Uncategorized

ಶ್ರೀ ಕ್ಷೇತ್ರ ಕವಲಗುಡ್ಡ ಸಿದ್ದಾಶ್ರಮದಲ್ಲಿ ಆರ್ಚ್‍ಕರಿಗೆ ಸಂಸ್ಕಾರ ಶಿಬಿರ

Share

ಸೋಧರ್ಮ ಟ್ರಸ್ಟ್ ಬೆಂಗಳೂರು, ಬೆಂಗಳೂರಿನ ದೇವಾಲಯ ಸೌಂವರ್ಧನ ಸಮಿತಿ, ಸಿದ್ದಾಶ್ರಮ ಕವಲುಗುಡ್ಡ ಇವರ ಸಂಯುಕ್ತ ಆಶ್ರಯದಲ್ಲಿ ರಾಜ್ಯದ ಆರು ಜಿಲ್ಲೆಗಳಿಂದ ಸರ್ವಧರ್ಮದ ಅರ್ಚಕರಿಗೆ ಸನಾತನ ಸಂಸ್ಕಾರ 18 ದಿನಗಳ ಶಿಬಿರ ಜರಗಿತು.

ಕವಲಗುಡ್ಡ ಸಿದ್ದಾಶ್ರಮದಲ್ಲಿ ಅಮರೇಶ್ವರ ಮಹಾರಾಜರ ದಿವ್ಯ ಸಾನಿಧ್ಯದಲ್ಲಿ ಸೆಪ್ಟೆಂಬರ್ 24 ರಿಂದ ಗುರುವಾರ ದಿನಾಂಕ 12 ರವರೆಗೆ ಬೆಳಗಾವಿ, ವಿಜಯಪುರ, ಬಾಗಲಕೋಟ, ಗದಗ್, ಸಾಂಗ್ಲಿ, ಬದಾಮಿ ಮುಂತಾದ ಜಿಲ್ಲೆಗಳಿಂದ 44 ಬಾಲಕರು ಆರ್ಚಕರ ಸಂಸ್ಕಾರ ಶಿಬಿರದಲ್ಲಿ ಪಾಲ್ಗೊಂಡು ಶಿಬಿರ ಯಶಸ್ವಿಗೊಳಿಸಿದರು .

ಸಿದ್ದಯೋಗ ಆಶ್ರಮದ ಅಮರೇಶ್ವರ ಮಹಾರಾಜರು ಶಿಬಿರದ ಬಗ್ಗೆ ಮಾತನಾಡುತ್ತಾ , ಕವಲಗುಡ್ಡ ಆಶ್ರಮದಲ್ಲಿ ಸಂಸ್ಕಾರ ಶಿಬಿರ ಯಶಸ್ವಿಯಾಗಿ ಜರುಗಿದೆ, ಈ ಶಿಬಿರ ಯಶಸ್ವಿಗೊಳಿಸಲು ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಕೆ.ಎಸ್.ಈಶ್ವರಪ್ಪಾ ಹಾಗೂ ಅವರ ಸುಪುತ್ರರಾದ ಕಾಂತೇಶ್ ಈಶ್ವರಪ್ಪಾ ಇವರು ಶಿಬಿರದ ಸಂಪೂರ್ಣ ಖರ್ಚು ವೆಚ್ಚ ನೋಡಿಕೊಂಡಿದ್ದು, ಅವರ ಇಚ್ಛೆಯಂತೆ ಸಮಾಜದಲ್ಲಿ ಯುವಕರು ದುಷ್ಟಚಟಗಳಿಗೆ ಅಂಟಿಕೊಳ್ಳಬಾರದು ಅವರಿಗೆ ಒಳ್ಳೆಯ ಸಂಸ್ಕಾರವಾಗಬೇಕು ಅವರಿಂದ ಸನಾತನ ಧರ್ಮದ ಸೇವೆವಾಗಬೇಕೆಂಬ ವಿಚಾರದಿಂದ ಅವರು ಮಾಡಿರುವ ಈ ವ್ಯವಸ್ಥೆ ಎಲ್ಲ ಸ್ವಾಮೀಜಿಗಳು ಸಹಕಾರ ನೀಡಿ ಶಿಬಿರ ಯಶಸ್ವಿವಾಗಿದೆ ಎಂದು ಅಮರೇಶ್ವರ ಮಹಾರಾಜರು ಹೇಳಿ ಎಲ್ಲರನು ಸನ್ಮಾನಿಸಿದರು.

ಕರ್ನಾಟಕ ರಾಜ್ಯ ದೇವಾಲಯ ಸೌಂವರ್ಧನ ಸಮಿತಿ ಅಧ್ಯಕ್ಷ ಮನೋಹರ್ ಮಠದ ಮಾತನಾಡಿ, ಕವಲಗುಡ್ಡ ಸಿದ್ದಾಶ್ರಮದಲ್ಲಿ 18 ದಿನಗಳಿಂದ ಬೇರೆ-ಬೇರೆ ಸಮಾಜದ 44 ಬಾಲಕರಿಗೆ ಅರ್ಚಕ ಸಂಸ್ಕಾರ ಶಿಬಿರದಲ್ಲಿ ನೀಡಲಾಗಿದೆ. ಇದರ ಉದ್ದೇಶ ದೇವಾಲಯದ ಆಧಮ ಪೂಜೆ ಮಾಡುವ ಬಗ್ಗೆ ಅನೇಕ ಸಂಸ್ಕಾರಗಳು ನೀಡಲಾಗಿದೆ. ದೇವಾಲಯ ಅಂದರೆ ಅಧ್ಯಾತ್ಮಿಕ, ಶೈಕ್ಷಣಿಕ, ಸಾಮಾಜಿಕ ಸಂಸ್ಕಾರ ಮಂದಿರಗಳು ಆಗಬೇಕು ಇದು ಮೂಲ ಉದ್ದೇಶ ಇಲ್ಲಿಗೆ ಸಫಲವಾಗಿದೆ ಎಂದರು.

ರಾಷ್ಟ್ರೀಯ ಸ್ವಯಂಸೇವಕ ಉತ್ತರ ಪ್ರಾಂತ ಸಂಚಾಲಕ ಅರವಿಂದ್‍ರಾವ್ ದೇಶಪಾಂಡೆ ಮಾತನಾಡಿ, ಭಾರತ ದೇಶ ಸಂಸ್ಕಾರಯುಕ್ತ ದೇಶ, ಇಲ್ಲಿಯ ಗುಡಿಗಳು, ಮಂದಿರಗಳು ಇಲ್ಲಿಯ ಜನರ ಜೀವನಾಡಿ ಪ್ರತಿಯೊಬ್ಬರು ಆಧ್ಯಾತ್ಮಿಕ ಹಾಗೂ ದೇವರ ಮೇಲೆ ನಂಬಿಕೆ ಇಟ್ಟವರು. ಅರ್ಚಕರಿಗೆ ಒಳ್ಳೆಯ ಸಂಸ್ಕಾರ ನೀಡಿ ಮಂದಿರಗಳಲ್ಲಿ ದೇವರ ಬಗ್ಗೆ ಭಕ್ತಿ ಮೂಡಿಸುವುದು ಮುಖ್ಯ ಕರ್ತವ್ಯವಾಗಿದೆ. ಯಾವುದೇ ಗುಡಿಗಳಲ್ಲಿ ದುಷ್ಟ ಚಟುಗಳಿಗೆ ಆಸ್ಪದಗಳು ನೀಡಬೇಡಿ ಎಂದು ಹೇಳಿದರು

ಈ ಸಂದರ್ಭದಲ್ಲಿ ಬಸವರಾಜ ಬಾಳಿಕಾಯಿ ಆಮಸಿದ್ದ ವಡಿಯರ, ಸಿದ್ದೇಶ್ವರ ಶರಣರು, ಬಸವರಾಜ ಶಾಸ್ತ್ರಿ ಹಣಗಲ, ಪ್ರಭೂ ಮುಕರೆ, ಶ್ರೀಶೈಲ ಸಂಬೋಜಿ, ಶಿವಶಂಕರ ಲಾಳ್ಳಿ, ಹನಮಂತ ಸಂಬೋಜಿ, ದೇವಪ್ಪಾ ಮಾಲಗಾಂವೆ, ಸುನೀಲ ಹೇಳವಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು

ಸುಕುಮಾರ ಬನ್ನೂರೆ
ಇನ್ ನ್ಯೂಸ್ ಕಾಗವಾಡ

Tags:

Sanskar camp for priests at Sri Kshetra Kavalagudda Siddashram