ನವದೆಹಲಿ: ‘ಹೈವೇ ಮ್ಯಾನ್ ಆಫ್ ಇಂಡಿಯಾ’. ಅಂತಲೇ ಹೆಸರುವಾಸಿಯಾಗಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ ಬಯೋಪಿಕ್ ತೆರೆಮೇಲೆ ಬರಲು ಸಿದ್ಧಗೊಂಡಿದೆ. ಇದೇ ಅಕ್ಟೋಬರ್ 27ರಂದು ಚಿತ್ರ ಬಿಡುಗಡೆಯಾಗುತ್ತಿದೆ.
ಸಿನಿಮಾದಲ್ಲಿ ನಿತಿನ್ ಗಡ್ಕರಿ ಅವರ ಬಾಲ್ಯದಿಂದ ಹಿಡಿದು ಸಚಿವರಾಗಿ ಆಯ್ಕೆಯಾಗುವವರೆಗಿನ ಅವರ ಜೀವನ ಚಿತ್ರಣ ಇರಲಿದೆ. ಚಿತ್ರವು ಮರಾಠಿ ಭಾಷೆಯಲ್ಲಿ ಮೂಡಿಬರುತ್ತಿದೆ. ರಾಹುಲ್ ಚೋಪ್ಡಾ ಇವರ ಜೊತೆ ಐಶ್ವರ್ಯಾ ಡೋರ್ಲೆ, ಮತ್ತು ತೃಪ್ತಿ ಪ್ರಮೀಳಾ ಕಲ್ಕರ್ ಮುಂತಾದವರು ಪ್ರಮುಖ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ.
ಸಿನಿಮಾವನ್ನು ಅನುರಾಗ್ ರಾಜನ್ ಭೂಸಾರಿ ನಿರ್ದೇಶಿಸಿದ್ದಾರೆ. ಅಕ್ಷಯ್ ಅನಂತ್ ದೇಶಮುಖ್ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಸದ್ಯ ಇಂದು ಚಿತ್ರದ ಪೋಸ್ಟರ್ ರಿಲೀಸ್ ಮಾಡಲಾಗಿದ್ದು, ಸಿನಿಮಾ ಕುರಿತು ಭಾರೀ ಕುತೂಹಲ ಮೂಡಿಸಿದೆ. ಆದರೆ ನಿತಿನ್ ಗಡ್ಕರಿ ಪಾತ್ರದಲ್ಲಿ ಯಾರು ನಟಿಸಿದ್ದಾರೆ ಎಂಬುದನ್ನು ಚಿತ್ರತಂಡ ರಿವೀಲ್ ಮಾಡಿಲ್ಲ. ಪೋಸ್ಟರ್ನಲ್ಲಿ ಸಹ ಯಾರು ಪ್ರಮುಖ ಪಾತ್ರದಲ್ಲಿದ್ದಾರೆ ಎಂಬುದನ್ನು ತಿಳಿಸಿಲ್ಲ.