ಯಾದಗಿರಿ: ಸಿದ್ದರಾಮಯ್ಯನವರ (Siddaramaiah) ಸರ್ಕಾರದ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟಿರಲ್ಲಿಲ್ಲ. ಸಿದ್ದರಾಮಯ್ಯರ ಸರ್ಕಾರ ಬಂದ್ಮೇಲೆ ಮುಸ್ಲಿಮರು ಚಿಗುರಿಕೊಂಡಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಚಿಂತಕ ಚಕ್ರವರ್ತಿ ಸೂಲಿಬೆಲೆ (Chakravarthy Sulibele) ವಾಗ್ದಾಳಿ ನಡೆಸಿದ್ರು.
ಬೈಕ್ ರ‍್ಯಾಲಿ ಮೂಲಕ ನಮೋ ಬ್ರಿಗೇಡ್ 2.0 (Namo Brigade 2.o ಯಾದಗಿರಿಗೆ ಆಗಮಿಸಿದ್ದ ವೇಳೆ ಮಾತನಾಡಿದ ಚಕ್ರವರ್ತಿ ಸೂಲಿಬೆಲೆ ಮತ್ತೊಮ್ಮೆ ಈ ದೇಶಕ್ಕೆ ನರೇಂದ್ರ ಮೋದಿ ಪ್ರಧಾನಿ ಆಗಬೇಕು ಅಂತಾ ಹೇಳಿ, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ರು. ಹಿಂದಿನ ಆಡಳಿತ ಅವಧಿಯಲ್ಲಿ ಹಿಂದೂ ಕಾರ್ಯಕರ್ತರ ಬರ್ಬರ ಹತ್ಯೆ ನಾವು ನೋಡಿದ್ದೇವೆ. ಹಿಂದೂ ಕಾರ್ಯಕರ್ತರ ಹತ್ಯೆ ಅಷ್ಟೇ ಅಲ್ಲ. ದನಗಳ ಕಳ್ಳ ಸಾಗಾಣಿಕೆ ಮಾಡುವಾಗ ಸಿಕ್ಕಾಕೊಂಡು ಮೃತಪಟ್ಟವರಿಗೆ ಹತ್ತತ್ತು ಲಕ್ಷ ಪರಿಹಾರ ಕೊಟ್ಟಿದ್ದೂ ನೆನಪಿದೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರ ಬಂದ್ಮೇಲೆ ಅನೇಕ ಕಡೆಗಳಲ್ಲಿ ಧಂಗೆಯ ರೂಪದ ವ್ಯವಸ್ಥೆ ಮಾಡಲಿಕ್ಕೆ ಹೊರಟ್ಟಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಸರ್ಕಾರದ ಮೇಲೆ ಯಾವುದೇ ನಿರೀಕ್ಷೆ ಇಲ್ಲ ಎಂದ ಚಕ್ರವರ್ತಿ ಸೂಲಿಬೆಲೆ ಅವರು ಶಿವಮೊಗ್ಗ ಕಲ್ಲೂ ತೂರಾಟ ಪ್ರಕರಣಕ್ಕೂ ಕಿಡಿ ಕಾರಿದ್ರು. ಸಿದ್ದರಾಮಯ್ಯನವರು ಮುಸ್ಲಿಮರ ಓಲೈಕೆ, ತುಷ್ಠಿಕರಣದಲ್ಲಿ ತೊಡಗಿದ್ದಾರೆ. ಅಲ್ಲಾನ ಕೃಪೆಯಿಂದ ಈ ಸರ್ಕಾರ ಬಂದಿದೆ ಅಂತ ಗೃಹ ಸಚಿವರೇ ಹೇಳಿದ್ದಾರೆ. ಹಾಗಾಗಿ ಅವರಿಂದ ಈ ಕೃತ್ಯ ಆಗಿರೋದ್ರಿಂದ ಅವರಿಗೆ ಪೂರಕವಾದ ಸರ್ಕಾರ ನಡೆಸುತ್ತಿದ್ದಾರೆ. ಇದು ಹಿಂದೂಗಳಿಗೆ ಮಾಡಿದ ದ್ರೋಹವಾಗಿದೆ. ಸಿದ್ದರಾಮಯ್ಯ, ಸರ್ಕಾರ ಹಿಂದೂಗಳಿಗೆ ಏನ್ ದ್ರೋಹ ಮಾಡ್ತಿದೆಯೋ ಅದಕ್ಕೆ ಸರಿಯಾದ ಶಾಸ್ತಿ ಅನುಭವಿಸುತ್ತೆ ಎಂದರು.