Uncategorized

ಚಿನ್ನಮ್ಮ ವೃದ್ದಾಶ್ರಮದಲ್ಲಿರುವ ಹಿರಿಯ ಜೀವಗಳಿಗೆ ಸುರೇಶ ಯಾದವ ಫೌಂಡೇಶನ ವತಿಯಿಂದ ಬಟ್ಟೆ ವಿತರಣೆ

Share

ಬೆಳಗಾವಿ: ತಾಲೂಕಿನ ಬಸವನ ಕುಡಚಿ ದೇವರಾಜ ಅರಸ ಕಾಲನಿಯ ಚಿನ್ನಮ್ಮ ಬಸವಂತಯ್ಯ ಹಿರೇಮಠ ವೃದ್ದಾಶ್ರಮದಲ್ಲಿರುವ ಹಿರಿಯ ಜೀವಗಳಿಗೆ ಸುರೇಶ ಯಾದವ ಫೌಂಡೇಶನ ಹಾಗೂ ಸುರೇಶ ಯಾದವ ಅಭಿಮಾನಿಗಳ ಬಳಗದ ವತಿಯಿಂದ ಬಟ್ಟೆ ವಿತರಿಸಲಾಯಿತು. ಹಿರಿಯರಿಗೆ ಗೌರವ ಸೂಚಿಸುವ ಮೂಲಕ ನಾವೆಲ್ಲರೂ ಅವರನ್ನು ಮಕ್ಕಳಂತೆ ಕಾಣಬೇಕು ಎಂದು ಸಿಹಿ ಹಂಚಿ ದೀಪಾವಳಿ ಆಚರಿಸಲಾಯಿತು.

ಈ ವೇಳೆ ಸುರೇಶ ಯಾದವ ಫೌಂಡೇಶನ ಅಧ್ಯಕ್ಷರಾದ ಸುರೇಶ ಯಾದವ ಅವರು ಮಾತನಾಡಿ, ಮಕ್ಕಳಿಗಾಗಿ ಸರ್ವಸ್ವವನ್ನು ತ್ಯಾಗ ಮಾಡುವ ಪೋಷಕರನ್ನು ಕೊನೆಗಳಿಗೆಯಲ್ಲಿ ಪ್ರೀತಿ, ಗೌರವದಿಂದ ನಡೆದುಕೊಳ್ಳಬೇಕು ಎಂದರು.

ಹಿರಿಯರ ಅನುಭವದ ನುಡಿಗಳೇ ಯುವಪೀಳಿಗೆಗೆ ಗುಣಪಾಠವಾಗಿದ್ದು, ಅವರ ಮಾರ್ಗದರ್ಶನದಲ್ಲಿ ಉತ್ತಮ ಸಮಾಜ ಕಟ್ಟಲು ಶ್ರಮಿಸಬೇಕಿದೆ. . ಅವರು ನಮ್ಮನ್ನು ಕಷ್ಟಪಟ್ಟು ಬೆಳೆಸಿ, ವಿದ್ಯಾವಂತರನ್ನಾಗಿ ಮಾಡಿರುತ್ತಾರೆ. ಅವರ ಮುಪ್ಪಿನ ಕಾಲದಲ್ಲಿ ಗೌರವದಿಂದ ನಡೆಸಿಕೊಳ್ಳುವುದು ಸಭ್ಯ ಸಮಾಜದ ಕರ್ತವ್ಯವಾಗಿದೆ ಎಂದರು.

ಆದರೆ, ಮಕ್ಕಳು ದೊಡ್ಡವರಾದ ಮೇಲೆ ವಿದೇಶಕ್ಕೆ ಹಾರುತ್ತಾರೆ. ಹಣ ಸಂಪಾದನೆಯ ನೆಪದಲ್ಲಿ ಪೋಷಕರು ತಂದೆ ತಾಯಿಗಳ ಮರತೇ ಹೋಗುತ್ತಾರೆ. ಹೆತ್ತು ಹೊತ್ತವರನ್ನು ವೃದ್ದಾಶ್ರಮ ಸೇರಿಸಿ ಮನುಷ್ಯತ್ವ ಕಳೆದುಕೊಳ್ಳುತ್ತಾರೆ. ನಾವು ಬಿತ್ತಿದ್ದನ್ನು ನಾವೇ ಉಣ್ಣಬೇಕು ಅನ್ನೋ ಮಾತಿದೆ. ಆದರೆ ನಮ್ಮ ವೃದ್ಧರಿಗೆ ಇದು ಸಿಗುತ್ತಿಲ್ಲ. ಅವರ ಕೊನೆಯ ದಿನಗಳಲ್ಲಿ ಅವರಿಗೆ ಮುಖದಲ್ಲಿ ನೋವೇ ಹೆಚ್ಚಾಗಿರುತ್ತದೆ ವಿಷಾದ ವ್ಯಕ್ತಪಡಿಸಿದರು.

ಆಶ್ರಮದ ಉಸ್ತುವಾರಿ ಎಮ್. ಸ. ಚೌಗಲೆ ಸವಿಸ್ತಾರವಾಗಿ ಹೇಳಿದರು. ಈ ಸಂದರ್ಭದಲ್ಲಿ ಮಲ್ಲಾರಿ ದೀಕ್ಷಿತ್, ಸ್ನೇಹಲ ಬೆಳ್ಳಿ, ಆರತಿ ದಿಕ್ಸಿತ, ಅಕ್ಷಯ ಅಂಬಡಗಟ್ಟಿ, ಮಹಾದೇವ ಟೋನ್ನಿ, ಮಾರುತಿ ತೆಲಸಂಗ, ಪ್ರಸನಗೌಡ ಪಾಟೀಲ, ಪ್ರಭು ಶಿವನಾಯಕ, ನಾನಾಗೌಡ ಬಿರಾದಾರ, ನಿತ್ಯಾ ಜಾಮದಾರ, ಚಂದ್ರಶೇಖರ ಸುಗಂಧಿ,ಸುನಂದಾ ಅಳ್ಳಟ್ಟಿ ,ಪ್ರೀತಿ ಜನಗೌಡ ಮತ್ತು ಜಾನಕಿ ಮುಂತಾದವರು ಉಪಸ್ಥಿರಿದ್ದರು.

Tags: