ರೇವ್ ಪಾರ್ಟಿಗೆ ಹಾವಿನ ವಿಷ ಪೂರೈಸುತ್ತಿದ್ದ ಆರೋಪದಲ್ಲಿ ಹಿಂದಿ ಬಿಗ್ಬಾಸ್ OTT 2 ವಿನ್ನರ್ ಹಾಗೂ ಯುಟ್ಯೂಬರ್ ಎಲ್ವಿಶ್ ಯಾದವ್ ಮೇಲೆ ಎಫ್ಐಆರ್ ದಾಖಲಾಗಿದೆ. ರೇವ್ ಪಾರ್ಟಿಯಲ್ಲಿ ಹಾವಿನ ವಿಷವನ್ನು ನಶೆಗಾಗಿ ಬಳಸಲಾಗುತ್ತಾ ಇತ್ತು ಅನ್ನೋ ಆರೋಪದ ಮೇಲೆ ನೋಯ್ಡಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ನೋಯ್ಡಾ ಸೆಕ್ಟರ್-51ರಲ್ಲಿ ರೇವಾ ಪಾರ್ಟಿ ಆಯೋಜಿಸಲಾಗಿತ್ತು. ಈ ಪಾರ್ಟಿಯಲ್ಲಿ ನಶೆಗಾಗಿ ಹಾವಿನ ವಿಷ ಬಳಸಿದ ಆರೋಪ ಕೇಳಿ ಬಂದಿತ್ತು. ಅನಿಮಲ್ ವೆಲ್ಫೇರ್ NGO ಒಂದು ಈ ಬಗ್ಗೆ ದೂರು ನೀಡಿತ್ತು. ಈ ದೂರಿನ ಮೇಲೆ ರೇವ್ ಪಾರ್ಟಿ ಮೇಲೆ ದಾಳಿ ಮಾಡಿದ ನೋಯ್ಡಾ ಪೊಲೀಸರು, 9 ಹಾವುಗಳನ್ನು ವಶಪಡಿಸಿಕೊಳ್ಳಲಾಗಿದೆ. 5 ನಾಗರಹಾವು, ಎರಡು ಎರಡು ತಲೆಯ ಹಾವು, 1 ಕೆಂಪು ಹಾವು, ಮತ್ತೊಂದು ಹೆಬ್ಬಾವು ಇತ್ತು ಎನ್ನಲಾಗಿದೆ.
ರೇವ್ ಪಾರ್ಟಿಯಲ್ಲಿ ಹಾವಿನ ವಿಷ ಬಳಸುತ್ತಿದ್ದ ಈ ಘಟನೆಯನ್ನ ಅರಣ್ಯ ಇಲಾಖೆ ಮತ್ತು ಪ್ರಾಣಿಗಳ ಪರ ಹೋರಾಡುವ NGO ಗಂಭೀರವಾಗಿ ಪರಿಗಣಿಸಿದೆ. ಬಿಗ್ಬಾಸ್ OTT 2 ವಿನ್ನರ್ ಎಲ್ವಿಶ್ ಯಾದವ್ ಗ್ಯಾಂಗ್ ನಿಷೇಧಿತ ಹಾವಿನ ವಿಷವನ್ನು ಪೂರೈಸುತ್ತಿತ್ತು ಅನ್ನೋ ಗಂಭೀರ ಆರೋಪ ಕೇಳಿ ಬಂದಿದೆ. ಬಿಗ್ಬಾಸ್ OTT 2 ವಿನ್ನರ್ ಎಲ್ವಿಶ್ ಯಾದವ್ ಸೇರಿದಂತೆ 5 ಮಂದಿ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಐವರು ಆರೋಪಿಗಳಲ್ಲಿ 4 ಮಂದಿಯನ್ನ ವಶಕ್ಕೆ ಪಡೆಯಲಾಗಿದೆ. ಎಲ್ವಿಶ್ ಯಾದವ್ ಅವರನ್ನ ಇನ್ನೂ ಬಂಧಿಸಿಲ್ಲ