Uncategorized

ಬೆಳಗಾವಿ ಸ್ಮಾರ್ಟ್ ಸಿಟಿಗೆ ಯಾವ ಆಧಾರದ ಮೇಲೆ ಅವಾಡ್೯ ಸಿಕ್ಕಿದೆ: ಪಟವೇಗಾರ

Share

ಬೆಳಗಾವಿ ಸ್ಮಾರ್ಟ್ ಸಿಟಿ ಕಾಮಗಾರಿಗಳು ಹದಗೆಟ್ಟು ಹೋಗಿದೆ. ಯಾವ ಆಧಾರದ ಮೇಲೆ ಸ್ಮಾರ್ಟ್ ಸಿಟಿಗೆ ಅವಾಡ್೯ ಸಿಕ್ಕಿದೆ ಎಂದು ಕಾಂಗ್ರೆಸ್ ಸದಸ್ಯ ಅಜೀಂ ಪಟವೇಗರ ಪ್ರಶ್ನೆ ಮಾಡಿದರು.

ಶನಿವಾರ ಬೆಳಗಾವಿ ಪಾಲಿಕೆಯ ಕೌನ್ಸಿಲ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಬೆಳಗಾವಿ ಸ್ಮಾರ್ಟ್ ಸಿಟಿಗೆ ಅವಾಡ್೯ ಬಂದಿದೆ. ಎಲ್ಲರೂ ಅಭಿನಂದನೆಗಳು ಸಲ್ಲಿಸಿದರು. ಆದರೆ ನಗರದಲ್ಲಿನ ಫೋಲ್ ಅಳವಡಿಕೆ ಸರಿಯಾಗಿಲ್ಲ ಎಂದು ಬಿಜೆಪಿ ಸದಸ್ಯರೇ ದೂರುತ್ತಿದ್ದಾರೆ. ಅಲ್ಲದೆ ಸ್ಮಾರ್ಟ್ ಸಿಟಿ ಕಾಮಗಾರಿಯ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬರುತ್ತಿವೆ. ಬೆಳಗಾವಿ ಸ್ಮಾರ್ಟ್ ಸಿಟಿಗೆ ಅವಾಡ್೯ ಯಾವ ಆಧಾರದ ಮೇಲೆ‌ ಬಂದಿದೆ ಎಂದು ಪ್ರಶ್ನಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸದಸ್ಯ ಹನುಮಂತ ಕೊಂಗಾಲಿ ಬೆಳಗಾವಿ ಸ್ಮಾರ್ಟ್ ಸಿಟಿಗೆ ಅವಾಡ್೯ ಬಂದಿರುವುದು ಹೆಮ್ಮೆಯ ವಿಷಯ. ಇದಕ್ಕೆ ಅಭಿನಂದನೆಗಳು ಎಂದರು.

ಕಾಂಗ್ರೆಸ್ ಸದ್ಯಸ್ಯೆ ರೇಷ್ಮಾ ಮಾತನಾಡಿ, ಬೆಳಗಾವಿ ಸ್ಮಾರ್ಟ್ ಸಿಟಿ ನಿರ್ಲಕ್ಷ್ಯದಿಂದ ಪುಟ ಪಾತ್ ಕಾಮಗಾರಿ ಮಾಡುವಾಗ ಒಳಚರಂಡಿ ನೀರಿನ ಫೈಪ್ ಲೈನ್ ಒಡೆದು ಕುಡಿಯುವ ನೀರು ಕಲುಷಿತವಾಗುತ್ತಿದೆ. ಸಂಬಂಧಿಸಿದವರ ಮೇಲೆ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಸಭೆಗೆ ಕಲುಷಿತ ನೀರಿನ ಬಾಟಲ್ ತೆಗೆದುಕೊಂಡು ಬಂದು ಪ್ರದರ್ಶನ ಮಾಡಿದರು.

Tags:

Belgaum Smart City got the award on what basis: Patavegara