65000 ಮಕ್ಕಳಿಗೆ ಅಕ್ಷರ ದಾಸೋಹವನ್ನು ಮಾತ್ರ ಶ್ರೀಮಠ ಮಾಡುತ್ತಿಲ್ಲ ಬೆಳಗಾವಿ ಜಿಲ್ಲೆಯ ಲಕ್ಷಾಂತರ ಕನ್ನಡಿಗರಿಗೆ ಬೆಳಗಾವಿಯಲ್ಲಿ ಹೋಳಿಗೆ ಊಟವನ್ನ ಮಾಡಿಸುವುದರ ಮುಖಾಂತರ ನಾಡ ಪ್ರೇಮವನ್ನ ಬೆಳೆಸಿಕೊಂಡಿರುವ ಮಠ ಹುಕ್ಕೇರಿ ಹಿರೇಮಠವೆಂದು ಬೆಳಗಾವಿ ಜಿಲ್ಲಾಧಿಕಾರಿಗಳಾದ ನಿತೀಶ ಪಾಟೀಲ ಅವರು ಹುಕ್ಕೇರಿ ಹಿರೇಮಠದ ದಸರಾ ಉತ್ಸವದ ಸಾಂಪ್ರದಾಯಿಕ ದಸರಾ ಉತ್ಸವಕ್ಕೆ ದೀಪ ಪ್ರಜ್ವಲನೆ ಮಾಡುವುದರ ಮುಖಾಂತರ ಹೇಳಿದರು
ನಂತರ ಮಾತನಾಡಿದ ಅವರು ಮೈಸೂರಿನ ನಂತರದಲ್ಲಿ ಹುಕ್ಕೇರಿ ಹಿರೇಮಠದ ದಸರಾ ಅದು ವೈಶಿಷ್ಠ್ಯಪೂರ್ಣವಾಗಿ ನಡೆದುಕೊಂಡು ಬರುತ್ತಿರುವುದು ನಾವು ಕೇಳುತ್ತಿದ್ದೆವು ಇವತ್ತು ದಸರಾ ಉತ್ಸವವನ್ನು ಉದ್ಘಾಟಿಸುವ ಸೌಭಾಗ್ಯ ನನಗೆ ದೊರಕಿರುವುದು ಪೂರ್ವ ಜನ್ಮದ ಸುಕೃತ ಶ್ರೀಗಳು ನಮ್ಮ ಜಿಲ್ಲಾಡಳಿತಕ್ಕೂ ಮಾರ್ಗದರ್ಶನ ಮಾಡುತ್ತಾ ಎಲ್ಲರಿಗೆ ಮಾದರಿಯಾಗಿದ್ದಾರೆ ಎಂದರು .
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯುವ ದುರೀಣ ಪವನ ರಮೇಶ ಕತ್ತಿ ಅವರು ಮಾತನಾಡುತ್ತಾ ಹುಕ್ಕೇರಿ ಹಿರೇಮಠಕ್ಕೆ ಎಲ್ಲಾ ಸಮುದಾಯದವರು ಎಲ್ಲಾ ಸಂಪ್ರದಾಯದವರು ಆಗಮಿಸುವುದರ ಮುಖಾಂತರ ಇದು ಎಲ್ಲರ ನಡುವೆ ಭಾವೈಕ್ಯತೆಯ ಬೆಸುಗೆಯಾಗಿದೆ ಎಂದರು .
ಸಾನಿಧ್ಯ ವಹಿಸಿ ಮಾತನಾಡಿದ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿಯವರು ಒಂಬತ್ತು ದಿನಗಳ ವರೆಗೆ ನಡೆಯುತ್ತಿರುವ ದಸರಾ ಉತ್ಸವದಲ್ಲಿ ವೈಶಿಷ್ಟ್ಯ ಪೂರ್ಣ ಕಾರ್ಯಕ್ರಮಗಳು ಜರಗುತ್ತವೆ ಭಕ್ತಾದಿಗಳು ಭಾಗಿಯಾಗುವುದರ ಮುಖಾಂತರ ಕಾರ್ಯಕ್ರಮಕ್ಕೆ ಶೋಭೆ ತರಬೇಕು ಎಂದರು .
ಧರ್ಮ ದ್ವಜಾರೋಹಣವನ್ನ ತಾಲೂಕಿನ ದಂಡಾಧಿಕಾರಿಗಳಾದ ಮಂಜುಳಾ ನಾಯಿಕ ನೆರವೇರಿಸಿದರು
ಬಂದಿರುವ ಅತಿಥಿಗಳಿಗೆ ಫಲ ತಾಂಬೂಲ ನೀಡಿ ದಸರಾ ಉತ್ಸವಕ್ಕೆ ಆಹ್ವಾನಿಸಿ ಮಹಾವೀರ ಸಮೂಹ ಉದ್ಯೋಗ ಸಂಸ್ಥೆಯ ಅಧ್ಯಕ್ಪ ಮಹಾವೀರ ನಿಲಜಗಿ ಅವರು ಎಲ್ಲರನ್ನು ಸ್ವಾಗತಿಸಿದರು .
ಶಾಲಾ ಶಿಕ್ಷಣ ಇಲಾಖೆಯ ಜಿ ಡಿ ಯಾದ ಗಜಾನನ ಮನ್ನಿಕೇರಿಯವರು ಯಾಗ ಮಂಟಪ ಉದ್ಘಾಟನೆ ಮಾಡಿ ಶುಭ ಕೋರಿದರು
ಕಾರ್ಯಕ್ರಮದಲ್ಲಿ ಬೆಳಗಾವಿ ಸ್ಮಾರ್ಟ್ ಸಿಟಿ ಎಂ ಡಿ ಅಫ್ರಿನ್ ಬಾನು ಬಳ್ಳಾರಿ ಹಾಗು ಹುಕ್ಕೇರಿಯ ಸಿಪಿಐ ಮಹಾಂತೇಶ ಬಸ್ಸಾಪೂರ ,ಹುಕ್ಕೇರಿಯ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭಾವತಿ ಪಾಟೀಲ ,ಉಪಯೋಜನಾ ಸಮನ್ವಯ ಅಧಿಕಾರಿ ಪ್ರಕಾಶ ಹಿರೇಮಠ , ರೇವತಿ ಪಾಟೀಲ ಪುರಸಭೆ ಸದಸ್ಯರು ಊರಿನ ಗಣ್ಯ ಮಾನ್ಯರು ಉಪಸ್ಥಿತರಿದ್ದರು.