Uncategorized

ಸ್ವಂತ ಜಿಲ್ಲೆಯಲ್ಲಿ ಕಟೌಟಿಗೆ ಹಾಲಾಭಿಷೇಕ ಮಾಡಿಸಿಕೊಂಡ ನಟ ರಂಜನ ಛತ್ರಪತಿ

Share

ಹೌದು ಕನ್ನಡ ಚಿತ್ರರಂಗವು ನಿತ್ಯ ಹಲವಾರು ಹೊಸ ಪ್ರತಿಭೆಗಳನ್ನು ರಾಜ್ಯಕ್ಕೆ ನೀಡುತ್ತಿದೆ . ಗಾಂಧಿನಗರದಲ್ಲಿ ನಮ್ಮ ಕಟೌಟ ನಿಲ್ಲಬೇಕೆಂದು ಹುಚ್ಚುಕನಸುಕಂಡ ಅದೆಷ್ಟೋ ಯುವಕರ ಕನಸು ನನಸಾಗುವುದು ಅಷ್ಟಕ್ಕೇ ಅಷ್ಟೇ ಹೀರೊ ಆಗಬೇಕಂದ್ರೆ ದುಡ್ಡು ಹೆಸರು ಬೇಕು ಎಂಬ ಮಾತನ್ನು ಬೆಳಗಾವಿ ಜಿಲ್ಲೆಯ ಹೂವಿನಕೇರಿಯ ಯುವ ನಟ ರಂಜನ ಛತ್ರಪತಿ ಸುಳ್ಳುಮಾಡಿದ್ದಾರೆ. ಯುವ ನಟ ರಂಜನ ಛತ್ರಪತಿ ಬೆಳ್ಳಿ ಪರದೆ ಮಿಂಚಬೇಕು ನನ್ನ ಕಟೌಟ ಸಿನಿಮಾ ಮಂದಿರದಲ್ಲಿ ನಿಲ್ಲಬೇಕೆಂದು ಅದೆಷ್ಟೋ ಹಗಲುರಾತ್ರಿ ಅವಕಾಶಕ್ಕಾಗಿ ಅಲೆದಾಡಿ ಸುಮಾರು ವರ್ಷಗಳ ನಂತರ ಇನಾಮ್ದಾರ ಎಂಬ ಚಿತ್ರದ ಮೂಲಕ ಬೆಳ್ಳಿ ಪರದೆಗೆ ಪಾದಾರ್ಪಣೆ ಮಾಡಿದ್ದಾರೆ .
ಶುಕ್ರವಾರ ಬಿಡುಗಡೆ ಆದ ಇನಾಮ್ದಾರ ಚಿತ್ರ ರಾಜ್ಯಾದ್ಯಂತ ಅದ್ಬುತ ಪ್ರದರ್ಶನ ಕಂಡಿದೆ ಅದೆಷ್ಟೋ ಯುವಕರಿಗೆ ಈ ಚಿತ್ರ ಮಾದರಿಯಾಗಿದೆ .
ಬೆಳಗಾವಿಯ ಪ್ರಕಾಶ ಚಿತ್ರಮಂದಿರದಲ್ಲಿ ಬಿಡುಗಡೆಯಾದ ಚಿತ್ರಕ್ಕೆ ಬಿಜೆಪಿ ಯುವ ದುರೀಣ ಮುರಗೇಂದ್ರಗೌಡಾ ಪಾಟೀಲ ರಿಬ್ಬನ್ ಕಟ್ಟ ಮಾಡುವ ಮೂಲಕ ಚಿತ್ರಕ್ಕೆ ಬೆಂಬಲ ವ್ಯಕ್ತಪಡಿಸಿದರು .

ನಟ ರಂಜನ ಛತ್ರಪತಿ ಮಾತನಾಡುತ್ತಾ ನನ್ನ ಕನಸು ಇಂದು ನನಸಾಗಿದೆ . ಕಲೆಯೆಂಬ ವಿದ್ಯೆಯನ್ನು ನಾಡಿಗೆ ತೋರಿಸಿಕೊಡಲು ಸಹಕರಿಸಿದ ನನ್ನ ಗುರುಗಳಾದ ಸಂದೇಶ ಶೆಟ್ಟಿ ಆಜ್ರಿ ಅವರಿಗೆ ನಿರಂಜನ ಶೆಟ್ಟಿ ತಲ್ಲೂರ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ ಅನೇಕ ಹಿರಿಯ ನಟರ ಜೊತೆ ನಾನು ಅಭಿನಯಸಿದ್ದು ಸಂತಸ ತಂದಿದೆ . ದಯವಿಟ್ಟು ನನ್ನ ಎಲ್ಲಾ ಬಂದುಗಳಿಗೆ ಕೇಳಿಕೊಳ್ಳುವುದು ಇಷ್ಟೇ ಎಲ್ಲರು ಚಿತ್ರಮಂದಿರಕ್ಕೆ ಹೋಗಿ ನನ್ನ ಚಿತ್ರ ವೀಕ್ಷಿಸಿ ಎಂದರು.

Tags: