ಬೆಳಗಾವಿಯ ಸರ್ಕ್ಯೂಟ್ ಹೌಸನಲ್ಲಿ ನಡೆದ ರೈತ ಸಭೆಯಲ್ಲಿ ಶಾಸಕ ಜಿ ಟಿ ದೇವೇಗೌಡ ಭಾಗಿಯಾಗಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರೊಂದಿಗೆ ದುರವಾಣಿಯಲ್ಲಿ ಮಾತನಾಡಿ ರೈತರ ಕಷ್ಟಕ್ಕೆ ಸ್ಪಂದಿಸುವಂತೆ ಮನವಿ ಮಾಡಿಕೊಂಡರು.
ನಗರದ ಸರ್ಕ್ಯೂಟ್ ಹೌಸನಲ್ಲಿ ನಡೆದ ರೈತ ಸಭೆಯಲ್ಲಿ ಶಾಸಕ ಜಿ ಟಿ ದೇವೇಗೌಡ ಬೆಳಗಾವಿಯ ರೈತರೊಂದಿಗೆ ಚರ್ಚಿಸಿ ಅವರ ಸಮಸ್ಯೆ ಆಲಿಸಿ ಸ್ಥಳದಲ್ಲಿಯೇ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ದೂರವಾಣಿ ಮೂಲಕ ಕರೆ ಮಾಡಿ ರೈತರಿಗೆ ಆದ ನಷ್ಟ ದ ಬಗ್ಗೆ ಪರಿಹಾರ ಕೊಡಿಸುವಂತೆ ಸಲಹೆ ನೀಡಿದರು .
ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ದೂರವಾಣಿಯಲ್ಲಿ ಮಾತನಾಡುತ್ತಾ ನಿಮ್ಮ ಜೊತೆಗೆ ನಾವೇ ಇದ್ದೇವೆ ನಮ್ಮ ಸರ್ಕಾರದಲ್ಲಿ ರೈತರಿಗೆ ಹತ್ತುಹಲವಾರು ಯೋಜನೆ ನೀಡಿದ್ದೇವೆ ಶೀಘ್ರವೇ ಬೆಂಗಳೂರಿನಲ್ಲಿ ನಿಮ್ಮ ಜೊತೆ ಸಭೆ ಮಾಡುತ್ತೇನೆ ಎಂದು ಆಶ್ವಾಸನೆ ನೀಡಿದರು .
ಶಾಸಕ ಜಿ ಟಿ ದೇವೇಗೌಡ ಮಾತನಾಡುತ್ತಾ ಕಳೆದ ವರ್ಷಗಳಿಂದ ಸೋಲಾರನ್ನು ಉಪಯೋಗಿಸಿಕೊಂಡು ೩ ಫೇಸ್ ೭ ತಾಸು ವಿದ್ಯುತ ನೀಡುತ್ತಿದ್ದರು ಆದರೆ ಇವತ್ತು ಲೋಡ್ ಸೆಟ್ಟಿಂಗ್ ಮಾಡಿಕೊಂಡು ಪಂಪ ಸಟಗಳಿಗೆ ೨ ಗಂಟೆ ಕರೆಂಟ್ ನೀಡುತ್ತಿದ್ದಾರೆ ೧೦೦೦೦ ರೂಪಾಯಿ ನೀಡಿದರೆ ಕರೆಂಟ್ ನೀಡುತ್ತಿದ್ದರು ಇವಾಗ ೪ ,೫ ಲಕ್ಷ ರೈತರ ಖರ್ಚು ಮಾಡುವ ಸ್ಥಿತಿ ನಿರ್ಮಾಣವಾಗಿದೆ . ಬೈಟ್
ರಾಜ್ಯ ಸರ್ಕಾರದವರು ಕೇಂದ್ರ ಸರ್ಕಾರದ ಕಡೆ ಬೆರಳು ತೋರಿಸುವ ಕೆಲಸ ಮಾಡುತ್ತಿದ್ದಾರೆ ಸೆಂಟ್ರಲ್ ಪವರ್ ಬ್ರಿಡ್ ಗೆ ಹಣ ಕಟ್ಟಿದರೆ ಹೆಚ್ಚುವರಿ ವಿದ್ಯುತ ಸಿಗುತ್ತಿದೆ ಸರಕಾರದಿಂದ ರೈತರಿಗೋಸ್ಕರ ಕರೆಂಟ್ ಖರೀದಿ ಮಾಡಲು ಹಣ ಇಡೋದಾಗಲಿ ರೈತರಿಗೆ ಬರ ಬಂದಿದೆ ಎಂಬ ಅರಿವಿಲ್ಲ , ಪ್ರತಿವರ್ಷ ಕೃಷಿ ಇಲಾಖೆಯಿಂದ ರೈತರಿಗೆ ವಿವಿಧ ಯಂತ್ರೋಪಕರಣಗಳನ್ನು ನೀಡಲಾಗುತ್ತಿತ್ತು ಆದರೆ ಈ ಕಾಂಗ್ರೇಸ ಸರಕಾರ ಬಂದಮೇಲೆ ಯಾವುದೇ ರೈತ ಪರ ಕಾರ್ಯಗಳಾಗಿಲ್ಲ ಎಂದು ಆರೋಪಿಸಿದರು .
ರೈತ ಮುಖಂಡ ಅರವಿಂದ ಮಾತನಾಡುತ್ತಾ ರೈತರು ಬರಗಾಲ ಕೋವಿಡ ಕಾರಣಗಳಿಂದ ನಮ್ಮ ರೈತರು ತತ್ತರಗೊಂಡಿದ್ದಾರೆ ಸುಮಾರು ೧೦ ರಿಂದ ೧೫ ವರ್ಷಗಳಿಂದ ಮುಂಗಾರು ಮಳೆ ಇದ್ದಾಗ ಹಿಂಗಾರಿ ಮಳೆ ಇಲ್ಲಾ ,ಹಿಂಗಾರಿ ಮಳೆ ಬಂದಾಗ ಮುಂಗಾರು ಮಳೆ ಇಲ್ಲ ಸಾಕಷ್ಟು ಬ್ಯಾಂಕುಗಳಿಂದ ರೈತರು ಸಾಲ ಪಡೆದುಕೊಂಡಿದ್ದಾರೆ ಸರಿಯಾಗಿ ಮಳೆಯಾಗದೆ ಸಾಲ ಹರಿಯಲು ಆಗುತ್ತಿಲ್ಲ ಹಾಗಾಗಿ ಸರ್ಕಾರ ರೈತರ ಸಾಲಮನ್ನಾ ಮಾಡಬೇಕೆಂದು ಆಗ್ರಹಿಸಿದರು .
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ,ಅಡಿವೆಪ್ಪ ,ಈರಣ್ಣಾ ,ಧರ್ಮರಾಜ ಗೌಡರ ,ಮಹಾಂತೇಶ ಕಮತೆ ,ಬಸನಗೌಡಾ ಪಾಟೀಲ ,ಬಿರಪ್ಪಾ ದೇಶನೂರ ,ಬಿ ಎಸ ಬೊಗುರ ,ರಂದ್ರಗೌಡಾ ಪಾಟೀಲ ಸೇರಿದಂತೆ ಹಲವು ರೈತ ಮುಖಂಡರು ಭಾಗಿಯಾಗಿದ್ದರು