Uncategorized

ಇಸ್ರೇಲ್ ವಾತಾವರಣ ಬಿಚ್ಚಿಟ್ಟ ಕೃಷಿ ವಿವಿ ಪ್ರಾಧ್ಯಾಪಕ ಡಾ.ಸುಮೇಶ್

Share

ಹವಾಮಾನ ಶಾಸ್ತ್ರ ಕುರಿತು ತರಬೇತಿ ಪಡೆಯುವುದಕ್ಕಾಗಿ ಇಸ್ರೇಲ್ ದೇಶದ ಜೇರುಸೇಲಂ ನಗರದ ಹೆಬ್ರು ವಿಶ್ವವಿದ್ಯಾಲಯಕ್ಕೆ ತೆರಳಿದ್ದ ಧಾರವಾಡ ಕೃಷಿ ವಿಶ್ವವಿದ್ಯಾಲಯ ವ್ಯಾಪ್ತಿಯ ವಿಜಯಪುರ ಸಂಶೋಧನಾ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ.ಸುಮೇಶ್ ಅವರು ಅಲ್ಲಿನ ಸ್ಥಿತಿಗತಿ ಕುರಿತು ಮಾಹಿತಿ ಬಿಚ್ಚಿಟ್ಟಿದ್ದಾರೆ.

ಇಸ್ರೇಲ್ ಹಾಗೂ ಪ್ಯಾಲೆಸ್ತೀನ್ ನ ಹಮಾಸ್ ಉಗ್ರರ ನಡುವೆ ಯುದ್ಧ ಆರಂಭವಾಗಿದ್ದರಿಂದ ಅವರ ತರಬೇತಿ ನಿಂತು ಡಾ.ಸುಮೇಶ್ ಅವರು ಜೇರುಸೇಲಂ ಪ್ರದೇಶದಲ್ಲಿ ಸಿಲುಕಿಕೊಂಡಿದ್ದರು.

ಇದೀಗ ಅವರನ್ನು ಅಲ್ಲಿಂದ ಭಾರತಕ್ಕೆ ಕರೆತರಲಾಗುತ್ತಿದೆ. ನಾಳೆ ಅವರು ಏರ್‌ಪೋರ್ಟ್‌ಗೆ ತೆರಳಿ ಅಲ್ಲಿಂದ ಭಾರತಕ್ಕೆ ಬರಲಿದ್ದಾರೆ. ಜೇರುಸೇಲಂ ಸಿಟಿ ಸಹಜ ಸ್ಥಿತಿಗೆ ಮರಳುತ್ತಿದೆ. ನನ್ನ ರಿಟರ್ನ್ ಟಿಕೆಟ್ ಈಗಾಗಲೇ ಸಿದ್ಧವಾಗಿದೆ. ಇಲ್ಲಿ ಎಲ್ಲವೂ ಸಹಜ ಸ್ಥಿತಿಗೆ ಮರಳುತ್ತಿದೆ. ಇನ್ನೆರಡು ದಿನದಲ್ಲಿ ನಾನು ವಾಪಸ್ ಬರಲಿದ್ದೇನೆ ಎಂದು ಅಲ್ಲಿ ಸ್ಥಿತಿಗತಿ ಕುರಿತು ವಿವರಣೆ ನೀಡಿದ್ದಾರೆ.

Tags:

Dr. Sumesh Professor of Agriculture University who revealed the atmosphere of Israel