ದಸರಾ ಹಬ್ಬದ ನಿಮಿತ್ಯ ಉಗಾರ್ ಸ್ಪೋರ್ಟ್ಸ್ ಅಸೋಸಿಯೇಷನ್ ವತಿಯಿಂದ ಉಗಾರ್ ಶುಗರ್ ವರ್ಕ್ಸ ಸಹಕಾರದಿಂದ ಟೆನಿಸ್ ಬಾಲ್ ಹಾಗು ಕ್ರಿಕೆಟ್ ಸ್ಪರ್ಧೆಗಳು ಜರುಗೀದವು.
ಉಗಾರ ಸ್ಪೋರ್ಟ್ಸ್ ಅಸೋಸಿಯೇಷನ್ ಉಪಾಧ್ಯಕ್ಷ ವಿಕ್ರಂ ಬೋಸ್ಲೆ ಮಾತನಾಡಿ ಉಗಾರದಲ್ಲಿ ಜರುಗಿದ ಸ್ಪರ್ಧೆಯಲ್ಲಿ ಬೆಳಗಾವಿಯ ಕೆ.ಆರ್.ಶೆಟ್ಟಿ ತಂಡ ಪ್ರಥಮ ಸ್ಥಾನ ಪಡೆದುಕೊಂಡಿದ್ದು 50,000 ರೂ. ಹಾಗೂ ಟ್ರೋಫಿ ಬಹುಮಾನಾಗಿ ಪಡೆದಿದೆ. ದ್ವಿತೀಯ ಸ್ಥಾನ ಸಿಧಾಂತ ಸ್ಪೋರ್ಟ್ಸ್ ಉಗಾರ್ ಕ್ರಿಕೆಟ್ ತಂಡ 30,000 ರೂ. ಬಹುಮಾನ ಪಡೆದುಕೊಂಡಿದೆ. ತೃತೀಯ ಸ್ಥಾನ ಸಾಂಗ್ಲಿ ತಂಡ ಹಾಗೂ ನಾಲ್ಕನೇ ಸ್ಥಾನ ಗೋಕಾಕ್ ಎರಡು ತಂಡದವರು ತಲಾ 10,000 ರೂ. ಬಹುಮಾನ ಪಡೆದುಕೊಂಡಿದ್ದಾರೆ
ಉಗಾರದ ವಿಹಾರ ಕ್ರೀಡಾಂಗಣದಲ್ಲಿ ಕಳೆದ 5 ದಿನಗಳಿಂದ ಟೆನಿಸ್ ಬಾಲ್ ಕ್ರಿಕೆಟ್ ಸ್ಪರ್ಧೆಗಳು ಜರುಗಿದವು ಸ್ಪರ್ಧೆಯಲ್ಲಿ ಕರ್ನಾಟಕ ಹಾಗೂ ಮಹಾರಾಷ್ಟ್ರದ 50 ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು ಎಂದರು.
ಬೆಳಗಾವಿಯ ಕೆ.ಆರ್.ಶೆಟ್ಟಿ ತಂಡದ ಪ್ರಮುಖರಾದ ಚಂದನ್ ಶೆಟ್ಟಿ ಮಾತನಾಡಿ, ನಾನು ಬಹಳಷ್ಟು ಸ್ಥಳದಲ್ಲಿ ಸಕ್ಕರೆ ಕಾರ್ಖಾನೆಗಳು ನೋಡಿದ್ದೇನೆ. ಆದರೆ ಉಗಾರ್ ಸಕ್ಕರೆ ಕಾರ್ಖಾನೆ, ಮಾಲೀಕರಾದ ಚಂದನ ಶಿರಗಾಂವ್ಕರ ಕ್ರೀಡೆಗಾಗಿ ನೀಡಿರುವ ಸಹಕಾರ ಅಪಾರವಿದೆ. ನಮ್ಮ ಆಟಗಾರರು ಒಳ್ಳೆಯ ಪ್ರದರ್ಶನ ನೀಡಿ ಪ್ರಥಮ ಬಹುಮಾನ ಪಡೆದುಕೊಂಡಿದ್ದಾರೆ. ಉಗಾರದ ಸಂಯೋಜಕರು ಬಹಳಷ್ಟು ಸಹಕಾರ ನೀಡಿದ್ದಾರೆ ಎಂದರು .
ಕಾರ್ಯಕ್ರಮ ಯಶಸ್ವಿಗೊಳಿಸಲು ಉಗಾರ ಪಟ್ಟಣ ಸ್ಪೋರ್ಟ್ಸ್ ಅಸೋಸಿಯೇಷನ್ ಅಧ್ಯಕ್ಷ ಉದಯ ಪಾಟೀಲ್, ವಿಕ್ರಂ ಭೋಸ್ಲೆ, ವಲ್ಲಭ ಕಾಗೆ, ಸಂಜೀವ್ ವಡ್ಡರ, ಸಚಿನ್ ಜಗತಾಪ, ಸಮದ ಅತ್ತಾರ, ಯೋಗೇಶ್ ಕುಂಬಾರ, ಸಾಗರ್ ಕಾಂಬಳೆ, ಭರತ್ ಮಗದುಮ, ಚೇತನ ಕದಮ, ರಘು ಗಸ್ತಿ, ಹರೀಶ ಗಣೇಶವಾಡಿ, ಶಾಂತಗೌಡ ಪಾಟೀಲ್, ಮಹೇಶ್ ಬುವಾ, ಮುಂತಾದವರು ಸಹಕರಿಸಿದರು.
ಉಗಾರ ಸಕ್ಕರೆ ಕಾರ್ಖಾನೆಯ ಅಧಿಕಾರಿ ರಾಜೇಂದ್ರ ಬೆಳಂಕಿ ಹಾಲು ಉದ್ಯೆಮಿ ವಿಲಾಸ ಪಾಟೀಲ ಹಾಗೂ ಇತರರು ಸಂಯೋಜಿಸಿದರು.
ಸುಕುಮಾರ ಬನ್ನೂರೆ
ಇನ್ ನ್ಯೂಸ್ ಕಾಗವಾಡ