ಬ್ರಿಟಿಷರಿಗೆ ಸಿಂಹ ಸ್ವಪ್ನವಾದ ಕ್ರಾಂತಿವೀರರಾಣಿ ಕಿತ್ತೂರು ರಾಣಿ ಚನ್ನಮ್ಮನ ತವರೂರು ಕಾಕತಿಯಲ್ಲಿ ಕಿತ್ತೂರು ಉತ್ಸವ 2023 ಅದ್ದೂರಿಯಾಗಿ ಜರುಗಿದ ಕಾರ್ಯಕ್ರಮವನ್ನು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಉದ್ಘಾಟಿಸಿದರು
ಕಾಕತಿಯ ಸರಕಾರಿ ಕನ್ನಡ ಶಾಲಾ ಮುಂಭಾಗದಲ್ಲಿ ಜರುಗಿದ ಕಿತ್ತೂರು ಉತ್ಸವ 2023 ಮೊದಲಿಗೆ ನಗರದಲ್ಲಿ ಕಿತ್ತೂರ ಚನ್ನಮ್ಮಳ ಹಾಗು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ವೇಷದಲ್ಲಿ ಮಕ್ಕಳು ಮೆರವಣಿಗೆಯಲ್ಲಿ ಭಾಗಿಯಾಗಿದ್ದಾರೆ ನಮ್ಮ ಸಂಸ್ಕ್ರತಿಯಂತೆ ಮಹಿಳೆಯರು ಮೈತುಂಬಾ ಸೀರೆಯನ್ನುಟ್ಟು ತಲೆಮೇಲೆ ಸೆರಗು ಹಾಕಿಕೊಂಡು ತುಂಬಿದ ಕೊಡ ಹೊತ್ತು ಸಂತಸದಲ್ಲಿ ಭಾಗಿಯಾಗಿದ್ದು ಕಂಡುಬಂತು ಶೋಭಾಯಾತ್ರೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಪೂಜ್ಯ ಶ್ರೀ ರಾಚಯ್ಯ ಮಹಾಸ್ವಾಮಿಗಳು ಭಾಗಿಯಾಗಿದ್ದರು ಈ ಸಮಯದಲ್ಲಿ ಚನ್ನಮ್ಮಳ ಹಾಗು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿಗೆ ಮಾಲಾರ್ಪಣೆ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು .
ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಪೂಜ್ಯ ಶ್ರೀ ರಾಚಯ್ಯ ಮಹಾಸ್ವಾಮಿಗಳು ಕಿತ್ತೂರು ಉತ್ಸವದಲ್ಲಿ ಭಾಗಿಯಾಗಿದ್ದು ಖುಷಿವಿಚಾರ ಇವತ್ತು ಚನ್ನಮ್ಮನ ಕೋಟೆಯ ದ್ವಾರಬಾಗಿಲು ಮತ್ತು ಕೋಟೆಯನ್ನು ಅಭಿವೃದ್ದಿ ಪಡಿಸಲು ಮುಂದಾದ ಸಚಿವರ ಕಾರ್ಯ ಶ್ಲಾಘನೀಯ ಕೋಟೆಯನ್ನು ರಾಷ್ಟೀಯ ಪ್ರವಾಸಿತಾಣವಾಗಿ ಮಾಡಬೇಕು ಸಚಿವರು ಅಧಿಕಾರ ಅವಧಿಯಲ್ಲಿ ಕೆಲಸ ಮಾಡಲಿ ಕಾರ್ಯಕ್ರಮ ತುಂಬಾ ಅಚ್ಚುಕಟ್ಟಾಗಿ ನೆರವೇರಿದೆ ಕಿತ್ತೂರು ರಾಣಿ ಚನ್ನಮ್ಮಾಜಿ ಉತ್ಸವ ಸಮಿತಿ ತುಂಬಾ ವೈಭವದಿಂದ ಕಾರ್ಯಕ್ರಮ ನೆರವೇರಿಸಿದೆ ಎಂದರು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸಮಾರಂಭ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಪ್ರತಿ ವರ್ಷದಂತೆ ಜಿಲ್ಲಾ ಪಂಚಾಯತ ,ಜಿಲ್ಲಾಡಳಿತ ಗ್ರಾಮ ಪಂಚಾಯತ ,ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಅಡಿಯಲ್ಲಿ ವೀರರಾಣಿ ಕಿತ್ತೂರು ರಾಣಿ ಚನ್ನಮ್ಮನ ಉತ್ಸವ ಕಿತ್ತೂರದಿಂದ ಆರಂಭವಾಗುತ್ತಿದೆ ಪ್ರತಿವರ್ಷ ಕಿತ್ತೂರು ಕಾಕತಿಯಲ್ಲಿ ಬೆಂಗಳೂರುರಿನಲ್ಲಿ ಶೋಬಾ ಯಾತ್ರೆ ಆರಂಭಿಸಿ ಕಿತ್ತೂರಿನಲ್ಲಿ ಭವ್ಯ ಪರಂಪರೆ ಹೋರಾಟದ ಐತಿಹಾಸಿಕ ಕ್ಷಣಗಳನ್ನು ನೆನಸಿಕೊಳ್ಳುವ ಮೂಲಕ ಕಾರ್ಯಕ್ರಮ ಮಾಡಲಾಗುತ್ತದೆ,ನಾವು ಕಿತ್ತೂರ ಉತ್ಸವವನ್ನು ಕಾಕತಿಯಲ್ಲಿ ಮಾಡುವ ಉದ್ದೇಶ ಚನ್ನಮ್ಮಾಜಿ ನಮ್ಮ ಊರಿನವಳು ಎಂಬುದು ಹೆಮ್ಮೆ ಅಂತಹ ನಾಡಿನಲ್ಲಿ ಜನಸಿದ ನಾವು ದನ್ಯರು ಅವರಿಂದ ನಾವೆಲ್ಲ ಬೆಳಕನ್ನು ನೋಡುತ್ತಿದ್ದೇವೆ ಈ ಉತ್ಸವ ನಮಗೆಲ್ಲ ಆದರ್ಶ ಎಂದರು .
ಬೆಳಗಾವಿ ಅರ ಪಿ ಡಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ ಎಚ್ ಬಿ ಕೋಲ್ಕಾರ ಅವರು ಕಿತ್ತೂರು ರಾಣಿ ಚನ್ನಮ್ಮಳ ವಿಜಯಗಾಥೆಯನ್ನು ಪ್ರಸ್ತುತ ಪಡಿಸಿ ಉಪನ್ಯಾಸ ನೀಡಿದ ಅವರು ಭವ್ಯ ಭಾರತದ ಬೆಳ್ಳಿ ಚುಕ್ಕಿಯಂದೇ ಖ್ಯಾತರಾದ ನಮ್ಮ ನಾಡಿನ ಕಿತ್ತೂರು ರಾಣಿ ಚನ್ನಮ್ಮಳ ಉತ್ಸವನ್ನು ತುಂಬಾ ಅದ್ದೂರಿಯಾಗಿ ಆಚರಿಸುತ್ತಿದ್ದೇವೆ ಕಿತ್ತೂರು ದೇಶಗತ್ತಿ ಸ್ಥಾಪನೆಯಾದ ಕುರಿತು ೧೨ ನೇ ಶತಮಾನದಲ್ಲಿ ದಾಖಲೆಗಳು ಸಿಗುತ್ತವೆ ಕಿತ್ತೂರ ಸಂಸ್ಥಾನ ಬ್ರಿಟಿಷರ ವಶವಾಗಿದ್ದು ಇತಿಹಾಸವಾಯಿತು ಅನೇಕ ಬ್ರಿಟಿಷರು ಸಂಸ್ಥಾನದ ಮೇಲೆ ಯುದ್ದಗಳನ್ನು ಮಾಡಿದರು ಇಡೀ ಭಾರತದಲ್ಲಿ ನಮ್ಮ ಚನ್ನಮ್ಮ ಸಂಗೊಳ್ಳಿ ರಾಯಣ್ಣ ಅವರ ಪಡೆ ಬ್ರಿಟಿಷರ ವಿರುದ್ಧ ಹೋರಾಡಿದ ಕ್ಷಣಗಳನ್ನು ನಾವು ನೆನಪಿಸಬೇಕು ಎಂದರು .
ಈ ಸಂದರ್ಭದಲ್ಲಿ ಶಾಸಕ ರಾಜು ಶೇಠ್ ,ಕಾಕತಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ವರ್ಷಾ ಮುಚ್ಚಂಡಿಕರ,ಬೆಳಗಾವಿ ಉಪವಿಭಾಧಿಕಾರಿಗಳಾದ ಶ್ರವಣ ನಾಯ್ಕ ,ಶಿವಾನಂದ ತಲ್ಲೂರ, ಕಿತ್ತೂರು ರಾಣಿ ಚನ್ನಮ್ಮಾಜಿ ಉತ್ಸವ ಸಮಿತಿ, ಗ್ರಾಮ ಪಂಚಾಯಿತಿ ಸದಸ್ಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು