Uncategorized

೯೬ ನೇ ನಾಡಹಬ್ಬವನ್ನು ಅದ್ದೂರಿಯಾಗಿ ಆಚರಿಸೋಣ: ಹೇಚ್ ಬಿ ರಾಜಶೇಖರ

Share

ಅಕ್ಟೊಬರ ೧೫ ರಂದು ೯೬ ನೇ ನಾಡಹಬ್ಬವನ್ನು ಕಿತ್ತೂರು ಚೆನ್ನಮ್ಮ ವೃತ್ತದ ಕನ್ನಡ ಸಾಹಿತ್ಯ ಭವನದ ಪ್ರಾಂಗಣದಲ್ಲಿ ಆಯೋಜನೆ ಮಾಡಲಾಗಿದೆ ಎಂದು ಅಧ್ಯಕ್ಷ ಹೇಚ್ ಬಿ ರಾಜಶೇಖರ ಅವರು ತಿಳಿಸಿದರು

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರತಿವರ್ಷದಂತೆ ಈ ವರ್ಷ ಈ ನಾಡಹಬ್ಬವನ್ನು ಆಚರಣೆ ಮಾಡಲಾಗುತ್ತದೆ ಈ ನಾಡಹಬ್ಬ ಆಡಂಬರದ ಹಬ್ಬವಲ್ಲ ನಮ್ಮ ನಾಡು ನುಡಿ ಕಲೆ ಗತವೈಭವ ,ಕಲೆ ಸಂಸ್ಕೃತಿಯಿಂದ ಕೂಡಿದೆ ಯುವ ಜನತೆ ಇದರ ಬಗ್ಗೆ ಅರಿತುಕೊಳ್ಳುವ ಅವಶ್ಯಕತೆ ಇದೆ ಆ ಉದ್ದೇಶದಿಂದ ಈ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದರು.


ಸಿ ಕೆ ಜೋರಾಪುರ್ ಮಾತನಾಡುತ್ತ ನಾಡಹಬ್ಬ ಹಕ್ಕ ಬುಕ್ಕರಿಂದ ಚಾಲನೆ ಆಗಿದೆ ನಂತರ ಮೈಸೂರಿನಲ್ಲಿ ಆಚರಣೆ ಮಾಡಲಾಯಿತು ೧೯೨೭ ರಲ್ಲಿ ಶಿವಲಿಂಗ ರುದ್ರ ದೇಸಾಯಿ ಅವರಿಂದ ಬೆಳಗಾವಿಯಲ್ಲಿ ಚಾಲನೆ ಆಯಿತು ಆ ಸಂದರ್ಭದಲ್ಲಿ ಅವರೇ ಸಂಪೂರ್ಣ ಖರ್ಚು ವೆಚ್ಚ ಬಾರಿಸಿದ್ದರು ಈ ನಡ ಹಬ್ಬಕ್ಕೆ ಹಲವರು ಸಹಕರಿಸಿದ್ದಾರೆ ಎಂದರು .

ಸುದ್ದಿಗೋಷ್ಠಿಯಲ್ಲಿ ವಕೀಲರಾದ ಅರ ಬಿ ಪಾಟೀಲ್ ,ಡಾ ಹೆಚ್ ಐ ತಿಮಾಪೂರ ,ವಿಜಯ ಹಿರೇಮಠ ,ಸೋಮಲಿಂಗ ಮಾವಿನಕಟ್ಟಿ ,ಪ್ರಿಯಾ ಪುರಾಣಿಕ ಉಪಸ್ಥಿತರಿದ್ದರು

Tags:

Let's celebrate 96th Nadahabba with grandeur: H B Rajasekhara