Uncategorized

ಸಿಡಿ ಮಾಸ್ಟರ್ ಡಿಕೆ ಶಿವಕುಮಾರ ಅತೀ ಶೀಘ್ರದಲ್ಲಿ ಮಾಜಿ ಮಂತ್ರಿಯಾಗಲಿದ್ದಾರೆ:ರಮೇಶ ಜಾರಕಿಹೊಳಿ ಬಾಂಬ್

Share

ಡಿಕೆ ಶಿವಕುಮಾರ ಅತೀ ಶೀಘ್ರದಲ್ಲಿ ಮಾಜಿ ಮಂತ್ರಿಯಾಗಲಿದ್ದಾರೆ, ಬೆಳಗಾವಿ ಪ್ರವಾಸಿ ಮಂದಿರದ ಹಳೆ ಕಟ್ಟಡದ ೪ ನಂಬರ ಕೊಠಡಿಯಲ್ಲಿ ಯಾಕೆ ಇರ್ತಾರೆ.? ಎಂಬುದು ನಮ್ಗೆಲ್ಲಾ ಗೊತ್ತಿದೆ ಡಿಕೆ ಶಿವಕುಮಾರ ನಾಟಕ ಮಂಡಳಿ ಭಾರತೀಯ ಜನತಾ ಪಕ್ಷದ ಹೆಸರು ಕೆಡಿಸುವ ಕೆಲಸ ಮಾಡುತ್ತಿದೆ ಎಂದು ರೆಬಲ್ ಶಾಸಕ ರಮೇಶ ಜಾರಕಿಹೊಳಿ ಹೊಸ ಸ್ಪೋಟಕ್ ಮಾಹಿತಿ ಬಿಚ್ಚಿಟ್ಟಿದ್ದಾರೆ

ವಿಧಾನಸಭೆಯ ಚುನಾವಣೆಯಲ್ಲಿನ ಫಲಿತಾಂಶ ನೋಡಿ ನಾವು ೬ ತಿಂಗಳು ಏನು ಮಾತನಾಡಬಾರದು ಎಂದು ಸುಮ್ಮನೆ ಇದ್ದಿವಿ ಆದರೆ ಡಿಕೆ ಶಿವಕುಮಾರ ನಾಟಕ ಮಂಡಳಿ
ಬಿಜೆಪಿ ಪಕ್ಷದ ಹೆಸರು ಕೆಡಿಸುತ್ತಿದೆ ಅದಕ್ಕೆ ಅನಿವಾರ್ಯವಾಗಿ ಮಾತನಾಡುವ ಅವಶ್ಯಕತೆ ಬಂದಿದೆ ಎಂದು ಶಾಸಕ ರಮೇಶ ಜಾರಕಿಹೊಳಿ ಅವರು ಬೆಳಗಾವಿ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ನಾವು ಆಪರೇಷನ್ ಕಮಲ ಮಾಡುತ್ತಿಲ್ಲ ಯಾವುದೇ ನಾಯಕರನ್ನು ಸಂಪರ್ಕ ಮಾಡಿಲ್ಲ ೫೦ ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದಾರೆ ಎಂಬುದು ಸುಳ್ಳು, ಡಿಕೆ ಶಿವಕುಮಾರ ಯಾವಾಗ ಅದಿಕಾರದಲ್ಲಿರುತ್ತಾನೆ ಅವಾಗ ಸರ್ಕಾರಕ್ಕೆ ಅಪಾಯನೇ ಅವರು ವಿರೋಧ ಪಕ್ಷದಲ್ಲಿದ್ದಾಗ ಒಂದು ತರಾ ಇರ್ತಾರೆ ಅಧಿಕಾರಕ್ಕೆ ಬಂದಾಗ ಒಂದು ತರಾ ಇರ್ತಾರೆ

