Uncategorized

ಬಗೆ ಹರಿಯದ ಡೋಣಿ‌ ನದಿ‌ ಪಾತ್ರದ ರೈತರ ಗೋಳು: ಕ್ರಮ‌ಕೈಗೊಳ್ಳಬೇಕಿದೆ ಜಿಲ್ಲಾಡಳಿತ ಜನಪ್ರತಿನಿಧಗಳು

Share

ಒಂದೆಡೆ ಇದ್ದ ನೀರನ್ನು ತಮಿಳುನಾಡಿಗೆ ಬಿಟ್ಟಿದ್ದರಿಂದ ಕಾವೇರಿ ಕಣಿಗೆ ರೈತರು ಹೋರಾಟ ಮಾಡ್ತಿದ್ದಾರೆ. ಇತ್ತ ಇನ್ನೊಂದೆಡೆ ನದಿಯಲ್ಲಿ ನೀರೆ ಇಲ್ಲದೆ ಕೃಷ್ಣಾ ಕಣಿವೆ ಭಾಗದ ರೈತರು ಪರದಾಡುವಂತಾಗಿದೆ. ಒಂದು ಕಾಲದಲ್ಲಿ ಪಂಚ ನದಿಗಳ ಬೀಡು ಎನಿಸಿಕೊಂಡ ವಿಜಯಪುರ ಜಿಲ್ಲೆಯಲ್ಲೀಗ ಬರ ತಾಂಡವ ಆಡುತ್ತಿದೆ. ಮಳೆಗಾಲವೇ ಮುಗಿಯುತ್ತ ಬಂದಿದ್ರೂ ಸರಿಯಾಗಿ ಮಳೆ ಆಗದ್ದರಿಂದ ವಿಜಯಪುರ ಜಿಲ್ಲೆಯಲ್ಲಿ ಹರಿಯುವ ಡೋಣಿ ನದಿ ಬರಿದಾಗಿದೆ. ಇದುವರೆಗೂ ಹನಿ ನೀರು ಕಾಣದ ನದಿ ಸಂಪೂರ್ಣವಾಗಿ ಬತ್ತಿಹೋಗಿದೆ. ಇನ್ನು ನದಿಯಲ್ಲಿ ಹೂಳು ತುಂಬಿದ್ದರಿಂದ ಸ್ವಲ್ಪವೇ ಮಳೆಯಾದ್ರೂ ನದಿ ಉಕ್ಕಿ ಹರಿದು ರೈತರ ಜಮೀನುಗಳಲ್ಲಿ ಪ್ರವಾಹ ಉಂಟು ಮಾಡುತ್ತದೆ. ಹೀಗಿದ್ದು ಈ ನದಿಯ ಭಾಗದ ಜನರಿಗೆ ನ್ಯಾಯವೇ ಸಿಗದಂತಾಗಿದೆ. ಈ ಕುರಿತಾದ ಒಂದು ವಿಶೇಷ ವರದಿ ಇಲ್ಲಿದೆ ನೋಡಿ…

