ಕಬ್ಬಿಣದ ಲಿಂಕ್ಗಳನ್ನು ಕಳ್ಳತನ ಮಾಡಿದ ಮೂವರು ಆರೋಪಿಗಳನ್ನು ಗರಗ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಧಾರವಾಡ ಸಾರಸ್ವತಪೂರದ ನರಸಪ್ಪ ದುರಗಪ್ಪ ಶೃಂಗೇರಿ, ಮಂಜುನಾಥ, ಮಾರುತಿ ಸೋಮಲಾರ ಮತ್ತು ಕಲಘಟಗಿಯ ಜ್ಯೋತಿಬಾ ಪರಶುರಾಮ ಗೋಂದಕರ ಬಂಧಿತ
ಆರೋಪಿತರಿಂದ ಅಂದಾಜು 65 ಸಾವಿರ ರೂಪಾಯಿ ಮೌಲ್ಯದ 82 ಕಬ್ಬಿಣದ ಲಿಂಕ್ ಗಳನ್ನು ಮತ್ತು ಒಂದು ಬೈಕ್ ಜಪ್ತಿ ಮಾಡಲಾಗಿದೆ. ಆರೋಪಿಗಳು ಬೇಲೂರು ಕೈಗಾರಿಕಾ ಪ್ರದೇಶದಲ್ಲಿನ ಪದ್ಮಜಾ ಇಂಡಸ್ಟ್ರೀಸ್ ನಲ್ಲಿ ಕಬ್ಬಿಣದ ಲಿಂಕ್ಗಳನ್ನು ಕಳ್ಳತನ ಮಾಡಿದ್ದರು.
ಈ ಸಂಬಂಧ ತನಿಖೆ ಕೈಕೊಂಡಿದ್ದ ಪಿಎಸ್ಐ ಪ್ರಕಾಶ ಮತ್ತು ಸಿಬ್ಬಂದಿ ಆರೋಪಗಳನ್ನು ಬಂಧಿಸುವಲ್ಲಿ ಯಶಸ್ವಿ ಯಾಗಿದ್ದಾರೆ.
ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಒಪ್ಪಿಸಿದ್ದಾ