ಬೆಳಗಾವಿ ನಗರದ ಲಾರ್ಡ್ಸ್ ಇಕೋ ಇನ್ ಹೋಟೆಲ್ ನಲ್ಲಿ ಶನಿವಾರ ಕರ್ನಾಟಕ ಲೇಖಕಿಯರ ಸಂಘದ ಬೆಳಗಾವಿ ಶಾಖೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಉದ್ಘಾಟಿಸಿದರು. ಇದೇ ವೇಳೆ ಎರಡು ಪುಸ್ತಕಗಳನ್ನು ಸಹ ಬಿಡುಗಡೆಗೊಳಿಸಿದರು.
ಮಾರ್ಗರೇಟ್ ಆಳ್ವ ರವರನ್ನು ಮಾದರಿಯನಾಗಿ ತೆಗೆದುಕೊಂಡು 1998 ರಲ್ಲಿ ರಾಜಕೀಯ ಕ್ಷೇತ್ರಕ್ಕೆ ಬಂದಿದ್ದೇನೆ
ಈ ಪ್ರಪಂಚದಲ್ಲಿ ಯಾವದೇ ದೇಶ ,ರಾಜ್ಯದಲ್ಲಿ ಪುರುಷರಿಗೆ ಹೆಚ್ಚಿನ ಆದ್ಯತೆ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ಇವತ್ತೀನ ದಿನಗಳಲ್ಲಿ ತುಂಬಾನೇ ಬೆಳದಿದ್ದಾರೆ ವಿಜ್ಞಾನ ಶಿಕ್ಷಣ ರಾಜಕೀಯ ರಂಗ ಸೇರಿ ವಿವಿಧ ರಂಗದಲ್ಲಿ ಮಹಿಳೆಯರು ಸಾಧನೆ ಮಾಡಿದ್ದಾರೆ ಚಂದ್ರಯಾನದ ಯಶ್ವಸಿನಲ್ಲಿ ಮಹಿಳೆಯರು ಇರುವುದು ಹೆಮ್ಮೆಯ ವಿಷಯ ಎಂದರು
ಬೆಳಗಾವಿಯಲ್ಲಿ ಲೇಖಕಿಯರ ಸಂಘ ಸ್ಥಾಪನೆಯಾಗಿರುವುದು ಬೆಳಗಾವಿ ಬೆಳೆಯುತ್ತೀರುವುದಕ್ಕೆ ಉತ್ತಮ ಉದಾಹರಣೆಯಾಗಿದೆ ಕರ್ನಾಟಕದಲ್ಲಿ 1979 ರಲ್ಲಿ ಬೆಂಗಳೂರಿನಲ್ಲಿ ಲೇಖಕೀಯರ ಸಂಘ ಸ್ಥಾಪನೆಯಾಗಿತು ಈಗ ಬೆಳಗಾವಿಯಲ್ಲಿ ಸ್ಥಾಪನೆಯಾಗಿರುವುದು ಸಂತಸ ತಂದಿದೆ ಎಂದರು
ಕಾರ್ಯಕ್ರಮದಲ್ಲಿ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾದ ಡಾ.ಎಚ್.ಎಲ್ ಪುಷ್ಪ, ಬೆಳಗಾವಿ ಶಾಖೆಯ ಅಧ್ಯಕ್ಷರಾದ ಡಾ. ಕೆ. ಆರ್ ಸಿದ್ದಗಂಗಮ್ಮ, ಪಾರ್ವತಿ ಪಿಟಗಿ, ಹಮೀದಾ ಬೇಗಂ, ಡಾ. ನೀತಾ ರಾವ್, ನದೀಮ್ ಸನದಿ, ಸಾಹಿತಿ ಡಾ. ಸರಜೂ ಕಾಟ್ಕರ್, ಜ್ಯೋತಿ ಬದಾಮಿ, ಡಾ. ನಿರ್ಮಲಾ ಬಟ್ಟಲ, ಡಾ. ನೀತಾರಾವ್, ರಾಜನಂದಾ ಗಾರ್ಗಿ ಮೊದಲಾದವರು ಉಪಸ್ಥಿತರಿದ್ದರು.