ಕಾವೇರಿ ಕಣಿವೆಯಲ್ಲಿ ಹೋರಾಟ..! ಡೋಣಿ ನದಿ ಭಾಗದಲ್ಲಿ ನೀರಿಲ್ಲದೆ ಪರದಾಟ..! ಹೌದು ಇದ್ದ ನೀರನ್ನು ರಾಜ್ಯ ಸರ್ಕಾರ ತಮಿಳುನಾಡಿಗೆ ಬಿಟ್ಟಿರುವುದರಿಂದ ಆ ಭಾಗದಲ್ಲಿ ಹೋರಾಟಗಳು ನಡೆಯುತ್ತಿವೆ. ಇತ್ತ ಹನಿ ನೀರು ಇಲ್ಲದೆ ಡೋಣಿ ನದಿ ಭಾಗದ ರೈತರು ಗೋಳಾಡುತ್ತಿದ್ದಾರೆ. ಡೋಣಿ ಹೊಳೆಸಾಲಿನಲ್ಲಿ ಫಲವತ್ತಾದ ಭೂಮಿಗಳಿದ್ದು ಸ್ವಲ್ಪ ಮಳೆಯಾದ್ರೂ ಭರ್ಜರಿ ಬೆಳೆ ತೆಗೆಯುತ್ತಾರೆ ಇಲ್ಲಿನ ರೈತರು. ಆದ್ರೆ ಈ ಬಾರಿ ಮಳೆ ಆಗದ್ದರಿಂದ ಬೆಳೆಯೂ ಇಲ್ಲ, ಅಲ್ಲದೆ ನದಿಯಲ್ಲಿ ಹನಿ ನೀರೂ ಎಲ್ಲ ಎಂಬಂತಾಗಿದೆ. ಮಹಾರಾಷ್ಟ್ರದಲ್ಲಿ ಹುಟ್ಟಿ ವಿಜಯಪುರ ಜಿಲ್ಲೆಯಲ್ಲಿ ಹರಿದು ನೆರೆಯ ರಾಯಚೂರಿನ ಮೂಲಕ ಕೃಷ್ಣಾ ನದಿಯನ್ನು ಸೇರುತ್ತದೆ ಈ ಡೋಣಿ ನದಿ. ಆದ್ರೆ ಈ ಬಾರಿ ಮಳೆ ಇಲ್ಲದ್ದರಿಂದ ನದಿಯಲ್ಲಿ ನೀರೇ ಹರಿದಿಲ್ಲ. ಅಲ್ಲದೆ ಡೋಣಿ ನದಿಯಲ್ಲಿ ಸಾಕಷ್ಟು ಹೂಳು ತುಂಬಿಕೊಂಡಿದ್ದು, ಹೂಳು ತೆಗೆಯುವಂತೆ ಈ ಭಾಗದ ರೈತರ ಹಲವಾರು ಬಾರಿ ಹೋರಾಟ ಮಾಡಿದ್ರೂ ಪ್ರಯೋಜನವಾಗಿಲ್ಲ. ಹಿಂದೆ ವಿಜಯಪುರ ‌ಜಿಲ್ಲೆಯ ಸಾರವಾಡ ಗ್ರಾಮದಲ್ಲಿ ವಿಜಯಪುರ ನಗರದ ಡಿಸಿ ಕಚೇರಿ‌ ವರೆಗೂ ಇಡೀ ಗ್ರಾಮಸ್ಥರು ಹೋರಾಟಗಾರರು ಸೇರಿ‌ಪಾದಯಾತ್ರೆ ನಡೆಸುವ ಮೂಲಕ‌ ದೋಣಿ ನದಿಯಲ್ಲಿನ‌ ಹೂಳನ್ನು ತೆಗೆಯಬೇಕು‌ ಎಂದು ಜಿಲ್ಲಾಧಿಕಾರಿ ಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಆದರೆ ಆ ರೈತರ ಮನವಿಗೆ ಮಾತ್ರ ಯಾವುದೇ ಪ್ರಯೋಜನವಾಗಿಲ್ಲ. ಹಿಂದೆ ಪ್ರಧಾನಿ‌ ನರೇಂದ್ರ ಮೋದಿ ಅವರು‌ಸಹಿತ ಇದೇ ಸಾರವಾಡ ಗ್ರಾಮದ ದೋಣಿ ನದಿಯ ಪಕ್ಕದಲ್ಲೇ ನಡೆದ ಚುನಾವಣಾ ಪ್ರಚಾರ ಸಭೆಗೆ ಆಗಮಿಸಿದ್ದರು, 2018 ರಲ್ಲಿ ಅಂದು ಪ್ರಧಾನಿ ಅವರು ಬಂದಾಗ ಅವರ ಗಮನಕ್ಕೂ ದೋಣ ನದಿಯ ಹೂಳಿನ ವಿಚಾರ ತರಲಾಗಿತ್ತು ಆದರೆ ಅದು ಯಾವುದೇ ಪ್ರಯೋಜನವಾಗಲಿಲ್ಲ, ಇನ್ನೂ ‌ಆಡಳಿತಾರೂಡ ಕಾಂಗ್ರೆಸ್ ಪಕ್ಷಕ್ಕೂ ಈ ಹುಳಿನ ವಿಚಾರವಾಗಿ ಹಲವು ಬಾರಿ ಮನವಿ ಸಲ್ಲಿಸಿದರು ಪ್ರಯೋಜನವಾಗುತ್ತಿಲ್ಲ…

