ಬಾಲಿವುಡ್ (Bollywood) ಬ್ಯೂಟಿ ಕೃತಿ ಸನೋನ್ (Kriti Sanon) ಇತ್ತೀಚೆಗೆ ‘ಮಿಮಿ’ (Mimi Film) ಚಿತ್ರದ ನಟನೆಗಾಗಿ ರಾಷ್ಟ್ರ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಈಗ ಮದುವೆ ವಿಚಾರವಾಗಿ ನಟಿ ಮತ್ತೆ ಸುದ್ದಿಯಲ್ಲಿದ್ದಾರೆ. ನಾನಿನ್ನೂ ಸಿಂಗಲ್ ಆದರೆ ಮದುವೆಗೆ ರೆಡಿ ಎಂದು ಸಂದರ್ಶನವೊಂದರಲ್ಲಿ ಕೃತಿ ತಮ್ಮ ಹುಡುಗ (Partner) ಹೇಗಿರಬೇಕು ಎಂದು ರಿವೀಲ್ ಮಾಡಿದ್ದಾರೆ.
ಕೃತಿ ಸನೋನ್ ಎಂಗೇಜ್ ಆಗಿದ್ದಾರೆ ಎನ್ನುವಂತಹ ಸುದ್ದಿಗಳು ಆಗಾಗ ಟಾಕ್ ಆಗುತ್ತಿರುತ್ತದೆ. ಈ ಸಂದರ್ಶನವೊಂದರಲ್ಲಿ ತನ್ನ ಬಾಳ ಸಂಗಾತಿಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ನಾನಿನ್ನೂ ಸಿಂಗಲ್ ಎಂದು ಕೃತಿ ಹೇಳಿಕೆ ನೀಡಿರೋದು ಪಡ್ಡೆಹುಡುಗರಿಗೆ ಅಚ್ಚರಿಯ ಜೊತೆ ಖುಷಿ ಕೊಟ್ಟಿದೆ. ಇದನ್ನೂ ಓದಿ: ಮಂತ್ರಿಯೊಂದಿಗೆ ನನ್ನ ಪತ್ನಿಗೆ ಅಫೇರ್ ಇತ್ತು- ಶಾಕಿಂಗ್ ಹೇಳಿಕೆ ಕೊಟ್ಟ ಸಂಜಯ್ ದತ್
ನಾನು ಒಂಟಿ ಆದರೆ ಮದುವೆಯಾಗಲು (Wedding) ರೆಡಿ, ಆ ಹುಡುಗನಲ್ಲಿ ಕೆಲವು ಗುಣಗಳು ಇರಲೇಬೇಕು ಎಂದು ತಮ್ಮ ಮನದಾಸೆಯನ್ನ ನಟಿ ಹಂಚಿಕೊಂಡಿದ್ದಾರೆ. ಪ್ರೀತಿಯಲ್ಲಿ ಪ್ರಾಮಾಣಿಕೆಯನ್ನು ಬಯಸುತ್ತೇನೆ. ತನಗಿಂತ ತಾನು ಮದುವೆಯಾಗುವ ಹುಡುಗ ಎತ್ತರವಿರಬೇಕು. ಒಳ್ಳೆಯ ಮನುಷ್ಯನಾಗಿರಬೇಕು ಎಂದು ನಟಿ ಹೇಳಿದ್ದಾರೆ.