Uncategorized

ಮಹದೇವ್ ಹವಾಲ ಪ್ರಕರಣ: ಬಾಲಿವುಡ್ ನ 34 ಸೆಲೆಬ್ರಿಟಿಗಳಿಗೆ ‘ED’ ನೋಟಿಸ್

Share

ಬಾಲಿವುಡ್ ನ ಖ್ಯಾತ ನಟ ರಣಬೀರ್ ಕಪೂರ್, ಹಾಸ್ಯ ನಿರೂಪಕ ಕಪಿಲ್ ಶರ್ಮಾ (Kapil Sharma) ಸೇರಿದಂತೆ ಬಿಟೌನ್‍ನ ಒಟ್ಟು 34 ಸೆಲೆಬ್ರಿಟಿಗಳಿಗೆ ಜಾರಿ ನಿರ್ದೇಶನಾಲಯ (ED) ಸಮನ್ಸ್ ಜಾರಿ ಮಾಡಿದೆ. ಮಹದೇವ್ ಆನ್ ಲೈನ್ ಬೆಟ್ಟಿಂಗ್ ಆಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ನೋಟಿಸ್ (Notice) ಜಾರಿ ಮಾಡಿದ್ದು, ನಿನ್ನೆಯಿಂದಲೇ ಹಲವರಿಗೆ ವಿಚಾರಣೆಗೆ ಕರೆದಿದೆ. ನಾಳೆ ರಣಬೀರ್ ಕಪೂರ್ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ.

ಕೇವಲ ಕಪಿಲ್ ಶರ್ಮಾಗೆ ಮಾತ್ರವಲ್ಲ, ರಣಬೀರ್ ಕಪೂರ್, ಶ್ರದ್ಧಾ ಕಪೂರ್ (Shraddha Kapoor), ಹುಮಾ ಖುರೇಷಿ ಹಾಗೂ ಹೀನಾ ಖಾನ್ ಸೇರಿದಂತೆ ಹಲವರಿಗೆ ಇಡಿ ನೋಟಿಸ್ ನೀಡಿದೆ. ಈ ಪ್ರಕರಣದಲ್ಲಿ ಒಟ್ಟು 17 ಬಾಲಿವುಡ್ ಸಿಲಿಬ್ರಿಟಿಗಳಿಗೆ ನೋಟಿಸ್ ನೀಡಿದ್ದಾರೆ ಎಂದು ನಿನ್ನೆ ತಿಳಿದು ಬಂದಿತ್ತು. ಆದರೆ, ಈವರೆಗೂ 34 ಜನರಿಗೆ ನೋಟಿಸ್ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಹಂತ ಹಂತವಾಗಿ ಇವರನ್ನು ವಿಚಾರಣೆಗೆ ಕರೆಯಲಾಗುತ್ತಿದೆ.

ಏನಿದು ಪ್ರಕರಣ?
ಮಹದೇವ್ ಬೆಟ್ಟಿಂಗ್ (Mahadev Betting) ಆಪ್‍ನ ಮುಖ್ಯಸ್ಥನ ಸೌರಭ್ ಚಂದ್ರಕರ್ ಅವರ ಮದುವೆ ಅದ್ಧೂರಿಯಾಗಿ ದುಬೈನಲ್ಲಿ ನಡೆದಿತ್ತು. ಮುಂಬೈ ಮೂಲದ ಇವೆಂಟ್ ಮ್ಯಾನೇಜ್ ಮೆಂಟ್ ಕಂಪೆನಿಗೆ ಮದುವೆಯ ಉಸ್ತುವಾರಿ ನೀಡಿತ್ತು. ಈ ಇವೆಂಟ್ ಮ್ಯಾನೇಜ್ ಮೆಂಟ್ ಹಲವಾರು ಸಿಲಿಬ್ರಿಟಿಗಳನ್ನು ಮದುವೆಗೆ ಆಹ್ವಾನ ನೀಡಿತ್ತು. ಇವೆಂಟ್ ಮ್ಯಾನೇಜ್ ಮೆಂಟ್ ಕಂಪೆನಿಗೆ ಸೌರಭ್ 140 ಕೋಟಿ ರೂಪಾಯಿ ಹವಾಲ ಹಣ ನೀಡಿದ್ದಾರೆ ಎಂದು ತಿಳಿದು ಬಂದಿದೆ.

Tags:

Mahadev Hawala case: 'ED' notice to 34 Bollywood celebrities