 

ಮೊದಲೆಲ್ಲ ನೂರಾರು ಕ್ವಿಂಟಲ್ ನಷ್ಟು ಜೋಳ, ಗೋಧಿ ಸೇರಿದಂತೆ ಇತರೆ ಧವಸ, ಧಾನ್ಯಗಳನ್ನು ಬೆಳೆಯುತ್ತಿದ್ದ ದೋಣಿ ನದಿ‌ ಪಕ್ಕದ ರೈತರು. ಭೂಮಿಯ ಫಲವತ್ತಾದ ಮಣ್ಣು ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದರಿಂದ ಇದೀಗ ಬಂಜರಾಗಿದ್ದು, ಕ್ವಿಂಟಲ್ ಜೋಳ ಬೆಳೆಯದಂತಾಗಿವೆ. ವಿಜಯಪುರ ‌ಜಿಲ್ಲೆಯಲ್ಲಿ ಮಳೆಯಾಗದದಿದ್ದರೂ ಮಹಾರಾಷ್ಟ್ರ ದಲ್ಲಿ ಮಳೆ ಬಂದರೆ ಸಾಕು ಏಕಾ ಏಕಿ ದೋಣಿ ನದಿಯಲ್ಲಿ ನೀರು ಹರಿದು ಬರುತ್ತದೆ, ಇದರಿಂದ ನದಿ ಪಕ್ಕದ ರೈತರ ಜಮೀನಿಗೆ‌ ನೀರು ನುಗ್ಗಿ ರೈತರು ಬೆಳೆದ ಬೆಳೆಗಳು ಸಂಪೂರ್ಣವಾಗಿ ಕೊಚ್ಚಿಕೊಂಡು ಹೊಗುತ್ತದೆ. ಜೊತೆಗೆ ರೈತರ ಜಮೀನಿನಲ್ಲಿದ್ದ ಫಲವತ್ತಾದ ಮಣ್ಣು ಸಹಿತ‌