ಸರಕಾರ ಮಹಾರಾಷ್ಟ್ರ ಮಾದರಿಯಲ್ಲಿ ಬಿಳ್ಳುತ್ತೆ – ರಾಜ್ಯ ಸರಕಾರ ಬಿದ್ದರೆ ಮಹಾರಾಷ್ಟ್ರ ಮಾದರಿಯಲ್ಲಿ ಬಿಳ್ಳುತ್ತೆ ಯಾವ ರಾಜಿನಾಮೆ ಇಲ್ಲಾ ಏನು ಇಲ್ಲ ಲಾಟರಿ ಮಂತ್ರಿ ಲಾಟರಿ ಎಂ ಎಲ್ ಎ ಗಳು ಯಾವಾಗ್ಲೂ ಡೇಂಜರ್ ಅವರಿಗೆ ಅನುಭವ ಇರುವುದಿಲ್ಲ . ಸಿದ್ದರಾಮಯ್ಯ ಮುಖ್ಯಮಂತ್ರಿ ಯಾಗಿದ್ದಕ್ಕೆ ನಾನು ಸುಮ್ಮನಿದ್ದೇನೆ ಡಿಕೆ ಶಿವಕುಮಾರ ಮುಖ್ಯಮಂತ್ರಿಯಾಗಿದ್ರೆ ಕಥೆ ಬೇರೆ ಇತ್ತು ,ಸರ್ಕಾರ ಬಿದ್ದರೆ ಡಿಕೆ ಶಿವಕುಮಾರ ಕಂಪನಿ ಆಂಡ್ ಬೆಳಗಾವಿ ಕಂಪನಿಯಿಂದ ಬಿಳ್ಳಬಹುದು ಬೆಳಗಾವಿ ರಾಜಕಾರಣದಿಂದ ಸರಕಾರ ಬಿಳ್ಳುತ್ತೆ ಮುಖ್ಯಮಂತ್ರಿ ಸರಿಯಾದ ನಿರ್ದಾರ ತೆಗೆದುಕೊಂಡರೆ ಮಾತ್ರ ಸರಕಾರ ಉಳಿಯುತ್ತೆ ಈ ಹಿಂದೆ ಸಚಿವ ರಾಮಲಿಂಗಾರೆಡ್ಡಿಯವರು ಕೂಡಾ ಒಳ್ಳೆಯ ಸ್ಟೇಟಮೆಂಟ್ ನೀಡಿದ್ರು ರಮೇಶ ಜಾರಕಿಹೊಳಿ ಬಂಡಾಯ ಎದ್ದಾಗ ಸರಿಯಾಗಿ ಡೀಲ್ ಮಾಡಲಿಲ್ಲ ಅದಕ್ಕೆ ಸರಕಾರ ಬಿತ್ತು ಆದರೆ ಈ ಸಲಾ ಹಾಗೆ ಆಗಲ್ಲ ಎಂದಿದ್ರು .
ನಾನು ದೃಢ ಸಂಕಲ್ಪ ಮಾಡಿದ್ದೇನೆ ಎರಡು ವರ್ಷ ಮನೆ ಕೆಲಸ ಹಾಗು ದೇವಸ್ಥಾನ ಕೆಲಸ ಮಾಡಲು ಆದರೆ ಅನಿವಾರ್ಯ ಕಾರಣದಿಂದ ಮಾಧ್ಯಮದ ಮುಂದೆ ಬರಬೇಕಾಯಿತು ,ಮಾಜಿ ಮಖ್ಯಮಂತ್ರಿ ಜಗದೀಶ ಶೆಟ್ಟರ ಅವರನ್ನು ಭೇಟಿ ಮಾಡಿದ್ದೂ ಯಾವುದೇ ರಾಜಕಾರಣ ಚರ್ಚೆಗಲ್ಲ ಅವರೊಂದಿಗೆ ಒಳ್ಳೆಯ ಸಂಬಂಧ ಇದೆ ಅವರನ್ನು ಮೇಲಿಂದ ಮೇಲೆ ಭೇಟಿ ಮಾಡುತ್ತೇನೆ ನಿನ್ನೆಯೇ ಭೇಟಿಯಾಗಿದ್ದೆ ಅವರಿಗೆ ರಾಜಕಾರಣದ ಬಗ್ಗೆ ಹೇಳುವಷ್ಟು ನಾನು ದೊಡ್ಡವನಲ್ಲ ಎಂದರು .

