ ಪ್ರೇಮ ಕಥೆಯನ್ನೇ ಹೆಣೆದಿದ್ದಾರಂತೆ.  ಪಾರ್ಟ್‌ 2 ಬಗ್ಗೆ  ಬಗ್ಗೆ ಚಿತ್ರತಂಡದ ಕಡೆಯಿಂದ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ.

ಮೊದಲ ಬಾರಿಗೆ ಶಾನ್ವಿ, ಪೃಥ್ವಿ, ನಿರೂಪ್ ಭಂಡಾರಿ ಜೊತೆಯಾಗುತ್ತಿರೋದರಿಂದ ಸಿನಿಮಾ ಬಗೆಗಿನ ನಿರೀಕ್ಷೆ ಹೆಚ್ಚಾಗಿದೆ. ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿಯನ್ನ ತಂಡ ರಿವೀಲ್ ಮಾಡುವವರೆಗೂ ಕಾಯಬೇಕಿದೆ.

‘ಅಮೆರಿಕಾ ಅಮೆರಿಕಾ’ ಸಿನಿಮಾ ತೆರೆಕಂಡು 26 ವರ್ಷಗಳಾಗಿದೆ. ರಮೇಶ್ ಅರವಿಂದ್, ಹೇಮಾ, ಅಕ್ಷಯ್ ಆನಂದ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. 1997ರಲ್ಲಿ ಈ ಚಿತ್ರವನ್ನ ಫ್ಯಾನ್ಸ್ ಮೆಚ್ಚಿಕೊಂಡಿದ್ದರು.

Tags:

Shanvi & team flew to US for America America' 2