Uncategorized

ನ್ಯಾಯಕ್ಕಾಗಿ ಖಾನಾಪೂರ ಪೋಲಿಸ್ ಠಾಣೆಗೆ ಧಾವಿಸಿದ ಲೋಕೋಳಿ ಯುವತಿಯರು

Share

ಬೇಕೇ ಬೇಕು ನ್ಯಾಯ ಬೇಕು ಆ ಯುವಕನಿಗೆ ಫಾಸಿ ನೀಡಿ ನಮ್ಮನ್ನು ನ್ಯಾಯ ಒದಗಿಸಿ ಎಂದು ಘೋಷಣೆ ಕೂಗುತ್ತ ಖಾನಾಪೂರ ಪೋಲಿಸ್ ಠಾಣೆಗೆ ಧಾವಿಸಿತ್ತು ಯುವತಿಯ ತಂಡ ಅದು ಏಕೆ ಅಂತೀರಾ ಹಾಗಾದರೆ ನೋಡಿ ನಾವು ಹೇಳುತ್ತೇವೆ ಏನು ಅನ್ಯಾಯವಾಗಿದೆ ಅಂತ

ಲೋಕೋಳಿ ಯುವತಿಯರ ಪೋಟೋಗಳನ್ನು ಇನ್ ಸ್ಟಾ ಗ್ರಾಮ್ ನಲ್ಲಿ ಅಶ್ಲೀಲ ಪೋಟೋಗಳೊಂದಿಗೆ ಮುಖ ಹಾಕಿ ಅಪಲ್ಲೋಡ್ ಮಾಡಿ ಯುವತಿಯರ ಮಾನ ಹರಾಜು ಮಾಡಿರುವ ಘಟನೆ ಖಾನಾಪೂರ ತಾಲೂಕಿನ ಲೋಕೋಳಿಯಲ್ಲಿ ನಡೆದಿದೆ ,ಮೇಲಿಂದ ಮೇಲೆ ಇಂತಹಾ ಕೃತ್ಯಗಳನ್ನು ಮಾಡುತ್ತಲೇ ಬಂದಿರುವ ಈ ಯುವಕ ಮಾನಸಿಕವಾಗಿ ಸರಿ ಇಲ್ಲ ಎಂದೇ ತಿಳಿಹೇಳಿ ಸಮಾಧಾನ ಪಡಿಸುವ ಕಾರ್ಯ ಇದರ ಹಿಂದೆ ನಡೆದಿತ್ತು ಆದರೆ ಕಳೆದ ನಾಲ್ಕು ದಿನಗಳ ಹಿಂದೆ ಇಂತಹದೆ ದೃಶ್ಯ ಮಾಡಿ ಬಿಂದಾಸ್ ಆಗಿ ಓಡಾಡಿಕೊಂಡು ಇದ್ದ ಆದರೆ ಯಾವ ಯುವತಿಯ ಪೋಟೋ ಗಳನ್ನು ಅಶ್ಲೀಲವಾಗಿ ಜೋಡಿಸಿ ಹಾಕಿದ ಆ ಯುವತಿ ಮಾತ್ರ ಮಾನಸಿಕವಾಗಿ ನಿರಾಸೆದಾಯಕ ವಾಗಿದ್ದಳು ಇದಕ್ಕಾಗಿ ಗ್ರಾಮದ ಯುವತಿಯರ ಗುಂಪು ಆಗಿರುವ ಅನ್ಯಾಯದ ವಿರುದ್ಧ ದೂರು ನೀಡಿದರೂ ಕೂಡಾ ಪೋಲಿಸರು ಆ ಯುವಕನನ್ನು ಬಂಧಿಸಿಲ್ಲ ಅಂತ ಆಕ್ರೋಶ ವ್ಯಕ್ತಪಡಿಸುತ್ತಾ ನಿನ್ನೆ ಸಂಜೆ ಖಾನಾಪೂರದ ಪೋಲಿಸ್ ಠಾಣೆಗೆ ಧಾಮಿಸಿ ಬೇಕೇ ಬೇಕು ನ್ಯಾಯ ಬೇಕು ಆತನಿಗೆ ಫಾಸಿ ನೀಡಿ ನಮ್ಮಗೆ ನ್ಯಾಯ ಒದಗಿ ಅಂತ ಗ್ರಾಮಸ್ಥರೊಂದಿಗೆ ಬಂದು ಪಟ್ಟು ಹಿಡಿದರು.

ಇದಕ್ಕೆ ಸಂಬಂಧಿಸಿದಂತೆ ಲೋಕೋಳಿ ಯುವತಿಯರು ಮಾತನಾಡಿ ನಮ್ಮ ಮಾನ ಮರ್ಯಾದೆ ಹರಾಜು ಮಾಡುತ್ತಿರುವ ಆ ಯುವಕನನ್ನು ಇನ್ನೂ ವರೆಗೂ ಬಂಧಿಸಿಲ್ಲ ಆತನು ಮಾನಸಿಕವಾಗಿ ಸರಿ ಇಲ್ಲ ಅಂತ ಹೇಳಿ ಹಾಗೆಯೇ ಸಮಯ ತೆಗೆಯುತ್ತಿದ್ದಾರೆ ಆತನು ಚೆನ್ನಾಗಿಯೇ ಇದ್ದಾನೆ ತಮ್ಮ ಮನೆಯವರ ಪೋಟೋ ಹಾಕಿಲ್ಲ ಒಳ್ಳೆಯ ಅರಿವೆಗಳನ್ನು ಹಾಕಿಕೊಂಡು ಓಡಾಡುತ್ತಾ ಇದ್ದಾನೆ ಇದರ ಮೊದಲೂ ಕೂಡ ಹಾಗೆಯೇ ಮಾಡಿಕೊಂಡು ಬಂದಿದ್ದಾನೆ ಆತನಿಗೆ ಕೂಡಲೇ ಬಂಧಿಸುವಂತೆ ಒತ್ತಾಯಿಸಿ ಧರಣಿ ನಡೆಸಿದರು ತದನಂತರದಲ್ಲಿ ಜಾಗೃತರಾದ ಪೋಲಿಸರು ಆತನನ್ನ ಕೊನೆಗೆ ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

ಒಟ್ಟಿನಲ್ಲಿ ಯುವತಿಯರ ಪಡೆ ನ್ಯಾಯಕ್ಕಾಗಿ ಪೋಲಿಸ್ ಠಾಣೆಯ ಮೆಟ್ಟಿಲು ಏರಿ ತನ್ನ ಗೌರವಕ್ಕೆ ಧಕ್ಕೆ ತರುವ ಬಿದಿ ಕಾಮುಕರಿಗೆ ಎಚ್ಚರಿಕೆ ಗಂಟೆ ಬಾರಿಸಿದ್ದಾರೆ.

ಅಲ್ತಾಫ್ ‌ಎಂ.ಬಸರೀಕಟ್ಟಿ
ಇನ್ ನ್ಯೂಸ್ ಖಾನಾಪೂರ

Tags: