ದೇಶದ ಇತಿಹಾಸವನ್ನು ಬರೆಯುವವರು ಯುವಕರು. ಅಂತಹ ಯುವಕರಿಗೆ, ಯುವ ಪ್ರತಿಭೆಗಳಿಗೆ ಟ್ಯಾಲೆಂಟ್ ಹೊರ ಹಾಕಲು ಜೊಲ್ಲೆ ಗ್ರುಪ್ ವೇದಿಕೆ ಕಲ್ಪಿಸಿ ಕೊಟ್ಟು ಪ್ರತಿಭೆಗಳನ್ನು ಅನಾವರಣಗೊಳಿಸಿದ್ದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ” ಎಂದು ನಿಡಸೋಸಿಯ ಸಿದ್ಧ ಸಂಸ್ಥಾನಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಹೇಳಿದರು.
ಪಟ್ಟಣದ ಆರ್ ಡಿ ಹೈಸ್ಕೂಲ್ ಮೈದಾನದಲ್ಲಿ ಆಯೋಜನೆ ಮಾಡಿದ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರ 61ನೇ ಜನ್ಮ ದಿನಾಚರಣೆ ಹಾಗೂ ಚಿಕ್ಕೋಡಿ ಟ್ಯಾಲೆಂಟ್ ಗ್ರ್ಯಾಂಡ್ ಫಿನಾಲೆಯಲ್ಲಿ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡುತ್ತಾ, “ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಶಾಸಕಿ ಶಶಿಕಲಾ ಜೊಲ್ಲೆ ದಂಪತಿಗಳಲ್ಲಿ ದೂರದೃಷ್ಠಿ ಇದೆ. ಇಂತಹ ದೂರದೃಷ್ಠಿ ಇಟ್ಟುಕೊಂಡು ಚಿಕ್ಕೋಡಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಪ್ರತಿ ವಿಧಾನಸಭಾ ಕ್ಷೇತ್ರದ ಪ್ರತಿಭೆಗಳಿಗೆ ಅವಕಾಶ ನೀಡಿದ್ದೂ ಅಲ್ಲದೇ, ಸೂಕ್ತ ಬಹುಮಾನ ನೀಡುವ ಮೂಲಕ ಜೊಲ್ಲೆ ಜೋಡಿ ಇನ್ನುಳಿದವರಿಗೆ ಆದರ್ಶರಾಗಿದ್ದಾರೆ”ಎಂದು ಕೊಂಡಾಡಿದರು.
ಈ ಸಂದರ್ಭದಲ್ಲಿ 61ನೇ ಜನ್ಮ ದಿನಾಚರಣೆಯ ನಿಮಿತ್ಯವಾಗಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಶಾಸಕಿ ಶಶಿಕಲಾ ಜೊಲ್ಲೆ ದಂಪತಿಗಳನ್ನು ನಿಡಸೋಶಿ, ಚಿಂಚಣಿ, ಚಿಕ್ಕೋಡಿ ಸೇರಿದಂತೆ ನಾಡಿನ ವಿವಿಧ ಮಠಾಧೀಶರು ವಿಶೇಷವಾಗಿ ಸನ್ಮಾನಿಸಿ ಗೌರವಿಸಿ, ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸಿದರು.
ಪೂಜ್ಯರಿಂದ ಸನ್ಮಾನ ಸ್ವೀಕರಿಸಿದ ಬಳಿಕ ಸಮಾರಂಭವನ್ನು ಉದ್ದೇಶಿಸಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರು ಮಾತನಾಡಿ, “40 ವರ್ಷಗಳ ಜನಸೇವೆಯಲ್ಲಿ ತನಗಿಂತ ತಮ್ಮೆಲ್ಲರ ಪಾತ್ರ ಹೆಚ್ಚಿದ್ದು, ಟ್ಯಾಲೆಂಟ್ ಸ್ಪರ್ಧೆಯಲ್ಲಿ ಒಂದಿಷ್ಟು ಲೋಪದೋಷಗಳಾಗಿದ್ದು, ಮುಂದಿನ ದಿನಗಳಲ್ಲಿ ಅವುಗಳನ್ನು ತಿದ್ದಿಕೊಂಡು ಪ್ರತ್ಯೇಕ ವಿಭಾಗಗಳನ್ನು ರಚಿಸುವ ಮೂಲಕ ಟ್ಯಾಲೆಂಟ್ ಸ್ಪರ್ಧೆ ಆಯೋಜನೆ ಮಾಡಲಾಗುವುದು” ಎಂದರು.
“ಹೀಗೆ ಇನ್ನು ಪ್ರತಿ ವರ್ಷವೂ ಜನ್ಮ ದಿನಾಚರಣೆಯ ನಿಮಿತ್ಯವಾಗಿ ಟ್ಯಾಲೆಂಟ್ ಸ್ಪರ್ಧೆ ಆಯೋಜನೆ ಮಾಡಲಾಗುವುದು. ಅಲ್ಲದೇ ನವೆಂಬರ್ ನಲ್ಲಿ ಕಬಡ್ಡಿ ಸ್ಪರ್ಧೆಗಳನ್ನು ಚಿಕ್ಕೋಡಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾಗುವುದು. ಹಾಗೇನೇ ಪ್ರತಿ ತಿಂಗಳು ಹೀಗೆ ಒಂದೊಂದು ಕಾರ್ಯಕ್ರಮ ಆಯೋಜನೆ ಮಾಡಲಾಗುವುದು. ನವೆಂಬರ್ ಅಥವಾ ಡಿಸೆಂಬರ್ ನಲ್ಲಿ ರಾಯಬಾಗ ಮತ್ತು ಸಂಕೇಶ್ವರದಲ್ಲಿ ಸಿಂಹ ಘರ್ಜನೆ ಎಂಬ ಬೃಹತ್ ನಾಟಕ ಪ್ರದರ್ಶನ ಮಾಡಲಾಗುವುದು ಎಂದರು.
ನಿಪ್ಪಾಣಿ ಶಾಸಕಿಯೂ, ವಿಶೇಷ ಓಲಂಪಿಕ್ ಭಾರತ್ ನ ಕರ್ನಾಟಕ ರಾಜ್ಯದ ಅಧ್ಯಕ್ಷೆ ಶಶಿಕಲಾ ಜೊಲ್ಲೆ ಅವರು ಮಾತನಾಡಿ, “ರಾಜ್ಯದಲ್ಲಿ ಸಾಕಷ್ಟು ಜನ ಬುದ್ಧಿಮಾಂಧ್ಯ ಮಕ್ಕಳಿದ್ದು, ಅಂತಹ ಬುದ್ಧಿಮಾಂಧ್ಯ ಮಕ್ಕಳಿಗೆ ವಿಶೇಷ ಓಲಂಪಿಕ್ ಭಾರತ ಮೂಲಕ ಅವಕಾಶ ನೀಡಲಾಗುವುದು. ವಿಶೇಷ ಓಲಂಪಿಕ್ ಭಾರತ ಸಂಸ್ಥೆ ಇನ್ನೂ ಹೆಮ್ಮರವಾಗಿ ಬೆಳೆಯಲಿ ಎಂದು ಹಾರೈಸಿದರು.
ಜೊಲ್ಲೆ ಹುಟ್ಟು ಹಬ್ಬ ಆಚರಣಾ ಸಮಿತಿ ಅಧ್ಯಕ್ಷ, ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಅವರು ಮಾತನಾಡಿ, ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಅವರು ಪುತ್ರ ಜ್ಯೋತಿಪ್ರಸಾದ ಪ್ರೇರಣೆಯಿಂದ ಶಾಸಕಿಯಾಗಿಯೂ, ಸಚಿವೆಯಾಗಿಯೂ ಬೆಳೆದು ನಿಂತರೆ, ಪತ್ನಿ ಶಶಿಕಲಾ ಅವರ ಪ್ರೇರಣೆ, ಪ್ರೋತ್ಸಾಹದಿಂದ ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರು ಅಭಿವೃದ್ಧಿ ಹೊಂದಿ ಲಕ್ಷಾಂತರ ಜನರ ಬದುಕಿಗೆ ದಾರಿದೀಪವಾಗಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಶೇಷ ಓಲಂಪಿಕ್ ಭಾರತ್ ನ ಕರ್ನಾಟಕದ ಪ್ರತಿನಿಧಿಗಳಾದ ಉಪಾಧ್ಯಕ್ಷ ರೂಪಸಿಂಗ್, ಪ್ರಾದೇಶಿಕ ನಿರ್ದೇಶಕ ಅಮರೇಂದರ್, ಆನಂದ ಡಿ ಸಿ, ನಾರಾಯಣ ಶೇರಿಗಾರ, ಶಾಂತಲಾ ಭಟ್, ಹಾಲಯ್ಯ ಹಿರೇಮಠ, ಶ್ರೀನಾಥ ಎ ಎನ್, ಹೀರಾವತಿ ಭಟ್, ಪ್ರೇಮನಾಥ ಉಳ್ಳಾಲ, ಕುಮಾರಿ ರಮ್ಯಾ ಸೇರಿದಂತೆ ಹಲವರನ್ನು ಜೊಲ್ಲೆ ಗ್ರುಪ್ ನಿಂದ ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಕುಡಚಿ ಮಾಜಿ ಶಾಸಕ ಪಿ. ರಾಜೀವ್, ಮುಖಂಡ ರಿಷಬ್ ಜೈನ್ ಮುಂತಾದವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಧ್ಯಾನಚಂದ ಪ್ರಶಸ್ತಿ ಪುರಸ್ಕೃತ ಸತೀಶ ಪಿಳೈ, ಏರ್ ಕಮಾಂಡರ್ ಎ ವಿ ಎಸ್ ರಾವ್, ವಿಶೇಷ ಓಲಂಪಿಕ ಭಾರತ್ ಕರ್ನಾಟಕದ ಅಮರೇಂದರ್, ಹೆಸ್ಕಾಂ ಮಾಜಿ ನಿರ್ದೇಶಕ ಮಹೇಶ ಭಾತೆ, ಜಯವಂತ ಬಾಟ್ಲೆ, ರಾಜು ಗುಂದೇಶಾ, ದುಂಡಪ್ಪ ಬೆಂಡವಾಡೆ, ಡಾ. ರಾಜೇಶ ನೇರ್ಲಿ, ಮಾರುತಿ ಅಷ್ಟಗಿ, ರವಿ ಹಂಜಿ, ಜ್ಯೋತಿಪ್ರಸಾದ ಜೊಲ್ಲೆ, ಪ್ರಿಯಾ ಜೊಲ್ಲೆ, ಎಂ ಪಿ ಪಾಟೀಲ, ಪವನ ಪಾಟೀಲ, ತಮ್ಮಣ್ಣಪ್ಪ ಪಾರಶೆಟ್ಟಿ, ಅಜಯ ಸೂರ್ಯವಂಶಿ, ಬಸವರಾಜ ಹುಂದ್ರಿ ಮುಂತಾದವರು ಉಪಸ್ಥಿತರಿದ್ದರು. ಬಸವಪ್ರಸಾದ ಜೊಲ್ಲೆ ಸ್ವಾಗತಿಸಿದರು. ರಮೇಶ ಪಾಟೀಲ, ವಿಜಯ ರಾವುತ್ ನಿರೂಪಿಸಿದರು.