ಕನ್ನಡ ರಾಜ್ಯೋತ್ಸವ ಹೊಸ್ತಿಲ್ಲಲ್ಲಿ ಮತ್ತೆ ಮಹಾರಾಷ್ಟ್ರ ಸರ್ಕಾರದಿಂದ ಗಡಿ ಖ್ಯಾತೆ ಶುರುವಾಗಿದೆ ಈ ಹಿಂದೆ ಕನ್ನಡ ರಾಜ್ಯೋತ್ಸವದಂದು ನಾಡದ್ರೋಹಿ ಮಹಾರಾಷ್ಟ್ರ ಏಕೀಕರಣ ಸಮಿತಿ ಕರಾಳ ದಿನ ಆಚರಿಸಲು ಮುಂದಾಗುತ್ತಿತ್ತು ಆದರೆ ಜಿಲ್ಲಾಧಿಕಾರಿಗಳಾದ ಎಂ ಜಿ ಹಿರೇಮಠ,ಏನ್ ಜಯರಾಂ ,ಪ್ರಸ್ತುತ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ನಾಡದ್ರೋಹಿ ಮಹಾರಾಷ್ಟ್ರ ಏಕೀಕರಣ ಸಮಿತಿಗೆ ಕರಾಳ ದಿನ ಆಚರಿಸದಂತೆ ಖಡಕ್ ಆದೇಶ ನೀಡುತ್ತಿದ್ದರು ಬಿಜೆಪಿಯ ಸಹಾಯ ಪಡೆದು ಮಹಾರಾಷ್ಟ್ರದ ಗದ್ದುಗೆ ಏರಿದ ಮುಖ್ಯಮಂತ್ರಿ ಏಕನಾಥ ಸಿಂಧೆ ಗಡಿ ವಿವಾದ ಬೆಂಕಿಗೆ ತುಪ್ಪ ಸುರಿಯುತ್ತಿರುವ ಕೆಲಸ ಮಾಡುತ್ತಿದ್ದಾರೆ ಆದರೆ ಖಡಕ ಜಿಲ್ಲಾಧಿಕಾರಿ ನಿತೇಶ ಪಾಟೀಲ ಎಂಇಎಸ ಕರಾಳ ದಿನಾಚರಣೆಗೆ ಅನುಮತಿ ನಿರಾಕರಣೆ ಮಾಡಿದ್ದೂ ನಾಡದ್ರೋಹಿಗಳಿಗೆ ಚಾಟಿ ಬೀಸಿದಂತಾಗಿದೆ ಇದರ ಕುರಿತು ಇಲ್ಲಿದೆ ನೋಡಿ ಡಿಟೇಲ್ಸ್
ಕನ್ನಡ ರಾಜ್ಯೋತ್ಸವ ಹೊಸ್ತಿಲ್ಲಲ್ಲಿ ಮತ್ತೆ ಮಹಾರಾಷ್ಟ್ರ ಸರ್ಕಾರದಿಂದ ಗಡಿ ಖ್ಯಾತೆ ಶುರುವಾಗಿದೆ ಕನ್ನಡಿಗರು ಶಾಂತಿ ಪ್ರಿಯರು ನೀರು ಕೇಳಿದರೆ ಅಂಬಲಿ ಕೊಡುವವರು ಆದರೆ ಸುಮಾರು ವರ್ಷಗಳಿಂದ ನಾಡದ್ರೋಹಿ ಮಹಾರಾಷ್ಟ್ರ ಏಕೀಕರಣ ಸಮಿತಿ ಬೆಳಗಾವಿಗರ ಕಣ್ಣಲ್ಲಿ ದ್ರೋಹಿಗಳಾಗಿದ್ದಾರೆ ,ನವೇಂಬರ ೧ ರಂದು ಕನ್ನಡ ಮನಸ್ಸುಗಳು ಅದ್ದೂರಿಯಾಗಿ ಕನ್ನಡ ಹಬ್ಬ ಆಚರಿಸುತ್ತಾ ಹೋಳಿಗೆ ಊಟ ಸವಿದು ಹಳಿದು ಕೆಂಪು ಬಾವುಟ ಹಿಡಿದು ,ರಿಬ್ಬನ್ ,ಸ್ಟಿಕರ್ ಧರಿಸಿ ಕನ್ನಡದ ಟಿಶರ್ಟ್ ಧರಿಸಿ ತಾಯಿ ಕನ್ನಡಾಂಬೆಗೆ ವಿಶೇಷ ಪೂಜೆ ಸಲ್ಲಿಸಿ ಕಿತ್ತೂರು ಚನ್ನಮ್ಮನ ವೃತ್ತದಲ್ಲಿ ಕನ್ನಡ ಹಾಡಿಗೆ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸುವ ಸಂಭ್ರಮದಲ್ಲಿರುವಾಗ ಮಹಾರಾಷ್ಟ್ರ ಏಕೀಕರಣ ಸಮಿತಿ ಕಪ್ಪು ಬಾವುಟ ಹಿಡಿದು ಕರಾಳ ದಿನ ಆಚರಿಸುತ್ತಿರುವುದು ವಿಷಾದನೀಯ ತಣ್ಣಗಾದ ಬೆಂಕಿಗೆ ಮತ್ತೆ ಮಹಾರಾಷ್ಟ್ರ ಸಿಎಂ ಏಕನಾಥ ಸಿಂಧೆ ತುಪ್ಪ ಸುರಿಯುವ ಕೆಲಸ ಮಾಡುತ್ತಿದ್ದಾರೆ. ಅದಕ್ಕೆ ರಾಜ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ಡಿಸಿ ನಿತೇಶ ಪಾಟೀಲ ಎಚ್ಚರಿಕೆ ನೀಡಿದ್ದಾರೆ .
