ಮಹಾನವಮಿಗೆ ದಿನಗಣನೆ ಆರಂಭಗೊಂಡಿದೆ. ದೇವಿಭಕ್ತರು ಆ ಆದಿಶಕ್ತಿಯನ್ನು ಭಯ ಭಕ್ತಿಯಿಂದ ಸಡಗರ ಸಂಭ್ರಮದಿಂದ ಸ್ವಾಗತಿಸಲು ಸಿದ್ದರಾಗುತ್ತಿದ್ದಾರೆ. ಇತ್ತ ದೇವಿ ಮೂರ್ತಿ ಕಲಾವಿದರು ದೇವಿ ಮೂರ್ತಿಗೆ ಫೈನಲ್ ಟಚ್ ಅಪ್ ಕೊಡುವಲ್ಲಿ ಬಿಜಿಯಾಗಿದ್ದಾರೆ. ಈ ಕುರಿತು ಇಲ್ಲಿದೆ ಡಿಟೇಲ್ಸ್…
ಇದೇ ಅಕ್ಟೋಬರ್15 ರಿಂದ ಆದಿಶಕ್ತಿ,ಪರಾಶಕ್ತಿ ಓಂ ಶಕ್ತಿ ಜಗನ್ಮಾತೆ ತುಳಜಾಭವಾನಿಯ ಆರಾಧನೆಯ ನವರಾತ್ರಿ ಆರಂಭಗೊಳ್ಳಲಿದೆ. ಇತ್ತ ಗುಮ್ಮಟನಗರಿ ಕಲಾವಿದರು ಈಗ ಫುಲ್ ಬಿಜಿಯಾಗಿದ್ದಾರೆ. ನವರಾತ್ರಿ ಆಚರಣೆ ಹಿನ್ನೆಲೆ ದೇವಿ ಮೂರ್ತಿಗಳಿಗೆ ಫೈನಲ್ ಟಚ್ ಅಪ್ ಮಾಡಲಾಗುತ್ತಿದೆ. ನಗರದ ಉಪ್ಪಲಿ ಬುರುಜ್ ಹತ್ತಿರವಿರುವ ಪ್ರಸಿದ್ಧ ಕಲಾವಿದ ಕಾಳೆ ಕುಟುಂಬಸ್ಥರು ಇದೀಗ ದೇವಿ ಮೂರ್ತಿಗಳನ್ನು ವಿವಿಧ ಬಣ್ಣಗಳ ಮೂಲಕ ಸಿಂಗರಿಸುತ್ತಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಸುಮಾರು 100 ಕ್ಕೂ ಹೆಚ್ಚು ಮೂರ್ತಿಗಳನ್ನು ತಯಾರಿಸಲಾಗಿದೆ.
ಮೊದಲಿಗೆ ರಾಜ್ಯ ಮಹಾರಾಷ್ಟ್ರದ ಸೊಲ್ಲಾಪುರ, ಕೊಲ್ಲಾಪುರ, ಉಸ್ಮನಾಬಾದ್ ಮತ್ತಿತರೆ ಸ್ಥಳಗಳಿಗೆ ತೆರಳಿ ಇಲ್ಲಿಯ ನಾಡದೇವಿ ಉತ್ಸವ ಮಂಡಳಿಗಳು ತರುತ್ತಿದ್ದವು. ಆದ್ರೆ, ಇತ್ತೀಚೆಗೆ ಕೆಲ ಕಲಾವಿದರು ಮಹಾರಾಷ್ಟ್ರ ರಾಜ್ಯಕ್ಕಿಂತ ಸುಂದರಮೂರ್ತಿ ತಯಾರಿಸುತ್ತಿರುವುದರಿಂದ ಇಲ್ಲಿಯೇ ಖರೀದಿಸುತ್ತಿದ್ದಾರೆ. ಅಲ್ಲದೇ, ಸಿಂಹಾಸನದ ಮೇಲೆ ಆಸೀನವಾಗಿರುವ, ಸಿಂಹದ ಮೇಲೆ ಸವಾರಿ, ದುಷ್ಟ ರಾಕ್ಷಸನ ಸಂಹಾರ ಮಾಡುತ್ತಿರುವ ಹಾಗೂ ಅಷ್ಟ ಭುಜಗಳನ್ನು ಹೊಂದಿರುವ ದೇವಿ ಮೂರ್ತಿಯನ್ನು ಹೇಳಿ ಮಾಡಿಸುತ್ತಿದ್ದಾರೆ. 3 ರಿಂದ 7 ಅಡಿ ಎತ್ತರದ ಮೂರ್ತಿಗಳಿಗೆ ಹೆಚ್ಚಿನ ಬೇಡಿಕೆ ಇದೆ. ಇನ್ನೂ ದೇವಿ ಮೂರ್ತಿ ತಯಾರಿಸಲು ಭಯ, ಭಕ್ತಿ ಹಾಗೂ ಮಡಿವಂತಿಕೆಯಿಂದ ಫೈನಲ್ ಟಚ್ ಕೊಡಲಾಗುತ್ತಿದೆ
ಒಟ್ನಲ್ಲಿ ಗುಮ್ಮಟನಗರಿಯಲ್ಲಿ ಜಗನ್ಮಾತೆ ಹಬ್ಬಕ್ಕೆ ಭಕ್ತರು ಭಕ್ತಿಯಿಂದ ಆರಾಧಿಸಲು ಸಿದ್ದರಾಗಿದ್ದರೆ ಇತ್ತ ಕಲಾವಿದರು ಮಾತ್ರ ಭಯ ಭಕ್ತಿ ಉಕ್ಕಿಸುವಂತಹ ಮೂರ್ತಿ ನಿರ್ಮಾಣದಲ್ಲಿ ತೊಡಗಿದ್ದಾರೆ. ಈ ಬಾರಿ ನವರಾತ್ರಿ ಹಬ್ಬ ಭಲು ಜೋರಿನಿಂದ ಆಚರಿಸುವ ಲಕ್ಷಣಗಳು ಗೋಚರಿಸುತ್ತಿವೆ.
ವಿಜಯಕುಮಾರ ಸಾರವಾಡ
ಇನ್ ನ್ಯೂಸ್
ವಿಜಯಪುರ