ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯ ಚಡಚಣ ಪೊಲೀಸ್ ಠಾಣೆಯ ಪಿ.ಎಸ್.ಐ.ಯನ್ನು ಅಮಾನತ್ತು ಮಾಡಲಾಗಿದೆ.
ಚಡಚಣ ಪಿ.ಎಸ್.ಐ. ಮಹದೇವ ಯಲಿಗಾರ ಇವರನ್ನು ಐಜಿಪಿ ವಿಕಾಶ್ ಕುಮಾರ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ವಿಜಯಪುರ ಜಿಲ್ಲೆಯ ಚಡಚಣ ಪೊಲೀಸ ಠಾಣಾ ಪಿಎಸ್‌ಐ ಮಹಾದೇವ ಯಲಿಗಾರ ಅಮಾನತು ಮಾಡಲು ಉತ್ತರ ವಲಯ ಐಜಿಪಿ ವಿಕಾಶ್ ಕುಮಾರ ಆದೇಶ ನೀಡಿದ್ದು ಕೇಸ್‌ವೊಂದರಲ್ಲಿ ಕರ್ತವ್ಯ ಲೋಪ ಪರಿಗಣಿಸಿ ಅಮಾನತು ಆದೇಶಿಸಿದ್ದಾರೆ.ಈ ಮಧ್ಯೆ, ಸಂಜಯ ಕಲ್ಲೂರ ಅವರನ್ನು ಚಡಚಣ ನೂತನ ಪಿಎಸ್ಐ ಆಗಿ ವರ್ಗಾವಣೆ ಮಾಡಲಾಗಿದೆ. ಇವರು ಈ ಮುಂಚೆ ವಿಜಯಪುರ ನಗರದಲ್ಲಿ ಸಂಚಾರಿ ವಿಭಾಗ, ಕೊಲ್ಹಾರ ಪೊಲೀಸ್ ಠಾಣೆ ಸೇರಿದಂತೆ ನಾನಾ ಕಡೆ ಪಿಎಸ್ಐ ಆಗಿ ಸೇವೆ ಸಲ್ಲಿಸಿದ್ದಾರೆ. ಸಂಜಯ ಕಲ್ಲೂರ ಅವರು ರವಿವಾರ ಚಡಚಣ ಪಿಎಸ್‌ಐ ಆಗಿ ಕರ್ತವ್ಯಕ್ಕೆ ಹಾಜರಾಗುವ ನಿರೀಕ್ಷೆಯಿದೆ.
Uncategorized
ಚಡಚಣ ಪಿ.ಎಸ್.ಐ.ಮಹಾದೇವ ಯಲಿಗಾರ ಅಮಾನತು:ಸಂಜಯ ಕಲ್ಲೂರ ಕರ್ತವ್ಯಕ್ಕೆ ಹಾಜರಾಗುವ ನಿರೀಕ್ಷೆ
