ರಾಯಬಾಗ ತಾಲೂಕಿನ ಇಟನಾಳ ಗ್ರಾಮದ ಆಗ್ನಿವೀರರಾದ ಯೋಧರಿಗೆ ಯುವ ಮುಖಂಡ ಮುತ್ತಪ್ಪ ಡಾಂಗೆ ಹಾಗೂ ಬಳಗದಿಂದ ಸತ್ಕರಿಸಿ ಅಭಿನಂದಿಸಲಾಯಿತು.
ಇಟನಾಳ ಗ್ರಾಮದ ಸಂಗೊಳ್ಳಿ ರಾಯಣ್ಣ ಉಣ್ಣೆ ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು ಹಾಗೂ ಯುವ ಮುಂಡರು ಆದ ಮುತ್ತಪ್ಪ ಡಾಂಗೆ ಅವರ ಬಳಗದಿಂದ ಅಗ್ನಿವೀರರಾಗಿ ಆಯ್ಕೆಯಾದ ಶಿವಬಸು ಡಾಂಗೆ ಹಾಗೂ ಅರ್ಜುನ ಮಾರುತಿ ಮಾರಾಪೂರೆ ಅವರನ್ನು ಹೂಮಾಲೆ ಹಾಕಿ ಶಾಲು ಹೊದಿಸಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಭಾವಚಿತ್ರ ನೀಡಿ ಸತ್ಕರಿಸಿ ಅಭಿನಂದಿಸಿದರು.
ನಂತರ ಮಾತನಾಡಿದ ಮುತ್ತಪ್ಪ ಡಾಂಗೆ ಇದೇ ವರ್ಷ ನಡೆದ ಅಗ್ನಿವೀರ ಆಯ್ಕೆ ಪ್ರಕ್ರಿಯೆಯಲ್ಲಿ ನಮ್ಮ ಗ್ರಾಮದಿಂದ ಎರಡು ಜನ ಯೋಧರಾಗಿ ಆಯ್ಕೆಯಾಗಿದ್ದು ಶಿವಬಸು ಡಾಂಗೆ ಆಯ್ಕೆಯಾಗಿ ಜಬಲಪೂರದಲ್ಲಿ ತರಬೇತಿ ಮುಗಿಸಿಕೊಂಡು ನೀಮು ಎಂಬಲ್ಲಿ ಸೇವೆಗೆ ನಿಯೋಜನೆಗೊಂಡರೆ, ಅರ್ಜುನ ಮಾರುತಿ ಮಾರಾಪೂರೆ ಇವರು ಹೈದ್ರಾಬಾದದನಲ್ಲಿ ತರಬೇತಿ ಪಡೆದು ಕೋಲ್ಕತ್ತಾದಲ್ಲಿ ಸೇವೆಗೆ ನಿಯೋಜನೆಗೊಂಡಿದ್ದು ನಮ್ಮ ಒಂದು ಹಳ್ಳಿಯಿಂದ ಒಂದೇ ಪ್ರಯತ್ನದಲ್ಲಿ ಎರಡು ಜನ ಅಗ್ನಿವೀರರಾಗಿ ಸೇವೆಗೆ ಆಯ್ಕೆಯಾಗಿರುವುದು ನಮ್ಮ ಗ್ರಾಮಕ್ಕೆ ಹೆಮ್ಮೆ ಮತ್ತು ಕೀರ್ತಿ ತಂದಿದ್ದಾರೆ ಅವರನ್ನು ಸತ್ಕರಿಸಲು ತುಂಬಾ ಖುಷಿ ತಂದಿದೆ ಎಂದರು.
ಈ ಸಂದರ್ಭದಲ್ಲಿ ಯುವ ಮುಖಂಡ ಮುತ್ತಪ್ಪ ಡಾಂಗೆ, ವಿವೇಕ ಮಾರಾಪೂರೆ, ಸಿದ್ದಪ್ಪ ಬ್ಯಾಕೂಡ, ಭೀಮಶಿ ಮಾರಾಪೂರ, ಲಕ್ಷ್ಮಣ ಭಂಗಿ, ಮಲಕಾರಿ ಪೂಜಾರಿ, ಸಿದ್ದಪ್ಪ ಅರಭಾವಿ ಹಾಗೂ ಇತರರು ಉಪಸ್ಥಿತರಿದ್ದರು