ಧರ್ಮಸ್ಥಳದ ಧರ್ಮಾಧಿಕಾರಿ ಡಾಕ್ಟರ್ ವೀರೇಂದ್ರ ಹೆಗಡೆ ಹಾಗೂ ಶ್ರೀಮತಿ ಹೇಮಾವತಿ ಹೆಗಡೆ ಹುಟ್ಟು ಹಾಕಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಇಡಿ ರಾಜ್ಯದಲ್ಲಿ ಹಬ್ಬಿದೆ ರಾಜ್ಯದಲ್ಲಿನ ಮಹಿಳಾ ಸದಸ್ಯರಿಗೆ ಸಂಘ ಆಧಾರ ಸ್ತಂಭವಾಗಿದೆ ಎಂದು ಕಾಗವಾಡ ಕ್ಷೇತ್ರ ಶಾಸಕ ರಾಜು ಕಾಗೆ ಹೇಳಿದರು.
ರವಿವಾರ ರಂದು ಉಗಾರದ ವಿಹಾರ್ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಗವಾಡ ತಾಲೂಕ ವಲಯ ಕಾರ್ಯಕ್ರಮ ಜರಗಿತು.
ಶಾಸಕ ರಾಜು ಕಾಗೆ ಮಾತನಾಡುತ್ತಾ ಸಮಾಜದಲ್ಲಿ ಜಾತೀಯತೆ ದಿನ-ದಿನಕ್ಕೆ ಹೆಚ್ಚಿಸುತ್ತಿದೆ ಇದನ್ನು ಹೋಗಲಾಡಿಸಲೇಬೇಕು. ಕೇವಲ ಹೆಣ್ಣು ಗಂಡು ಎರಡೇ ಜಾತಿಗಳು. ಇದನ್ನು ಗಮನದಲ್ಲಿ ತೆಗೆದುಕೊಂಡು ಸಮಾಜದಲ್ಲಿ ಮಹಿಳೆಯರಿಗೆ ಎಲ್ಲ ಸ್ಥಾನಮಾನಗಳು ಸಿಗಬೇಕು
ಧರ್ಮಸ್ಥಳ ಸಂಘ ಪ್ರತಿಯೊಂದು ಗ್ರಾಮಗಳ ಸ್ವಚ್ಛತೆ ಮಾಡುವ ಪೌರ ಕಾರ್ಮಿಕರನ್ನು ಸನ್ಮಾನಿಸಿ ಗೌರವದಿಂದ ನೋಡಬೇಕು ಎಂಬ ಉದ್ದೇಶದಿಂದ ಈ ಸಮಾರಂಭದಲ್ಲಿ ಅವರನ್ನು ಸತ್ಕರಿಸಿದ್ದು ಸಂತಸದ ಸಂಗತಿ ಎಂದರು
ಧರ್ಮಸ್ಥಳದ ಅಥಣಿ ಜಿಲ್ಲಾ ನಿರೀಕ್ಷಕರಾದ ಶ್ರೀಮತಿ ನಾಗರತ್ನ ಹೆಗಡೆ ಮಾತನಾಡಿ, ಧರ್ಮಸ್ಥಳದ ಡಾ. ವೀರೇಂದ್ರ ಹೆಗಡೆ ಇವರ ಉದ್ದೇಶ ನಾಡಿನ ಪ್ರತಿಯೊಬ್ಬ ಮಹಿಳೆಯರ ಸಮಸ್ಯೆಗಳು ಆಲಿಸಿ ಅವರನ್ನು ಸಂಘಟಿತಗೊಳಿಸಿ ನೆರವು ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಅಥಣಿ ಜಿಲ್ಲೆಯ ವ್ಯಾಪ್ತಿಯಲ್ಲಿ 300 ಕೋಟಿ ಹಾಗೂ ಕಾಗವಾಡ ವಲಯದಲ್ಲಿ 80 ಕೋಟಿ ರೂಪಾಯಿ ಆರ್ಥಿಕ ನೆರವು ಮಹಿಳೆಯರ ಗುಂಪಿಗಳಿಗೆ ನೀಡಿ ಅವರಿಂದ ಅಭಿವೃದ್ಧಿ ಕಾಮಗಾರಿಗಳು ಕೈಗೊಳ್ಳಲಾಗುತ್ತಿದೆ. ಗ್ರಾಮಗಳಲ್ಲಿರುವ ಸಮುದಾಯ, ದೇವಸ್ಥಾನಗಳು, ಜಿರ್ನೋಧಾರ ಗೊಳಿಸುವುದು, ಕೆರೆಗಳನ್ನು ಜೀರ್ಣೋದ್ಧಾರಗೊಳಿಸಿ ಅಲ್ಲಿಗೆ ನೀರಿನ ಸೌಕರ್ಯ ವಾಗುವಂತೆ ಮಾಡಲಾಗುತ್ತಿದೆ ಎಂದರು.
ಯೋಜನಾಧಿಕಾರಿಗಳಾದ ಸಂಜೀವ್ ಮರಾಠಿ ಮಾತನಾಡಿ ಹಮ್ಮಿಕೊಂಡ ಸಮಾರಂಭದಲ್ಲಿ ಜುಗುಳ ಗ್ರಾಮದ ಶ್ರೀ 1008 ಆದಿನಾಥ್ ದಿಗಂಬರ್ ಜೈನ್ ಮಂದಿರಕ್ಕೆ ಅಭಿವೃದ್ಧಿಗಾಗಿ 3 ಲಕ್ಷ ರೂಪಾಯಿ ದೇಣಿಗೆ ಸಂಘ ನೀಡಿದ್ದು ಸಂತಸ ಎಂದರು.
ಸುಶೀಲಾ ಬನಸೋಡೆ ಮಹಿಳೆಗೆ ಮಾಶಾಸನ ಮಂಜೂರು ಪತ್ರ ನೀಡಲಾಯಿತು
ಇಬ್ಬರು ಅಂಗವಿಕಲ ಮಹಿಳೆಯರಿಗೆ ಶೇಕಡ 50ರಷ್ಟು ರಿಯಾಯಿತಿ ದರದಲ್ಲಿ ಸೋಲಾರ್ ಝರಾಕ್ಷ ಮಶೀನ್ ನೀಡಿದರು, ಉಗಾರದ ಪುರಸಭೆ ಪೌರಕಾರ್ಮಿಕರಿಗೆ ಶಾಸಕರು ಸನ್ಮಾನಿಸಿದರು
ಕಾರ್ಯಕ್ರಮದಲ್ಲಿ ಕೃಷ್ಣ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ಶಂಕರ್ ವಾಗಮೊಡೆ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ವಿಠ್ಠಲ್ ಹಾಲಳ್ಳಿ, ಸಂಜೀವ್ ಮರಾಠಿ, ರಿಯಾನಾ ಶೇಖ, ಸುಮನ್ ಕಾಕಡೆ, ಚೈನಾಜಿ ಬಾಗೇವಾಡಿ, ಈಶ್ವರ್ ಕಾಂಬಳೆ, ಐ.ಬಿ.ಪಾಟೀಲ್, ಮಹಾವೀರ ಅಕೋಳಿ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಮಹಿಳಾ ಪ್ರತಿನಿಧಿಗಳು ಪಾಲ್ಗೊಂಡಿದ್ದರು
ಸುಕುಮಾರ ಬನ್ನೂರೆ
ಇನ್ ನ್ಯೂಸ್ ಕಾಗವಾಡ