ಡೋಣಿ ನದಿಯಲ್ಲಿ ಹೂಳು ತುಂಬಿಕೊಂಡಿದ್ದು, ಸಾಕಷ್ಟು ಮುಳ್ಳುಕಂಟಿಗಳು ಬೆಳೆದಿದ್ದರಿಂದ ನದಿಗೆ ನೀರು ಬಂದಾಗ ನದಿ ಪಾತ್ರದಲ್ಲಿ ಮಾತ್ರ ಹರಿಯದೆ ನದಿಯ ದಿಕ್ಕೇ ಬದಲಾಗಿ ಎರ್ರಾಬಿರ್ರಿಯಾಗಿ ರೈತರ ಜಮೀನುಗಳಲ್ಲಿ ನೀರು ನುಗ್ಗಿ ಭಾರೀ ಪ್ರವಾಹ ಉಂಟಾಗಿ ಅಕ್ಕಪಕ್ಕದ ಜಮೀನುಗಳೀಗೆ ನೀರು ನುಗ್ಗುತ್ತದೆ. ಇದರಿಂದಾಗಿ ನದಿಯುದ್ದಕ್ಕೂ ಇಕ್ಕೆಲಗಳಲ್ಲಿರುವ ರೈತರ ಲಕ್ಷಾಂತರ ಎಕರೆ ಭೂಮಿ ಪ್ರವಾಹಕ್ಕೊಳಗಾಗಿ, ಜಮೀನಿನಲ್ಲಿನ ಬೆಳೆ ಹಾಗೂ ಮಣ್ಣು ಕೊಚ್ಚಿಕೊಂಡು ಹೋಗುತ್ತದೆ. ಇದರಿಂದಾಗಿ ನದಿಯ ಇಕ್ಕೆಲಗಳಲ್ಲಿನ ಸಾವಿರಾರು ರೈತರು ನದಿಯಿಂದ ಸಮಸ್ಯೆ ಅನುಭವಿಸುವಂತಾಗಿದೆ. ಹೀಗಾಗಿ ಈ ನದಿಯಲ್ಲಿನ ಹೂಳು ತೆಗೆದರೆ ಸರಿಯಾದ ದಿಕ್ಕಿನಲ್ಲಿ ನದಿ ಹರಿಯುತ್ತದೆ. ಅಲ್ಲದೆ ಹೂಳು ತೆಗೆಯುವುದರಿಂದ ನದಿ ಆಳವಾಗಿದ್ದು, ಬೇಸಿಗೆ ಸಮಯದಲ್ಲಿ ನೀರಿನ ಸಮಸ್ಯೆಯೂ ಆಗೋದಿಲ್ಲ. ಈ ಕುರಿತು ಹೋರಾಟ ಮಾಡಿದ್ದೇ ಬಂತು ಸರ್ಕಾರಗಳು ಇತ್ತ ಗಮನ ಹರಿಸಿಲ್ಲ. ಇನ್ನು ಕಾವೇರಿ ಕಣಿವೆಯಲ್ಲಿ ಅನ್ಯಾಯ ಆದಾಗ ನಾವು ಸೇರಿದಂತೆ ಇಡಿ ಕರ್ನಾಟಕದ ಜನತೆ ಹೊರಾಟಕ್ಕೆ ಇಳಿಯುತ್ತಾರೆ. ಆದ್ರೆ ಈ ಭಾಗದಲ್ಲಿ ರೈತರಿಗೆ ಸಮಸ್ಯೆ ಆದಾಗ ದಕ್ಷಿಣ ಕರ್ನಾಟಕದ ರೈತರು ಬೆಂಬಲಕ್ಕೆ ನಿಲ್ಲಬೇಕಿದೆ…

ಡೋಣಿಯಲ್ಲಿ ನೀರಿಲ್ಲದೆ, ಸರಿಯಾಗಿ ಮಳೆ ಬಾರದೆ ಈರುಳ್ಳಿ, ತೊಗರಿ, ಮೆಕ್ಕೆಜೋಳ ಸೇರಿದಂತೆ ಇತರೆ ಬೆಳೆಗಳೆಲ್ಲ ಒಣಗುತ್ತಿವೆ. ಮತ್ತೊಂದೆಡೆ ಮಳೆ ಬಂದ್ರೆ ಪ್ರವಾಹ ಭೀತಿಯಿಂದ ನದಿಯ ಆಸುಪಾಸಿನ ರೈತರು ಚಿಂತೆಗೀಡಾಗಿದ್ದಾರೆ. ಹೀಗಾಗಿ ಸಂಭಂದಿತ ಇಲಾಖೆಗಳು ಸರ್ಕಾರದ ಜನಪ್ರತಿನಿಧಿಗಳು ರೈತರ ಸಹಾಯಕ್ಕೆ ಬರಬೇಕಿದೆ. ದಶಕಗಳಿಂದಲೇ ದೋಣಿ ನದಿ‌ ಪಾತ್ರದ ರೈತರು ಹೋರಾಟ ಮಾಡುತ್ತಿದ್ದಾರೆ. ಇನ್ನೂ‌ದರೂ‌ ಅಧಿಕಾರಿಗಳು ಜನಪ್ರತಿನಿಧಿಗಳು ಈ ಕುರಿತು ಲಕ್ಷ ವಹಿಸಿ ಜನರ ಸಮಸ್ಯೆ ಯನ್ನು ಪರಿಹರಿಸಬೇಕಿದೆ…

ವಿಜಯಕುಮಾರ ಸಾರವಾಡ,
ಇನ್ ನ್ಯೂಸ್
ವಿಜಯಪುರ.

Tags: