ಹುಕ್ಕೇರಿ ನಗರದ ಗುಲಾಬ್ ಷಾ ಟೇಕ್ಕೆಯ ಬಾಬಾಸಾಹೇಬ ಉರಸ್ ಆಚರಿಸಲಾಯಿತು ಬೆಳಗಿನ ಜಾವ ಉರುಸ್ ಕಮಿಟಿ ಸದಸ್ಯರು , ಬಾವಾಗಳು ಮತ್ತು ಮೌಲಾನಗಳು ಗಲೀಫ್ ಏರಿಸಿ ಸಂದಲ್ ಪ್ರಾರ್ಥನೆ ಮಾಡಿದರು.
ನಂತರ ಸಾಯಂಕಾಲ ಹೋಸ ಬಸ್ ನಿಲ್ದಾಣದ ಹತ್ತಿರದ ಪೈಗಂಬರ ದರ್ಗಾಕ್ಕೆ ಪೂಜೆ ಸಲ್ಲಿಸಿ ಮೆರವಣೆಗೆ ಮೂಲಕ ಗಲೀಫ್ ,ನೈವೇದ್ಯ ಅರ್ಪಿಸಿದರು.
ಡಿ ಜೆ ಸೌಂಡಿಗೆ ಯುವಕರು ಕುಳಿದು ಕುಪ್ಪಳಿಸಿದರು.
ಮಾದ್ಯಮಗಳೊಂದಿಗೆ ಮಾತನಾಡಿದ ಅಬ್ದುಲ್ ಮಕಾನದಾರ ಸುಮಾರು ವರ್ಷಗಳ ಇತಿಹಾಸ ಹಿಂದಿದ ಬಾಬಾಸಾಹೇಬರಿಗೆ ಇಂದೂ ಮುಸ್ಲಿಂ ಬಾಂಧವರು ಇಷ್ಟಾರ್ಥ ಸಿದ್ದಿಗಾಗಿ ಪ್ರತಿ ಗುರುವಾರ ವಿಷೇಶ ಪೂಜೆ ನೆರವೇರಿಸುತ್ತಾರೆ. ಪುರಾತನ ಆಲದ ಮರದ ಆಶ್ರಯದಲ್ಲಿ ಇರುವ ದರ್ಗಾಕ್ಕೆ ಭಕ್ತರು ಮತ್ತು ಜನಪ್ರತಿನಿಧಿಗಳು ಜಿರ್ಣೋದ್ದಾರೆ ಮಾಡುವದು ಅವಶ್ಯಕತೆ ಇದೆ ಎಂದರು
ಈ ಸಂದರ್ಭದಲ್ಲಿ ಕಲಿಂ ಮಕಾನದಾರ, ಇಸ್ಮಾಯಿಲ್ ಮಕಾನದಾರ,ರಮಜಾನ್ ಮುಜಾವರ, ಕಾಶಿಂ ಮಕಾನದಾರ, ಶೌಕತ್ ಮಕಾನದಾರ, ಕೌಸರ ಮಕಾನದಾರ, ಹನೀಫ್ ಮುಲ್ಲಾ, ಅಖೀಲ ಮಕಾನದಾರ, ಅಬ್ದುಲ್ ಮಕಾನದಾರ, ರಾಜು ಜಮಾದಾರ ಮೊದಲಾದ ಪಂಚ ಕಮಿಟಿ ಸದಸ್ಯರು ಉಪಸ್ಥಿತರಿದ್ದರು.
ರಾತ್ರಿ ಸಾರ್ವಜನಿಕರಿಗೆ ಮಹಾಪ್ರಸಾದ , ಮತ್ತು ವಿವಿಧ ಮನರಂಜನೆ ಕಾರ್ಯಕ್ರಮಗಳು ಜರುಗಿದವು