ಕರ್ನಾಟಕಕ್ಕೆ ಅಂಬೇಡ್ಕರ ಕರ್ನಾಟಕ ಎಂದು ನಾಮಕರಣ ಮಾಡಬೇಕು ಇದು ನನ್ನ ವಯಕ್ತಿಕ ನಿಲುವು- ವಿಜಯಪುರಕ್ಕೆ ಬಸವನಾಡು ಹೆಸರು ಇಡಬೇಕು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಅದರ ಬಗ್ಗೆ ನನಗೆ ಮಾಹಿತಿಯಿಲ್ಲ ಅಖಂಡ ಕರ್ನಾಟಕಕ್ಕೆ ಅಂಬೇಡ್ಕರ ಕರ್ನಾಟಕ ಎಂದು ನಾಮಕರಣ ಮಾಡಬೇಕು ಇದು ನನ್ನ ವಯಕ್ತಿಕ ನಿಲುವು ಬಸವಣ್ಣ ,ಕಿತ್ತೂರು ಚೆನ್ನಮ್ಮ ಅಂಬೇಡ್ಕರ ಅವರು ಅನೇಕ ಕೊಡುಗೆ ನೀಡಿದ್ದಾರೆ ಹಾಗಾಗಿ ಕರ್ನಾಟಕಕ್ಕೆ ಅಂಬೇಡ್ಕರ ಕರ್ನಾಟಕ ಎಂದು ನಾಮಕರಣ ಮಾಡಿದರೆ ಒಳ್ಳೆಯದು ಎಂದರು.

ಮಹಾನಗರ ಪಾಲಿಕೆಯಲ್ಲಿ ಸತೀಶ ಜಾರಕಿಹೊಳಿ ವರ್ಸಸ್ ಅಭಯ ಪಾಟೀಲ ಹೇಳಿಕೆಗೆ ಉತ್ತರಿಸಿದ ಅವರು ಸತೀಶ ಜಾರಕಿಹೊಳಿ ಹಾಗು ಅಭಯ ಪಾಟೀಲ ರ ಮದ್ಯೆ ಏನಿದೆ ಎಂಬುದು ನನಗೆ ಸಂಪೂರ್ಣ ಮಾಹಿತಿ ಇಲ್ಲ ನಾನು ಕೆಲ ದಿನ ಹೊರಗೆ ಇದ್ದೆ ಪಾಲಿಕೆ ವಿಚಾರವಾಗಿ ವಿಷಯ ಗೊತ್ತಿಲ್ಲದೇ ಮಾತನಾಡುವುದು ತಪ್ಪು ಶಾಸಕ ಅಭಯ್ ಪಾಟೀಲ ಕರೆದರೆ ಹೋಗಿ ಸಮಸ್ಯೆ ಬಗ್ಗೆ ಸರಿಯಾದ ಮಾಹಿತಿ ತಿಳಿದುಕೊಂಡು ಎಲ್ಲರೊಂದಿಗೆ ಚರ್ಚಿಸಿ ಸಮಸ್ಯೆ ಬಗೆ ಹರಿಸುತ್ತೇನೆ . ಮುಂಬರುವ ಲೋಕಸಭೆ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳ ಪರ ಕೆಲಸ ಮಾಡಿ ನರೇಂದ್ರ ಮೋದಿಯವರನ್ನ ಮತ್ತೊಮ್ಮೆ ಪ್ರಧಾನಿ ಮಾಡುತ್ತೇವೆ ,ಚಿಕ್ಕೋಡಿಯಲ್ಲಿ ಹಾಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರಿಗೆ ಟಿಕೆಟ್ ಫೈನಲ್ ಆಗುತ್ತೆ ಬೆಳಗಾವಿ ಲೋಕಸಭೆಯಲ್ಲಿ ಸಂಸದೆ ಮಂಗಲಾ ಅಂಗಡಿ ಅವರು ಸ್ಪರ್ಧೆ ಮಾಡಲ್ಲ ಎಂದು ಮಾಧ್ಯಮದಲ್ಲಿ ನೋಡಿದ್ದೇನೆ ಅವರ ಜೊತೆ ಮಾತನಾಡಿಲ್ಲ ಭೇಟಿ ಮಾತುಕತೆ ಮಾಡುತ್ತೇನೆ ಎಂದರು .

