ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ ಬೆಳಗಾವಿ ಹಾಗೂ ತಾಲೂಕಾ ಆರೋಗ್ಯಾಧಿಕಾರಿಗಳ ಕಚೇರಿ, ಬೆಳಗಾವಿಯಿಂದ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಬೆಳಗಾವಿಯ ಜಿಲ್ಲಾ ಆಸ್ಪತ್ರೆಯಲ್ಲಿ ತೀವ್ರತರ ಅತಿಸಾರ ಬೇಧಿ ನಿಯಂತ್ರಣ ಪಾಕ್ಷಿಕ-2023 ಹಾಗೂ ನವಜಾತ ಶಿಶು ಆರೈಕೆ ಸಪ್ತಾಹದ ಜಿಲ್ಲಾ ಮಟ್ಟದ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ಮಹೇಶ ಕೋಣಿ ಅವರು ಸಸಿಗೆ ನೀರುಣಿಸುವದರ ಮೂಲಕ ಅವರು ಕಾರ್ಯಕ್ರಮದ ಉದ್ಘಾಟನೆಯನ್ನು ನೇರವೇರಿಸಿ ಮಾತನಾಡಿ ಅತಿಸಾರ ಬೇಧಿಯಿಂದ ನಿರ್ಜಲಿಕರಣಗೊಂಡ ಮಕ್ಕಳಿಗೆ ಜಿಂಕ್ ಮತ್ತು ಓ.ಆರ್.ಎಸ್ ದ್ರಾವಣ ನೀಡುವದರಿಂದ ಮಕ್ಕಳಲ್ಲಿ ಆಗಿರುವಂತಹ ಅಸ್ವಸ್ಥತೆಯನ್ನು ತಡೆಗಟ್ಟಬಹುದು ಮತ್ತು ಮಕ್ಕಳಲ್ಲಿ ಆಗುವಂತಹ ಅನಾರೋಗ್ಯವನ್ನು ತಪ್ಪಿಸಬಹುದು ಎಂದು ತಿಳಿಸಿದರು. ಅಧ್ಯಕ್ಷತೆಯನ್ನು ವಹಿಸಿದ ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ವಿ.ವಿ ಶಿಂಧೆ ವಹಿಸಿಕೊಂಡು ಮಾತನಾಡಿ ವೈಯಕ್ತಿಕ್ತ ಶುಚ್ಚಿತ್ವ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಡಾ. ಸಂಜಯ ಡುಮ್ಮಗೋಳ ತಾಲೂಕಾ ಆರೋಗ್ಯಾಧಿಕಾರಿಗಳು, ಲಗಮ್ಮನ್ನಾ ಪಂಗನ್ನವರ ಶುಶೂಷಣಾ ಮೆಂಟರನ್ನ ಬಿಮ್ಸ್ ಆಸ್ಪತ್ರೆ ಬೆಳಗಾವಿ, ಶಿವಾಜಿ ಪ್ರಭಾರಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳು, ಪ್ರಕಾಶ ಹಕಾಟ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರು ಹಾಗೂ ಬೋಧಕರು ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯವರು ಉಪಸ್ಥಿತರಿದ್ದರು. ಜಿಲ್ಲಾ ಸಂತಾನೋತ್ಪತ್ತಿ ಹಾಗೂ ತಾಯಿ ಮಕ್ಕಳ ಮತ್ತು ಲಸಿಕಾ ಅಧಿಕಾರಿ ಡಾ.ಚೇತನ ಕಂಕಣವಾಡಿ ಸ್ವಾಗತಿಸಿದರು. ಬಸವರಾಜ ಪಿ ಯಲಿಗಾರ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳು ನಿರೂಪಿಸಿ ವಂದಿಸಿದರು. ರಾಷ್ಟ್ರೀಯ ಆರೋಗ್ಯ ಅಭಿಯಾನ ವಿಭಾಗದವರು ಕಾರ್ಯಕ್ರಮ ಸಂಘಟಿಸಿದರು.