ಬಿಜೆಪಿ ಬೆಂಬಲದೊಂದಿಗೆ ಮುಖ್ಯಮಂತ್ರಿ ಆಗಿರೋ ಏಕನಾಥ ಸಿಂಧೆ ನಾಡದ್ರೋಹಿ ಎಂಇಎಸಗೆ ಕುಮ್ಮಕ್ಕು ನೀಡ್ತಿದ್ದಾರೆ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಮಾತನಾಡಿದ ಅವರು
ಮಹಾರಾಷ್ಟ್ರ ಏಕೀಕರಣ ಸಮಿತಿಗೆ ಮಹಾರಾಷ್ಟ್ರ ಸರ್ಕಾರದ ಬೆಂಬಲ ಇದೆ ನವೆಂಬರ್ 1 ರಂದು ಎಂಇಎಸನಿಂದ ಬೆಳಗಾವಿಯಲ್ಲಿ ಕರಾಳ ದಿನಾಚರಣೆಗೆ ಮಹಾರಾಷ್ಟ್ರ ಪ್ರತಿನಿಧಿಯನ್ನು ಕಳುಹಿಸುವೆ ಎಂದು ಹೇಳಿದ್ದಾರೆ ಮತ್ತೆ ಗಡಿ ವಿವಾದಕ್ಕೆ ಬೆಂಕಿ ಹಚ್ಚಿದ್ದಾರೆ .
ರಾಜ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ಡಿಸಿ ನಿತೇಶ ಪಾಟೀಲ್ ಅವರು ಮಹಾರಾಷ್ಟ್ರ ನಾಯಕರಿಗೂ ಬೆಳಗಾವಿ ಜಿಲ್ಲೆ ಪ್ರವೇಶ ನಿರ್ಬಂಧ ವಿಧಿಸುವ ಎಚ್ಚರಿಕೆ ನೀಡಿದ್ದಾರೆ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಎಂಇಎಸ ಕರಾಳ ದಿನಾಚರಣೆಗೆ ನಮ್ಮ ಜಿಲ್ಲಾಡಳಿತದಿಂದ ಅನುಮತಿಗೆ ನಿರಾಕರಣೆ ಮಾಡಿದ್ದೇವೆ ಕಳೆದ ವರ್ಷ ಕರಾಳ ದಿನಾಚರಣೆ ಮಾಡಲು ಬಿಟ್ಟಿಲ್ಲ ಈ ವರ್ಷ ಮಾಡಲು ಬಿಡಲ್ಲ ನಮ್ಮ ಜಿಲ್ಲೆಯ ಹಲವು ಸಂಘಟನೆಗಳು ಕನ್ನಡ ಕ್ರಿಯಾ ಸಮಿತಿ ನಮಗೆ ಕರಾಳ ದಿನಾಚರಣೆಗೆ ಅವಕಾಶನೀಡದಂತೆ ಮನವಿ ನೀಡಿದೆ ಅದನ್ನು ನಾವು ಸರಕಾರಕ್ಕೆ ಕಳಿಸಿದ್ದೇವೆ ಗಡಿಯಲ್ಲಿ ನಮ್ಮ ಪೊಲೀಸರು ಬಿಗಿ ಬಂದೋಬಸ್ತ್ ಮಾಡುತ್ತಾರೆ ಸಕಲ ಪೊಲೀಸ ಸಿದ್ಧತೆಯಿಂದ ನಾವು ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡುತ್ತೇವೆ ನಮ್ಮ ಜಿಲ್ಲೆಯಲ್ಲಿ ಶಾಂತಿ ಕದಡುವ ಕೆಲಸ ಮಾಡಿದ್ರೆ ಎಷ್ಟೇ ದೊಡ್ಡ ನಾಯಕನಿದ್ದರೂ ಜಿಲ್ಲೆಗೆ ನಿರ್ಬಂಧ ಹೇರಲಾಗುತ್ತದೆ ಎಂದು ಸಂದೇಶ ರವಾನೆ ಮಾಡಿದ್ದಾರೆ .
ಒಟ್ಟಿನಲ್ಲಿ ನಾಡದ್ರೋಹಿ ಮಹಾರಾಷ್ಟ್ರ ಏಕೀಕರಣ ಸಮಿತಿಗೆ ಕರಾಳ ದಿನ ಆಚರಿಸಲು ಖಡಕ್ ಜಿಲ್ಲಾಧಿಕಾರಿ ಅನುಮತಿ ನೀಡದೆ ಇರುವುದು ಬೆಳಗಾವಿ ಜಿಲ್ಲೆಯ ಕನ್ನಡಿಗರ ಮೊಗದಲ್ಲಿ ಸಂತಸ ಮೂಡಿಸಿದೆ .ಶಾಂತಿಯ ತವರಾದ ಕುಂದಾನಗರಿಯಲ್ಲಿ ಸುಭದ್ರವಾಗಿ ಕನ್ನಡ ರಾಜ್ಯೋತ್ಸವ ಜರುಗಲಿ ಎಂಬುದೇ ಇನ್ ನ್ಯೂಸ್ ಆಶಯವಾಗಿದೆ
ಸ್ಪೆಷಲ್ ನ್ಯೂಸ್ ಬಿರೋ
ಇನ್ ನ್ಯೂಸ್ ಬೆಳಗಾವಿ