Uncategorized

ಭಾನುವಾರ ದುಬೈನಲ್ಲಿ ಬೆಂಗಳೂರು ನಿರ್ಮಾತೃ ಕೆಂಪೇಗೌಡ ಉತ್ಸವ

Share

ಬೆಂಗಳೂರು: ದುಬೈನಲ್ಲಿ (Dubai) ಭಾನುವಾರ (ಅ.29) ಬೆಂಗಳೂರು ನಿರ್ಮಾತೃ ಕೆಂಪೇಗೌಡ ಉತ್ಸವ (Kempegowda Utsav) ನಡೆಯಲಿದೆ.

ಬೆಂಗಳೂರು: ದುಬೈನಲ್ಲಿ (Dubai) ಭಾನುವಾರ (ಅ.29) ಬೆಂಗಳೂರು ನಿರ್ಮಾತೃ ಕೆಂಪೇಗೌಡ ಉತ್ಸವ (Kempegowda Utsav) ನಡೆಯಲಿದೆ.

ಯುಎಇ ಒಕ್ಕಲಿಗರ ಸಂಘದಿಂದ (Okkaligas Union UAE) ಕೆಂಪೇಗೌಡ ಉತ್ಸವ ಆಯೋಜನೆ ಮಾಡಲಾಗಿದ್ದು, ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ (Nirmalanandanatha Swamiji) ಸಾನಿಧ್ಯದಲ್ಲಿ ಕೆಂಪೇಗೌಡ ಉತ್ಸವ ನಡೆಯಲಿದೆ

ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಭಾಗವಹಿಸುತ್ತಿದ್ದು, ಸಚಿವರಾದ ಕೆ.ವೆಂಕಟೇಶ್, ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಸೇರಿದಂತೆ ಕರ್ನಾಟಕದಿಂದ ಅನೇಕ ಗಣ್ಯರು ಭಾಗವಹಿಸಲಿದ್ದಾರೆ

ಈಗಾಗಲೇ ದುಬೈನಲ್ಲಿರುವ ಮಾಜಿ ಸಿಎಂ ಹೆಚ್.ಡಿ .ಕುಮಾರಸ್ವಾಮಿ ಅವರನ್ನ ದುಬೈ ಒಕ್ಕಲಿಗ ಸಂಘದ ಸಂಚಾಲಕ ಕಿರಣ್ ಗೌಡ ಸೇರಿದಂತೆ ಸಂಘದ ಸದಸ್ಯರು ಸ್ವಾಗತಿಸಿ ಬರಮಾಡಿಕೊಂಡರು

Tags: