ಕಳೆದ ನಾಲ್ಕಾರು ದಿನಗಳಿಂದ ಹೆಸ್ಕಾಂ ಇಲಾಖೆ ವತಿಯಿಂದ ಅಸರ್ಮಕವಾಗಿ ವಿದ್ಯುತ್ ಪೂರೈಕೆವಾಗುತ್ತಿದೆ ಇದನ್ನು ಖಂಡಿಸಿ ಐನಾಪುರ್ ಹಾಗೂ ಉಗಾರ್ ಭಾಗದ ರೈತರು ಹೆಸ್ಕಾಂ ಕಚೇರಿಗೆ ತರಳಿ ಅಧಿಕಾರಿಗಳಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಹಮ್ಮಿಕೊಂಡರು.
ಗುರುವಾರ ರಂದು ಐನಾಪುರದ ಹೆಸ್ಕಾಂ ಕಚೇರಿ ಎದರು ರೈತ ಮುಖಂಡರಾದ ತಮ್ಮನ್ನಾ ಫಾರ್‍ಶೆಟ್ಟಿ, ರಾಜೇಂದ್ರ ಪೋತದಾರ, ಕುಮಾರ್ ಅಪರಾಜ, ಸಂಜೆಯ ಬಿರಡಿ ಸೇರಿದಂತೆ ಅನೇಕ ರೈತ ಮುಖಂಡರು ಅಧಿಕಾರಿಗಳಿಗೆ ಮುತ್ತಿಗೆ ಹಾಕಿ ಈ ಮೊದಲು ಪ್ರತಿದಿನ 7 ಗಂಟೆ ನಿರಂತರ ವಿದ್ಯುತ್ ಪೂರೈಕೆ ಮಾಡುತ್ತಿದ್ದೀರಿ. ಈಗ ಕೇವಲ ಮೂರು ಗಂಟೆ ವಿದ್ಯುತ್ ಪೂರೈಕೆ ಮಾಡುತ್ತಿದ್ದಿರಿ ನಮ್ಮ ಬೆಳೆಗಳು ನಾಶವಾಗುತ್ತಿದ್ದು ಈ ಬೆಳೆ ಹಾನಿಗೆ ನೀವೆ ಕಾರಣರು ಎಂದು ಹೇಳಿ ಸರ್ಕಾರದ ವಿರುದ್ಧ ತಮ್ಮ ಸಿಟ್ಟು ಹೊರ ಹಾಕಿದರು.
ರೈತ ಮುಖಂಡರಾದ ತಮ್ಮನ್ನಾ ಪಾರಶೆಟ್ಟಿ ಮಾತನಾಡಿ, ಹೆಸ್ಕಾಂ ಇಲಾಖೆ ತೆಗೆದುಕೊಂಡ ನಿರ್ಣಯ ರೈತರಿಗೆ ಅನ್ಯಾಯವಾಗಿದ್ದು ಇದನ್ನು ಕೈಬಿಟ್ಟು ಮೊದಲಿನಂತೆ ವಿದ್ಯುತ್ ಪೂರೈಕೆ ಮಾಡಬೇಕೆಂದು ಕೇಳಿಕೊಂಡರು. ಬರುವ ಸೋಮವಾರ ಸಮರ್ಪಕವಾಗಿ ವಿದ್ಯುತ್ ಪೂರೈಕೆವಾಗದೆ ಹೋದರೆ ಮಂಗಳವಾರ ರಂದು ತೀವ್ರವಾದ ಪ್ರತಿಭಟನೆ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು
.
ಹೆಸ್ಕಾಂ ಇಲಾಖೆ ಅಧಿಕಾರಿ ಡಿ.ಎ.ಮಾಳಿ ರೈತರಿಗೆ ಮಾಹಿತಿ ನೀಡಿ ಮಾತನಾಡುತ್ತ ರಾಜ್ಯದಲ್ಲಿ ವಿದ್ಯುತ್ ನಿರ್ಮಿತಿಗೆ ತೊಂದರೆವಾಗುತ್ತಿದೆ ಇದರಿಂದ ಇಲ್ಲಿಯ ರೈತರಿಗೆ ವಿದ್ಯುತ್ ಪೂರೈಕೆ ಮಾಡಲು ತೊಂದರೆವಾಗುತ್ತಿದ್ದು ಎಲ್ಲ ಗ್ರಾಮಗಳಿಗೆ ಸಮರ್ಪಕವಾಗಿ ಮುಂದಿನ ದಿನದಲ್ಲಿ ನಾಲ್ಕು ಗಂಟೆ ವಿದ್ಯುತ್ ಪೂರೈಕೆ ಮಾಡುವ ಭರವಸೆ ನೀಡಿದರು.
ಇದೇ ರೀತಿ ಮುಖಂಡರಾದ ರಾಜೇಂದ್ರ ಪೋತದಾರ, ಸಂಜೆಯ ಬಿರಡಿ ಮಾತನಾಡಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಸುರೇಶ್ ಚೌಗುಲೆ, ವಜ್ರಕುಮಾರ್ ಮಗದುಮ್, ಬಾಹುಬಲಿ ಅಳಪ್ಪನವರ್, ಬಿ.ಎ.ಘಾಳಿಮಟ್ಟಿ ಸೇರಿದಂತೆ ಅನೇಕ ರೈತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು .
ಸುಕುಮಾರ ಬನ್ನೂರೆ
ಇನ್ ನ್ಯೂಸ್ ಕಾಗವಾಡ