Uncategorized

ದೇಶಿ ಸಂಸ್ಕೃತಿ ಉಳಿಸಿ ಬೆಳೆಸುವ ಪಣ ತೊಟ್ಟ ಆದಿಶಕ್ತಿ ವುಮನ್ಸ್ ಗ್ರೂಪ್

Share

ನವರಾತ್ರಿ ಹಬ್ಬ ಎಂದ್ರೆ ಸಡಗರ ಸಂಭ್ರಮ. ಒಂಭತ್ತು ದಿನಗಳ ಕಾಲ ದೇವಿಯ ಆರಾಧನೆ ಭಕ್ತಿ ಶ್ರದ್ಧೆಯಿಂದ ಆಚರಿಸಲಾಗುತ್ತಿದೆ. ಇನ್ನೂ ಮಹಿಳೆಯರು ದಾಂಡಿಯಾ, ಘರ್ಬಾ ದಂತಹ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ಮಹಿಳೆಯರ ತಂಡವೊಂದು ನಮ್ಮ ದೇಸಿ ಸಂಸ್ಕೃತಿ ಉಳಿಸಲು ತಂಡ ಕಟ್ಟಿಕೊಂಡು ಗಲ್ಲಿಗಲ್ಲಿಗಳಲ್ಲಿ ದಾಂಡಿಯಾ ಆಡೋ ಮೂಲಕ ದೇಶಿ ಪರಂಪರೆ ಉಳಿಸುವ ಕೆಲಸ ಮಾಡುತ್ತಿದೆ. ಈ ಕುರಿತು ಇಲ್ಲಿದೆ ಡಿಟೇಲ್ಸ್…

ಬಸವನಾಡು ವಿಜಯಪುರ ನಗರದಲ್ಲಿ ನವರಾತ್ರಿ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಇತ್ತ ಗ್ಯಾಂಗ್ ಬೌಡಿಯ ಕಕ್ಕಯ್ಯ ಕಾಲನಿಯ ನಾಡದೇವಿ ಅಂಬಾಭವಾನಿ ತರುಣ ಮಂಡಳದ ವತಿಯಿಂದ ಒಂಭತ್ತು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಜೊತೆಯಲ್ಲಿ ಅನ್ನಪ್ರಸಾದ, ಮಹಿಳೆಯರಿಗೆ ವಿವಿಧ ರೀತಿಯ ಸ್ಪರ್ಧೆಗಳನ್ನು ಆಯೋಜಿಸಿದ್ದರು. ಇನ್ನೂ ನಗರದ ಮಹಿಳೆಯರು ದಾಂಡಿಯಾ ಆಡಿ ಸಂಭ್ರಮಿಸಿದರು. ಇನ್ನೂ ಮಹಿಳೆಯರು ಒಂಭತ್ತು ದಿನ ಒಂಭತ್ತು ಬಣ್ಣದ ಸೀರೆಯುಟ್ಟು ಸಂಭ್ರಮಿಸಿದರು.

ಇನ್ನೂ ವಿಜಯಪುರ ನಗರದ ಆದಿಶಕ್ತಿ ವುಮನ್ಸ್ ಗ್ರೂಪ್ ನವರು ಪ್ರತಿದಿನವೂ ನವರಂಗ ಸೀರೆಯುಟ್ಟು ಸಂಭ್ರಮಿಸಿದ್ದಲ್ಲದೇ ಗಲ್ಲಿ ಗಲ್ಲಿ ತಿರುಗಾಡಿ ದಾಂಡಿಯಾ ಪ್ರದರ್ಶನ ನೀಡಿದ್ದಾರೆ. ಉಪನ್ಯಾಸಕಿ ಪ್ರತಿಭಾ ಸಾರವಾಡ, ಶಿಕ್ಷಕಿಯರಾದ ಗಿರಿಜಾ ಕೋವಳ್ಳಿ, ಶಿವಲೀಲಾ ಕವಟಗಿ, ವಿಜಯಲಕ್ಷ್ಮಿ, ವಿದ್ಯಾ ಸೇರಿದಂತೆ, ಗೃಹಿಣಿಯರು, ವಿದ್ಯಾರ್ಥಿಗಳಿರುವ ಇಪ್ಪತ್ತು ಮಹಿಳೆಯರು ಇರುವ ಈ ಗ್ರೂಪ್ ನಮ್ಮ ದೇಶಿ ಸಂಸ್ಕೃತಿಯಾಗಿರುವ ದಾಂಡಿಯಾ ನೃತ್ಯ ಮಾಡೋ ಮೂಲಕ ನಗರದಲ್ಲಿ ದಾಂಡಿಯಾ ನೃತ್ಯವನ್ನು ಮಾಡುವ ಮೂಲಕ ಬಾಕಿ ಮಹಿಳೆಯರಿಗೆ ಪ್ರೋತ್ಸಾಹಿಸುವ ಕಾರ್ಯ ಮಾಡುತ್ತಿದ್ದಾರೆ. ದಾಂಡಿಯಾ ಮಾಡುವ ಈ ತಂಡವು ಕುಟುಂಬದ ಶ್ರೇಯಸ್ಸಿಗಾಗಿ ದುಡಿಯುವ ಹೆಣ್ಣು ಮಕ್ಕಳು ಹಬ್ಬಗಳಲ್ಲಾದ್ರೂ ಮನರಂಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮಾನಸಿಕ ಹಾಗೂ ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಉತ್ತೇಜಿಸಲು ದಾಂಡಿಯಾ ಮಾಡುತ್ತಿದ್ದಾರೆ. ಅಲ್ಲದೇ ದೇಶಿ ಸಂಸ್ಕೃತಿ ಉಳಿಸಿ ಬೆಳೆಸುವ ಪಣ ತೊಟ್ಟಿದ್ದಾರೆ.

ಒಟ್ನಲ್ಲಿ ದಸರಾ ಹಬ್ಬವು ಮಹಿಳೆಯರಿಗೆ ಇನ್ನಷ್ಟು ಹುರುಪು ತಂದಿದೆ. ನವರಾತ್ರಿ ನವಶಕ್ತಿಯರ ಆರಾಧನೆ ಜೊತೆಗೆ ಒಂದಷ್ಟು ಮನರಂಜನೆಯಲ್ಲಿ ತೊಡಗಿ ದೇಶಿ ಹಬ್ಬವನ್ನು ಆಚರಿಸಿದ್ದಲ್ಲದೇ ದೇವಿ ಕೃಪೆಗೆ ಪಾತ್ರರಾಗುತ್ತಿದ್ದಾರೆ.

ವಿಜಯಕುಮಾರ ಸಾರವಾಡ
ಇನ್ ನ್ಯೂಜ್
ವಿಜಯಪುರ…

Tags: