ಹುಕ್ಕೇರಿ ಹಿರೇಮಠದ ದಸರಾ ಉತ್ಸವ 2023 ನೇ ಸಾಲಿನ ಡಾ ಸ ಜ ನಾಗಲೋತಿಮಠ ಸಾಹಿತ್ಯ ರತ್ನ ಪ್ರಶಸ್ತಿಗೆ ಚಲನಚಿತ್ರ ಗೀತ ಸಾಹಿತಿ ಕವಿರತ್ನ ಡಾಕ್ಟರ್ ನಾಗೇಂದ್ರ ಪ್ರಸಾದ್ ಅವರ ಕನ್ನಡ ಚಲನಚಿತ್ರ ಗೀತೆಗಳ ಸಾಮಾಜಿಕ ಪರಿಣಾಮ ಒಂದು ಅಧ್ಯಯನ ಎಂಬ ಪಿ ಹೆಚ್ ಡಿ ಪದವಿಗಾಗಿ ಕನ್ನಡ ವಿಶ್ವವಿದ್ಯಾನಿಲಯ ಹಂಪಿ ಇದಕ್ಕೆ ಮಂಡಿಸಿದ ಕೃತಿಗೆ ಡಾ ಸ ಜ ನಾ ಸಾಹಿತ್ಯ ರತ್ನ ಪ್ರಶಸ್ತಿ ನೀಡಲಾಗುತ್ತಿದೆ ಪ್ರಶಸ್ತಿ ಮೌಲ್ಯ 25000 ನಗದು ಮತ್ತು ಪಲಕ ಶಾಲುಗಳನ್ನು ಒಳಗೊಂಡಿದೆ ಇದೆ 18 ರಂದು ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರ ಸಾನಿದ್ಯದಲ್ಲಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ ಅವರು ಪ್ರಶಸ್ತಿ ಪ್ರಧಾನವನ್ನು ಹುಕ್ಕೇರಿ ಹಿರೇಮಠದ ದಸರಾ ಉತ್ಸವದಲ್ಲಿ ಮಾಡಲಿದ್ದಾರೆ ಎಂದು ಡಾಕ್ಟರ್ ಸ ಜ ನಾ ಅವರ ಮೊಮ್ಮಗಳಾದ ಇಂಪನಾ ಸಂಜಯ ನಾಗಲೋತಿಮಠ ಅವರು ತಿಳಿಸಿದ್ದಾರೆ.
ಅವರ ಪರಿಚಯ ಇಂತಿದೆ
ಕನ್ನಡ ಚಲನಚಿತ್ರ ರಂಗದಲ್ಲಿ ಇದುವರೆಗೆ ಸರಿ ಸುಮಾರು ೩ಸಾವಿರಕ್ಕೂ ಹೆಚ್ಚು ಚಲನಚಿತ್ರ ಗೀತೆಗಳನ್ನು ರಚಿಸಿ, ಜನಮಾನಸದಲ್ಲಿ ನೆಲೆಯೂರಿರುವ ವಿ. ನಾಗೇಂದ್ರ ಪ್ರಸಾದ್ ಅವರು ಕನ್ನಡ ಸಿನಿಮಾ ರಂಗದಲ್ಲಿ ಚಿತ್ರ ಸಾಹಿತಿಗಳಾಗಿ, ಸಂಭಾಷಣಕಾರರಾಗಿ, ನಿರ್ದೇಶಕರಾಗಿ ಮನೆ ಮಾತಾದವರು. ಶ್ರೀಯುತರು ತಮ್ಮ ಕ್ಷೇತ್ರವಾದ ಚಿತ್ರಗೀತೆ ರಚನೆಯಲ್ಲಿಯೇ ಸಂಶೋಧನೆ ನಡೆಸಿದ್ದಾರೆ. ಕನ್ನಡ ವಿಶ್ವವಿದ್ಯಾಲಯ ಹಂಪಿಯ ಲಲಿತ ಕಲಾ ನಿಕಾಯಕ್ಕೆ ಇವರು ಕನ್ನಡ ಚಲನಚಿತ್ರ ಗೀತೆಗಳ ಸಾಮಾಜಿಕ ಪರಿಣಾಮ : ಒಂದು ಅಧ್ಯಯನ ಎಂಬ ವಿಷಯ ಕುರಿತು ಕಳೆದ ಐದು ವರ್ಷಗಳಿಂದ ಅಧ್ಯಯನ ನಡೆಸಿ, ವಿಶ್ವ ವಿದ್ಯಾಲಯಕ್ಕೆ ತಮ್ಮ ಡಿ. ಲಿಟ್ ಪದವಿಯ ಮಹಾ ಪ್ರಬಂಧವನ್ನು ಸಲ್ಲಿಸಿದ್ದರು. ಈ ಮಹಾಪ್ರಬಂಧವು ಪದವಿಗೆ ಮಾನ್ಯವಾಗಿ,
ವಿ. ನಾಗೇಂದ್ರ ಪ್ರಸಾದ್ ಅವರಿಗೆ ಡಾಕ್ಟರೇಟ್ ಪದವಿಯನ್ನು ಕನ್ನಡ ವಿಶ್ವವಿದ್ಯಾಲಯ ಹಂಪಿಯು ತನ್ನ ೨೯ನೇ ನುಡಿಹಬ್ಬದಲ್ಲಿ ಪ್ರದಾನ ಮಾಡಿದೆ. ಇವರ ಕಾರ್ಯಕ್ಕೆ ನಾಡಿನ ಅನೇಕ ಹಿರಿಯ ಚಲನಚಿತ್ರ ರಂಗದ ಕಲಾವಿದರು, ನಿರ್ದೇಶಕರು, ಸಂಗೀತ ನಿರ್ದೇಶಕರು, ನಾಡಿನ ಅಸಂಖ್ಯಾತ ಅಭಿಮಾನಿಗಳು ಶುಭಾಶಯಗಳನ್ನು ಕೋರಿದ್ದಾರೆ.