Uncategorized

ಡಿಸೆಂಬರ್ 7ರಂದು ಶ್ರೀ ಸಿದ್ಧರಾಮೇಶ್ವರ ಪ್ರೌಢಶಾಲೆಯ ಸುವರ್ಣ ಮಹೋತ್ಸವ:ಕೆ ಡಿ ಹಿರೇಮಠ

Share

ನಮ್ಮ ನಾಡಿನ ಮಠಗಳಲ್ಲಿ ಒಂದಾದ ಶ್ರೀ ನಾಗನೂರು ರುದ್ರಾಕ್ಷಿಮಠದ ಲಿಂಗೈಕ್ಯ ಡಾಕ್ಟರ್ ಶಿವಬಸವ ಮಹಾಸ್ವಾಮಿಗಳು ಸ್ಥಾಪಿಸಿರುವ ಶ್ರೀ ಸಿದ್ದರಾಮೇಶ್ವರ ಎಜುಕೇಷನ್ ಟ್ರಸ್ಟನಲ್ಲಿ ಅನೇಕ ಬಡ ವಿದ್ಯಾರ್ಥಿಗಳು ಸೌಲಭ್ಯವನ್ನ ಪಡೆದಿದ್ದಾರೆ ಪ್ರಾಥಮಿಕ ಹಾಗು ಪ್ರೌಢ ಶಾಲೆಗಳು ೫೦ ವರ್ಷಗಳನ್ನ ಪೂರೈಸಿ ಸುವರ್ಣ ಮಹೋತ್ಸವದ ಅಂಚಿನಲ್ಲಿ ಇದ್ದಾವೆ ಎಂದು ಕಾರ್ಯದರ್ಶಿ ಕೆ ಡಿ ಹಿರೇಮಠ ಹೇಳಿದರು ,

ನಾಗನೂರು ಸ್ವಾಮಿಗಳು ಎಂದೇ ಖ್ಯಾತರಾದ ಕಾಯಕಯೋಗಿ, ಮಹಾಪ್ರಸಾದಿ ಪೂಜ್ಯಶ್ರೀ ಡಾ. ಶಿವಬಸವ ಮಹಾಸ್ವಾಮಿಗಳು 1969 ರಲ್ಲಿ ಸ್ಥಾಪಿಸಿದ ಶ್ರೀ ಸಿದ್ಧರಾಮೇಶ್ವರ ಪ್ರೌಢಶಾಲೆಗೆ ಇದೀಗ ಸುವರ್ಣ ಸಂಭ್ರಮ, ಸುವರ್ಣ ಮಹೋತ್ಸವವನ್ನು ಗುರುವಾರ 7 ಡಿಸೆಂಬರ್ 2023 ರಂದು ಸಾ. 6 ಗಂಟೆಗೆ ಆಚರಿಸಲಾಗುತ್ತಿದೆ. ಶ್ರೀ ಮನ್ಮಹಾರಾಜ ನಿರಂಜನ ಜಗದ್ಗುರು ಡಾ. ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳು, ಮೂರುಸಾವಿರಮಠ ಹುಬ್ಬಳ್ಳಿ ಹಾಗು ಶ್ರೀ ಮನ್ಮಹಾರಾಜ ನಿರಂಜನ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು, ಗದಗ ಇವರುಗಳ ದಿವ್ಯಸಾನಿಧ್ಯದಲ್ಲಿ ಜರುಗುವ ಸುವರ್ಣ ಮಹೋತ್ಸವ ಸಮಾರಂಭವನ್ನು ನಿವೃತ್ತ ಆಯ್.ಎ.ಎಸ್. ಅಧಿಕಾರಿಗಳಾದ ಡಾ. ಎಸ್. ಎಮ್. ಜಾಮದಾರ ಅವರು ಉದ್ಘಾಟಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ನಾಗನೂರು ರುದ್ರಾಕ್ಷಿಮಠದ ಪೂಜ್ಯ ಶ್ರೀ ಅಲ್ಲಮಪ್ರಭು ಮಹಾಸ್ವಾಮಿಗಳು, ನೇತೃತ್ವವನ್ನು ಹಂದಿಗುಂದ ವಿರಕ್ತಮಠದ ಶ್ರೀ ಶಿವಾನಂದ ಸ್ವಾಮಿಗಳು, ಕಿತ್ತೂರು ಕಲ್ಮಠದ ಶ್ರೀ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು ಹಾಗು ಪಿ ಜಿ ಹುಣಶ್ಯಾಳದ ಪೂಜ್ಯಶ್ರೀ ನಿಜಗುಣ ದೇವರು ವಹಿಸಲಿದ್ದಾರೆ. ಶ್ರೀ ಸಿದ್ಧರಾಮೇಶ್ವರ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿ ವಿವಿಧ ಕ್ಷೇತ್ರಗಳಲ್ಲಿ ಅಪ್ರತಿಮ ಸಾಧನೆಗೈದ ಸಾಧಕರನ್ನು ಈ ಸಮಾರಂಭದಲ್ಲಿ ಗೌರವಿಸಲಾಗುವುದು. ಇದೇ ಸಂದರ್ಭದಲ್ಲಿ ಸ್ಮರಣ ಸಂಚಿಕೆಯೊಂದನ್ನು ಹೊರತರಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಟ್ರಸ್ಟನ ನಿರ್ದೇಶಕ ಎ ಜಿ ಮಲಗಲಿ ,ವಕೀಲರಾದ ಡಿ ಎಂ ಪಾಟೀಲ ,ಬಿ ಎಂ ಹತ್ತಿಗಂಡರ ,ಎಂ ಬಿ ಶಿವಪುಜಿ ,ಬಿ ಎ ಕೋಟೆವಾಲೆ ಉಪಸ್ಥಿತರಿದ್ದರು.

Tags: