ಏಡ್ಸ್ ಪೀಡಿತರಿಗೆ ಗುಂಪು ಸಭೆ ಜರುಗಿಸಿ ಬೆಂಬಲ ನೀಡುವದು ಅವಶ್ಯಕವಾಗಿದೆ ಎಂದು ಬೆಳಗಾವಿಯ ಆಶ್ರಯ ಫೌಂಡೆಶನ್ ಮುಖ್ಯಸ್ಥೆ ಶ್ರೀಮತಿ ನಾಗರತ್ನಾ ಹೇಳಿದರು.
ಅವರು ಇಂದು ಹುಕ್ಕೇರಿ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ HIV ಪೀಡಿತರಿಗೆ ಬೆಂಬಲ ಗುಂಪು ಸಭೆ ಮತ್ತು ಆಹಾರ ಧಾನ್ಯ ವಿತರಣೆ ಮತ್ತು ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹುಕ್ಕೇರಿ ಸಾರ್ವಜನಿಕ ಆಸ್ಪತ್ರೆ ICTC, Link ART, ವಿಭಾಗ ಮತ್ತು ಆಶ್ರಯ ಫೌಂಡೇಶನ್ ಹಾಗೂ ರೈಟ್ಸ ಲಿಮಿಟೆಡ್ ಸಹಯೋಗದಲ್ಲಿ ಹಮ್ಮಿಕೊಂಡ ಕಾರ್ಯಕ್ರಮವನ್ನು ತಾಲೂಕಾ ವೈದ್ಯಾಧೀಕಾರಿ ಡಾ, ಉದಯ ಕುಡಚಿ ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿದರು.
ಏಡ್ಸ ಪೀಡಿತರನ್ನು ಉದ್ದೇಶಿಸಿ ಮಾತನಾಡಿದ ಶ್ರೀಮತಿ ನಾಗರತ್ನಾ ಹುಕ್ಕೇರಿ ತಾಲೂಕಿನ ಏಡ್ಸ ಪೀಡಿತರಿಗೆ ಗುಂಪು ಸಭೆಗಳನ್ನು ಜರುಗಿಸಿ ಮನೊ ಸ್ಥೈರ್ಯ ತುಂಬುವ ಕಾರ್ಯ ಸಮಾಜ ಮಾಡಬೇಕಾಗಿದೆ ಕಾರಣ ಇಂದು ಚಿಕ್ಕೋಡಿಯ ವಿಹಾನ SVYM ಸಂಸ್ಥೆ, ICTC Link ಮತ್ತು ART ಸಂಸ್ಥೆಯ ಹಣಕಾಸಿನ ನೇರವಿನಿಂದ ಆಹಾರ ಧಾನ್ಯ ವಿತರಣೆ ಮತ್ತು ಕಾನೂನು ನೇರವಿನ ಮಾಹಿತಿ ನೀಡಲಾಗುತ್ತಿದೆ ಎಂದರು
ತಾಲೂಕಾ ಆರೋಗ್ಯ ಅಧಿಕಾರಿ ಉದಯ ಕುಡಚಿ ಮಾತನಾಡಿ ಬೆಳಗಾವಿಯ ಆಶ್ರಯ ಫೌಂಡೇಶನ್ ಮುಖ್ಯಸ್ಥೆ ನಾಗರತ್ನಾ ರವರು ಸ್ವತಃ ಎಚ್ ಆಯ್ ವಿ ಪೀಡಿತರಾಗಿ ಸೋಂಕಿತರಿಗೆ ಆಶ್ರಯ ಸಂಸ್ಥೆ ಮೂಲಕ ಆರೋಗ್ಯ , ಆಹಾರ, ಉದ್ಯೋಗ, ಶಿಕ್ಷಣ ನೀಡುವ ಮೂಲಕ ಸಾಮಾಜಿಕ ಕಾರ್ಯ ಮಾಡುತ್ತಿದ್ದಾರೆ ಅವರ ಕಾರ್ಯ ಶ್ಲಾಘನೀಯ ಎಂದರು
ವೇದಿಕೆ ಮೇಲೆ ಮುಖ್ಯವೈದ್ಯಾಧಿಕಾರಿ ಮಹಾಂತೇಶ ನರಸನ್ನವರ, ನ್ಯಾಯವಾದಿ ಅನೀತಾ ಕುಲಕರ್ಣಿ, ಸುನಿಲ ದೊಡಮನಿ, ಉಪಸ್ಥಿತರಿದ್ದರು.
ನ್ಯಾಯವಾದಿ ಆಶಾ ಸಿಂಗಾಡಿ ಮಾತನಾಡಿ ಎಚ್ ಆಯ್ ವಿ ಪೀಡಿತರಿಗೆ ಕಾನೂನು ಬಗ್ಗೆ ಮಾಹಿತಿ ಅವಶ್ಯವಾಗಿದ್ದು ಅವರು ಸಹ ಸಮಾಜದ ಒಂದು ಅಂಗ ಎಂದು ನಾವೇಲ್ಲರೂ ಪರಿಗಣಿಸಬೇಕು ಎಂದರು
ನಂತರ ಸೋಂಕಿತರಿಗೆ ಉಚಿತ ಆಹಾರ ಧಾನ್ಯಗಳನ್ನು ವಿವರಿಸಿದರು.
ಈ ಸಂದರ್ಭದಲ್ಲಿ ಆಪ್ತ ಸಮಾಲೋಚಕರಾದ ಎನ್ ಎಚ್ ಪತ್ತಾರ ಹರೀಶಕುಮಾರ ಆರ್, ದುಂಡಪ್ಪಾ ಬೀರಗೌಡರ, ಲಕ್ಕಣ್ಣ ಕೌಜಲಗಿ,ಬಸವರಾಜ ಮರಲಿಂಗನವರ ಹಾಗೂ ಏಡ್ಸ ಪೀಡಿತರು ಉಪಸ್ಥಿತರಿದ್ದರು.