೪೦ ವರ್ಷಗಳ ಅನುಭವ ಹೊಂದಿದ್ದ ಭಾರತ ವಾಹನ ತರಬೇತಿ ಶಾಲೆ ಸಮಾಜಮುಖಿ ಕೆಲಸ ಮಾಡುತ್ತಿದೆ ಮುಂಚೆ ದೇಶಸೇವೆ ಮಾಡಿದ್ದೇನೆ ಈ ವೃತ್ತಿಯಲ್ಲಿ ಅನೇಕ ಏರಳಿತಗಳನ್ನು ನೋಡಿದ್ದೇನೆ ಅಪಘಾತ ರಹಿತ ತರಬೇತಿ ನೀಡುವ ಮುಖ್ಯ ಉದ್ದೇಶವನ್ನು ಇಟ್ಟುಕೊಂಡಿದ್ದೇನೆ ಎಂದು ಭಾರತ ವಾಹನ ತರಬೇತಿ ಮಾಲೀಕ ಬಸವರಾಜ ಕಡ್ಲಿ ಹೇಳಿದರು .
ಬೆಳಗಾವಿ ನೆಹರು ನಗರದ ೨ ನೇ ಕ್ರಾಸನಲ್ಲಿ ಭಾರತ ವಾಹನ ತರಬೇತಿ ಶಾಲೆಯ ಭವ್ಯ ಉದ್ಘಾಟನೆಯನ್ನು ಬೆಳಗಾವಿ ನಾಗನೂರ ಮಠದ ರುದ್ರಾಕ್ಷಿಮಠದ ಶ್ರೀ ಅಲ್ಲಮಪ್ರಭು ಸ್ವಾಮೀಜಿ ನೆರವೇರಿಸಿದರು .
ಭಾರತ ವಾಹನ ತರಬೇತಿ ಮಾಲೀಕ ಬಸವರಾಜ ಕಡ್ಲಿ ಮಾತನಾಡುತ್ತ ನಮ್ಮ ಫೆಡರೇಷನ್ ತುಂಬಾ ಸಮಾಜಮುಖಿ ಕೆಲಸ ಮಾಡುತ್ತಿದೆ ನಾವು ಭಾರತವನ್ನು ಸಂಚರಿಸಿ ಬಂದಿದ್ದೇನೆ ಸುಮಾರು ಕಡೆ ನಾನು ವಾಹನ ತರಬೇತಿ ಶಾಲೆಗಳನ್ನು ನೋಡಿದ್ದೇನೆ ನಮ್ಮ ವಾಹನ ತರಬೇತಿ ಶಾಲೆ ಮಟ್ಟ ಕೆಳಗೆ ಇತ್ತು ಎಂದು ಅನಿಸಿತು ಅದನ್ನು ಮನದಲ್ಲಿಟ್ಟುಕೊಂಡು ನಮ್ಮ ಶಾಲೆಯನ್ನು ಒಳ್ಳೆಯ ರೀತಿಯಲ್ಲಿ ಮಾಡಬೇಕೆಂದು ಹೊರಟ್ವಿ ನಮ್ಮ ಸ್ನೇಹಿತ ಶ್ರೀಶೈಲ್ ಠಕ್ಕಣ್ಣವರ್ ,ಸಚಿನ ,ಮಲ್ಲಿಕ ಮತ್ತು ಅಜಯಕುಮಾರ ನಾಲ್ಕು ಜನಾ ನನಗೆ ಸಾಥ್ ನೀಡಿದರು ಇವರೆಲ್ಲರ ಪರಿಶ್ರಮದಿಂದಾಗಿ ನಮ್ಮ ರಾಜ್ಯದ ಅಧ್ಯಕ್ಷರು ಹೊಗಳುವಂತಾಗಿದೆ . ನಮ್ಮಲ್ಲಿ ತರಬೇತಿಗೆ ಬರುವವರಿಗೆ ಅಪಘಾತ ರಹಿತ ತರಬೇತಿ ನೀಡುವ ಮುಖ್ಯ ಉದ್ದೇಶವನ್ನು ಇಟ್ಟುಕೊಂಡಿದ್ದೇನೆ ಅದೇ ರೀತಿ ನಮ್ಮ ಸಿಬ್ಬಂದಿಗಳು ಒಳ್ಳೆಯ ರೀತಿ ತರಬೇತಿಯನ್ನು ನೀಡುತ್ತಿದ್ದಾರೆ ೪೦ ವರ್ಷಗಳ ಅನುಭವ ಹೊಂದಿದ್ದ ಈ ಶಾಲೆ ,ಕೆ ಎಸ ನಾಯಿಕ ಎಂಬವರ ಮಾಲೀಕತ್ವದಲ್ಲಿ ಈ ಕಂಪನಿ ಇತ್ತು ನಾನು ಎರಡನೇ ಮಾಲೀಕ ನಾನು ೨೦೦೨ ರಲ್ಲಿ ಈ ವೃತ್ತಿಯಲ್ಲಿ ಬಂದೆ ಅದಕ್ಕಿಂತ ಮುಂಚೆ ದೇಶಸೇವೆ ಮಾಡಿದ್ದೇನೆ ಈ ವೃತ್ತಿಯಲ್ಲಿ ಅನೇಕ ಏರು ಇಳಿತಗಳನ್ನು ನೋಡಿದ್ದೇನೆ ಬೆಳಗಾವಿ ಜನರು ಉತ್ತಮ ತರಬೇತಿಗಾಗಿ ನಮ್ಮ ಶಾಲೆಯಲ್ಲಿ ತರಬೇತಿ ಪಡೆಯಿರಿ ಸಂಚಾರ ನಿಯಮಗಳನ್ನು ಪಾಲಿಸಿ ಹೆಲ್ಮೆಟ್ ಹಾಗು ಸಿಟ್ ಬೆಲ್ಟ್ ಧರಿಸಿ ಸಂಚಾರ ಮಾಡಿದರೆ ಅಪಘಾತಗಳು ನಡೆಯಲಾರದು ಎಂದರು.
ಸದಾಶಿವಯ್ಯ ಅವರು ಮಾತನಾಡುತ್ತಾ ಇವತ್ತು ೪೦ ವರ್ಷಗಳ ಅನುಭವ ಹೊಂದಿದ ವಾಹನ ತರಬೇತಿ ಶಾಲೆ ಬೆಳಗಾವಿ ಜಿಲ್ಲೆಯ ಜನರ ಸೇವೆಯನ್ನು ಮಾಡುತ್ತಿದೆ ವಾಹನ ತರಬೇತಿ ಶಾಲೆ ನಡೆಸುವುದು ಕಷ್ಟದ ಕೆಲಸ ಚಾಲಕರನ್ನು ಸಂಬಾಳಿಸಿಕೊಂಡು ಚಾಲನೆ ಹೇಳಿಕೊಡುವುದು ದೊಡ್ಡ ಕೆಲಸ ಬಸವರಾಜ ಕಡ್ಲಿ ಅವರಿಗೆ ತುಂಬಾ ತಾಳ್ಮೆಯಿದೆ ಅವರ ತಾಳ್ಮೆಯಿಂದ ಈ ತರಬೇತಿ ಶಾಲೆ ಇಲ್ಲಿಯವರೆಗೂ ಸುಭದ್ರವಾಗಿ ನಡೆದುಕೊಂಡು ಬಂದಿದೆ ಗಂಡುಮೆಟ್ಟಿದ ನಾಡಿನಲ್ಲಿ ಚಾಲನಾ ತರಬೇತಿ ಶಾಲೆಯನ್ನು ಉತ್ತಮ ಮಟ್ಟದಲ್ಲಿ ನಡೆಸಿಕೊಂಡು ಬಂದಿದ್ದಾರೆ ಇಡೀ ರಾಜ್ಯದಲ್ಲಿ ಇಷ್ಟೊಂದು ಉತ್ತಮವಾಗಿ ಶಾಲೇ ಯಾವುದು ಇಲ್ಲ ಎಂದು ನೂತನ ಶಾಲೆ ಆರಂಭಿಸಿದ ಬಸವರಾಜ ಕಡ್ಲಿ ಅವರಿಗೆ ಶುಭ ಹಾರೈಸಿದರು .
ಕರ್ನಾಟಕ ರಾಜ್ಯ ವಾಹನ ತರಬೇತಿಯ ವೈಸ್ ಪ್ರೆಸಿಡೆಂಟ್ ಇವತ್ತು ಬೆಳಗಾವಿಯ ಗಡಿಭಾಗದಲ್ಲಿ ಬಸವರಾಜ ಕಡ್ಲಿಯವರು ದೇಶಸೇವೆ ಮಾಡಿ ವಾಹನ ಸವಾರರನ್ನು ತಯಾರು ಮಾಡುವ ಸೇವೆಯನ್ನು ಮಾಡುತ್ತಿದ್ದಾರೆ ಅವರ ಶಾಲೆಯು ಎಲ್ಲರಿಗೆ ಮಾದರಿಯಾಗಿದೆ ಎಂದರು .
ನಾಗರಾಜ ಅವರು ಮಾತನಾಡಿ ತರಬೇತಿ ಶಾಲೆಯ ಉಪಾಧ್ಯಕ್ಷರಾಗಿ ಬಸವರಾಜ ಕಡ್ಲಿ ಅವರು ಆಕ್ಟಿವ್ ಆಗಿ ಕೆಲಸ ಮಾಡುತ್ತಿದ್ದಾರೆ ಅವರ ಈ ಶಾಲೆಯು ಕರ್ನಾಟಕ ರಾಜ್ಯದಲ್ಲಿ ವಿನೂತನವಾಗಿ ನಿರ್ಮಿಸಿದ್ದಾರೆ ಅವರ ನೂತನ ಕಾರ್ಯಕ್ಕೆ ಸ್ಲಾಗಣಿಯ ವ್ಯಕ್ತಪಡಿಸಿದರು .
ಈ ಭವ್ಯ ಉದ್ಘಾಟನೆ ಕಾರ್ಯಕ್ರಮದಲ್ಲಿ ನಾಗರಾಜ,ಸದಾಶಿವಯ್ಯ,ಎಂ ಪಿ ಓಮಕಾರೇಶ್ವರಿ ,ನಾಗೇಶ ಮುಂಡಸ್ ಸೇರಿದಂತೆ ಇನ್ನು ಹಲವು ಗಣ್ಯಾತಿ ಗಣ್ಯರು ಭಾಗಿಯಾಗಿ ಬಸವರಾಜ ಕಡ್ಲಿ ಅವರಿಗೆ ಶುಭ ಹಾರೈಸಿದರು.