ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಬಾಂಧಾರ ಕಾಮಗಾರಿ ಕಳಪೆ ಮಟ್ಟದಿಂದ ಕೂಡಿದ್ದು, ಎರಡೇ ವರ್ಷದಲ್ಲಿ ಎರಡೂ ಬದಿಯಲ್ಲಿ ಕುಸಿತ ಕಂಡಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಮಾಂಜರಿ ಗ್ರಾಮದ ಕೃಷ್ಣಾ ನದಿಗೆ ಸಣ್ಣ ನೀರಾವರಿ ಇಲಾಖೆ ವತಿಯಿಂದ ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಅವರು ಸಣ್ಣ ನೀರಾವರಿ ಇಲಾಖೆಯಿಂದ 50 ಕೋಟಿ ರೂಪಾಯಿ ವೆಚ್ಚದಲ್ಲಿ ಬಾಂಧಾರ ನಿರ್ಮಾಣ ಮಾಡಿ, 2 ವರ್ಷದಲ್ಲಿ ಎರಡೂ ಬದಿಯಲ್ಲಿ ಕುಸಿತ ಕಂಡಿದೆ. ಈ ಬಾಂಧಾರನಿಂದ ರಾಯಬಾಗ, ಚಿಂಚಲಿ, ಕುಡಚಿ, ದಿಗ್ಗೇವಾಡಿ, ಭಿರಡಿ, ಜಲಾಲಪುರ, ನಸಲಾಪುರ, ಮಾಂಜರಿ ಯಡೂರ, ಚಂದೂರ, ಇಂಗಳಿ ಗಡಿ ಭಾಗದ ಹಳ್ಳಿಗಳಿಗೆ ನೀರಿನ ಸೌಲಭ್ಯದೊಂದಿಗೆ ಸಂಪರ್ಕ ಕೊಂಡಿಯಾಗಿದೆ. ನೀರಿನ ಮಟ್ಟ ಕಡಿಮೆ ಆಗುತ್ತಿದ್ದಂತೆ ಬಾಂಧಾರ ದಡ ಭಾಗದಲ್ಲಿ ಕುಸಿತ ಕಂಡಿದೆ. ಇಂದರಿಂದ ನಿತ್ಯ ಓಡಾಟ ಮಾಡುವ ಜನರಿಗೆ ತೀವ್ರ ತೊಂದರೆ ಉಂಟಾಗಿದೆ.
ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಿಲ್ಲ. ಮೂರ್ನಾಲ್ಕು ದಿನದಿಂದ ಹಾಗೇ ಇದ್ದ ಈ ಸಮಸ್ಯೆಯನ್ನು ಕಂಡ ಬಾವನ ಸೌಂದತ್ತಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರಾಮಚಂದ್ರ ಕಾಟೆ ಅವರು ಗ್ರಾಮ ಪಂಚಾಯತಿ ಅನುದಾನದಲ್ಲಿ ಖಡಿ ತುಂಬುವ ಮೂಲಕ ರಸ್ತೆ ಮಾಡಿ ಕೊಡುವ ಮೂಲಕ ಮಾದರಿಯಾಗಿದ್ದಾರೆ. ಅವರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದರೆ ಸಂಬಂದ ಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿ, ಕಳಪೆ ಕಾಮಗಾರಿ ಮಾಡಿರುವ ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಇನ್ನೂ ಮಾಂಜರಿ ಗ್ರಾಮದ ಮುಖಂಡರಾದ ಸಿದ್ದಪ್ಪ ಗಾಯಾಗೋಳ ಮಾನತಾಡಿ, ಕಾಮಗಾರಿ ಮುಗಿಸಿ, ಎರಡೇ ವರ್ಷದಲ್ಲಿ ಬಾಂಧಾರ ಎರಡೂ ಬದಿಯಲ್ಲಿ ಕುಸಿತ ಕಂಡಿದ್ದು ಬೇಸರವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕಿದೆ. ಸಾರ್ವಜನಿಕರಿಗೆ ಸುಗಮವಾಗಿ ಸಂಚರಿಸಲು ಅನುಕೂಲ ಮಾಡಬೇಕು. ಈ ಕುರಿತು ಕ್ರಮ ಕೈಗೊಳ್ಳದಿದ್ದರೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.
ಬೈಟ್: ಸಿದ್ದಪ್ಪ ಗಾಯಗೋಳ,ಮಾಂಜರಿ ಗ್ರಾಮದ ಮುಖಂಡ
ಒಟ್ಟಿನಲ್ಲಿ ಸರ್ಕಾರ ಜನರ ಅನುಕೂಲಕ್ಕಾಗಿ ಮಾಡುವ ಅಭಿವೃದ್ಧಿ ಕಾಮಗಾರಿಗಳು ಈ ರೀತಿ ಯರ್ಯಾರದೋ ಬೇಜವಾಬ್ದಾರಿಯಿಂದಾಗಿ ಕಳಪೆಯಾಗಿ ಜನರಿಗೆ ತೊಂದರೆ ಉಂಟು ಮಾಡುತ್ತಿರುವುದು ಮಾತ್ರ ವಿಪರ್ಯಾಸವಾಗಿದೆ.
ಡಿ.ಕೆ.ಉಪ್ಪಾರ ಇನ್ ನ್ಯೂಸ್ ಚಿಕ್ಕೋಡಿ