ಡಿಕೆಶಿವಕುಮಾರ ೧೦೦ ಸಿಡಿ ಬಿಟ್ಟರು ನಾನು ಹೆದರುವ ಮಗಾ ಅಲ್ಲ – ಈ ಹಿಂದೆ ನನ್ನ ಸಿಡಿ ಬಿಡುಗಡೆ ಮಾಡಿದ್ದು ಇದೆ ಸಿಡಿ ಮಾಸ್ಟರ್ ಡಿಕೆಶಿ ಅವನಿಗೆ ಸೊಕ್ಕು ಕಡಿಮೆ ಆಗಿಲ್ಲ ಅವನು ಪುಕ್ಕಳ ಇದ್ದಾನೆ ಬ್ಲಾಕ ಮೇಲ ಮಾಡುವುದು ಬಿಟ್ಟರೆ ಅವನಿಗೆ ಏನು ಗೊತ್ತಿಲ್ಲ ನೆಲಮಂಗಲ ಮಾಜಿ ಶಾಸಕ ನಾಗರಾಜ ಅವರಿಗೆ ಎಸ ಐ ಟಿ ಇಂದ ತನಿಖೆ ಮಾಡಿಸಿ ಜೈಲಿಗೆ ಹಾಕಿಸುವುದಾಗಿ ಧಮ್ಕಿ ಹಾಕುತ್ತಾನೆ ಇವನ ದಮ್ಕಿಗೆ ಹೆದರುವ ಮಗಾ ನಾನಲ್ಲ ೧೦೦ ಸಿಡಿ ಬಿಟ್ಟರು ನಾನು ಹೆದರಲ್ಲ ,‌ನೆಲಂಮಗಲ, ಕೊಳ್ಳೆಗಾಲ ಮಾಜಿ ಶಾಸಕರಿಗೆ ಸಿಡಿ ಇದೆ ಎಂದು ಬ್ಲ್ಯಾಕ್ ಮೇಲೆ ಮಾಡುತ್ತಿದ್ದು, ಈ ಕುರಿತು ಸಿಬಿಐ ತನಿಖೆಗೆ ವಹಿಸುವಂತೆ ನಾನು ಸಿದ್ದರಾಮಯ್ಯನವರನ್ನು ಹಾಗು ಗ್ರಹಮಂತ್ರಿ ಅವರನ್ನು ಭೇಟಿ ಮಾಡಿ ಆಗ್ರಹಿಸುತ್ತೇನೆ , ಡಿಕೆ ಶಿವಕುಮಾರ ಕನಕಪುರ ಚುನಾವಣೆಯಲ್ಲಿ ಕೇವಲ ೨ ಬಾರಿ ನಿಯತ್ತಿನಿಂದ ಗೆದ್ದಿದಾನೆ ಉಳಿದ ಸಲಾ ಅಡ್ಜೆಸ್ಟಮೆಂಟ್ ನಲ್ಲಿ ಗೆದಿದ್ದಾನೆ ಭ್ರಷ್ಟಾಚಾರ ಮಾಡಿ ವರ್ಷಕ್ಕೆ ಆಸ್ತಿಯನ್ನು ದುಪ್ಪಟ್ಟು ಮಾಡಿಕೊಂಡಿರುವ ಡಿಕೆಶಿವಕುಮಾರ ಅತಿ ಶೀಘ್ರದಲ್ಲಿ ಮಾಜಿ ಮಂತ್ರಿ ಯಾಗುತ್ತಾನೆ ಎಂದು ಬಾಂಬ್ ಸಿಡಿಸಿದರು .

ಒಟ್ಟಿನಲ್ಲಿ ಈ ಹಿಂದೆ ಸರ್ಕಾರ ಕೆಡವಿದ್ದ ರೆಬಲ್ ಶಾಸಕ ರಮೇಶ ಜಾರಕಿಹೊಳಿ ಸ್ಪೋಟಕ್ ಹೇಳಿಕಗಳನ್ನು ಬಿಚ್ಚಿಟ್ಟಿದ್ದು ಸದ್ಯೆ ರಾಜಕೀಯ ವಲಯದಲ್ಲಿ ಬಾರಿ ಚರ್ಚೆಗೆ ಗ್ರಾಸವಾಗಿದೆ, ಸದ್ಯ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ ಅವರ ಬಗ್ಗೆ ಹೇಳಿಕೆ ನೀಡಿರುವ ರಮೇಶ ಜಾರಕಿಹೊಳಿ ಅವರ ಮುಂದಿನ ನಡೆ ಏನು ಎಂಬುದನ್ನು ಕಾದುನೋಡಬೇಕಿದೆ .

ಸ್ಪೆಷಲ್ ಪೊಲಿಟಿಕಲ್ ಬಿರೊ
ಇನ್ ನ್ಯೂಸ್ ಬೆಳಗಾವಿ

Tags: