ಬೆಳಗಾವಿ ಜನತೆಗೆ ಶುಚಿ ರುಚಿ ವೈವಿಧ್ಯಮಯ ಆಹಾರವನ್ನು ಒದಗಿಸುವ ನಿಟ್ಟಿನಲ್ಲಿ ಯುವ ಉದ್ಯಮಿ ಚೇತನ್ ಅಂಗಡಿ ಬೆಳಗಾವಿಯ ನೆಹರು ನಗರ ಕನ್ನಡ ಭವನ ಹತ್ತಿರದ ಇಶಾನ್ ಆರ್ಕೆಡ್ ನಲ್ಲಿ ಜೋಕಾ ಡೈನರ್ ಹೋಟೆಲ್ ನ್ನು ನಿರ್ಮಿಸಿದ್ದಾರೆ ಆಹಾರ ಪ್ರಿಯರೆ ಇಂದೇ ಭೇಟಿ ಕೊಡಿ ಉತ್ತಮ ಗುಣ ಮಟ್ಟದ ಆಹಾರ ಸವಿದು ಆರೋಗ್ಯದಿಂದ ಬಾಳಿ.
ಆದುನಿಕ ಯುಗದಲ್ಲಿ ವೇಗವಾಗಿ ಬೆಳೆಯುತ್ತಿರುವ ಸಮಾಜದಲ್ಲಿ ಹೋಟೆಲ ಉದ್ಯಮವು ಬೆಳೆಯುತ್ತಿದೆ ಸ್ಮಾರ್ಟ್ ಸಿಟಿ ,ಎರಡನೇ ರಾಜಧಾನಿ ಎಂದು ಗುರುತಿಸಲ್ಪಟ್ಟ ಕುಂದಾನಗರಿ ಅನೇಕ ರಂಗದಲ್ಲಿ ಮುಂಚೂಣಿಯಲ್ಲಿದೆ ಬೆಳಗಾವಿಯ ಅಭಿವೃದ್ಧಿ ಹರಿಕಾರ ಅನೇಕ ಜನರಿಗೆ ಆಶ್ರಯದಾತರಾಗಿದ್ದ ಕೇಂದ್ರ ರೇಲ್ವೆ ಸಚಿವರಾಗಿದ್ದ ದಿವಂಗತ ಸುರೇಶ ಅಂಗಡಿಯವರ ಸಹೋದರರ ಸುಪುತ್ರ ಚೇತನ ಅಂಗಡಿ ಅವರು ಸುರೇಶ ಅಂಗಡಿಯವರ ಮಾರ್ಗದಲ್ಲೇ ನಡೆದು ಜನಸೇವೆ ಮಾಡುತ್ತಿದ್ದಾರೆ ಸದಾ ಯುವಕರ ಒಡನಾಡಿಯಾಗಿ ಸಮಾಜಕ್ಕೆ ಕೊಡುಗೆ ನೀಡಬೇಕೆಂಬ ಉದ್ದೇಶ ಇಟ್ಟುಕೊಂಡು ಸಮಾಜ ಸೇವೆಯಲ್ಲಿ ಮಿಂಚಿನಂತೆ ಸಂಚರಿಸುತ್ತಿದ್ದಾರೆ ರಾಜಕೀಯ ,ಶೈಕ್ಷಣಿಕ ,ಸಾಮಾಜಿಕ ರಂಗದಲ್ಲಿ ಚಿರಪರಿಚಿತರಾದ ಯುವ ಉದ್ಯಮಿ ಹೋಟೆಲ್ ಉದ್ಯಮದಲ್ಲೂ ಪಾದಾರ್ಪಣೆ ಮಾಡಿ ಜನ ಸೇವೆ ಮಾಡಲು ಮುಂದಾಗಿದ್ದಾರೆ . ಯುವ ಉದ್ಯಮಿ ಚೇತನ ಅಂಗಡಿ ಅವರ ಹಿಂದೆ ಸದಾ ಮಾರ್ಗದರ್ಶನ ಮಾಡುತ್ತಿದ್ದ ಸುರೇಶ ಅಂಗಡಿಯವರ ಅನುಪಸ್ಥಿತಿಯಲ್ಲಿ ಸಂಸದೆ ಮಂಗಲಾ ಅಂಗಡಿ ಬೆನ್ನುತಟ್ಟುತ್ತಿದ್ದಾರೆ ಅದೇ ರೀತಿ ಮಡದಿಯನ್ನ ಎರಡನೇ ತಾಯಿಯಂದು ಕರೆಯುತ್ತಾರೆ . ಚೇತನ ಅಂಗಡಿಯವರ ಧರ್ಮಪತ್ನಿ ಜಾನ್ವಿ ಅಂಗಡಿಯವರು ಎಲ್ಲಾ ಸಮಯದಲ್ಲೂ ಸಹಕರಿಸುವ ಕೆಲಸ ಮಾಡುತ್ತಿದ್ದಾರೆ .
ಹಿಂದೆ ಗುರು ಮುಂದೆ ಗುರಿ ಯಂಬ ಮಾತಿನಂತೆ ಕರ್ನಾಟಕ ರಾಜ್ಯ ಬಿಸಿಯೂಟ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷರಾದ ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಹಾಗು ಕೇದಾರಪೀಠದ ಶಾಖಾ ಮಠ ಮುತ್ನಾಳ ಹಿರೇಮಠದ ಶ್ರೀ ಶಿವಾನಂದ ಶಿವಾಚಾರ್ಯ ಮಹಾಸ್ವಾಮಿಗಳು ಕೂಡಾ ಚೇತನ ಅಂಗಡಿಯವರಿಗೆ ಸದಾ ಆಶೀರ್ವಾದ ಮಾಡುತ್ತಿದ್ದಾರೆ ಶಿಷ್ಯನ ವಿನೂತನ ಕಾರ್ಯಕ್ಕೆ ಹೋಟೆಲಗೆ ಆಗಮಿಸಿ ಆಶೀರ್ವದಿಸಿ ಇನ್ನು ಎತ್ತರಕ್ಕೆ ಚೇತನ ಅಂಗಡಿಯವರು ಬೆಳೆಯಲಿ ಎಂದು ಮನದುಂಬಿ ಆಶೀರ್ವದಿಸಿದ್ದಾರೆ . ಸಂಸದೆ ಮಂಗಲಾ ಸುರೇಶ ಅಂಗಡಿ ,ರಾಜ್ಯ ಸಭಾ ಸದಸ್ಯ ಈರಣ್ಣಾ ಕಡಾಡಿ ,ಮಾಜಿ ವಿಧಾನ ಪರಿಷತ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ,ಮಾಜಿ ಶಾಸಕ ಸಂಜಯ ಪಾಟೀಲ ,ಸೇರಿದಂತೆ ಹಲವು ರಾಜಕೀಯ ಗಣ್ಯರು ಅಧಿಕಾರಿಗಳು ಆಗಮಿಸಿ ಫಲ ಪುಷ್ಪ ,ಬೊಕ್ಕೆಗಳನ್ನು ನೀಡಿ ಯುವ ಮುಖಂಡನ ಕಾರ್ಯಕ್ಕೆ ಹುರಿದುಂಬಿಸುವ ಕಾರ್ಯ ಮಾಡಿದ್ದಾರೆ .
ಈ ಸಂದರ್ಭದಲ್ಲಿ ಉದ್ಘಾಟನೆ ಕಾರ್ಯಕ್ಕೆ ಆಗಮಿಸಿದ ಗಣ್ಯರಿಗೆ ಸತ್ಕರಿಸಿ ಧನ್ಯವಾದ ಅರ್ಪಿಸಿ ಇನ್ ನ್ಯೂಸ್ ವಾಹಿನಿ ಜೊತೆಗೆ ಮಾತನಾಡಿದ ಉದ್ಯಮಿ ಚೇತನ ಅಂಗಡಿ ಮೊದಲಿಗೆ ಕೇಂದ್ರ ರೇಲ್ವೆ ಸಚಿವರಾಗಿದ್ದ ದಿವಂಗತ ಸುರೇಶ ಅಂಗಡಿಯವರನ್ನ ಸ್ಮರಿಸಿ ಮಾತನಾಡುತ್ತಾ ನಮ್ಮ ದೊಡ್ಡಪ್ಪ ಸುರೇಶ ಅಂಗಡಿ ಯವರನ್ನ ನೆನೆಯುವುದು ನನ್ನ ಕರ್ತವ್ಯ ಅವರ ಆಶೀರ್ವಾದದಿಂದ ನಾವು ಇವತ್ತು ಉದ್ಯಮ ರಂಗದಲ್ಲಿ ಬೆಳೆದಿದ್ದೇವೆ, ನಾವು ಮೊದಲಿಗೆ ಸಿಮೆಂಟ್ ವ್ಯಾಪಾರದಿಂದ ಉದ್ಯಮದಲ್ಲಿ ಪಾದಾರ್ಪಣೆ ಮಾಡಿದ್ದೇವೆ ದಿವಂಗತ ಸುರೇಶ ಅಂಗಡಿಯವರು ಶಿಕ್ಷಣರಂಗದಲ್ಲಿ ಬೆಳೆದು ಅನೇಕ ವಿದ್ಯಾರ್ಥಿಗಳಿಗೆ ದಾರಿದೀಪವಾಗಿದ್ದಾರೆ ಅವರ ಮಾರ್ಗದಲ್ಲಿ ನಾನು ನಡೆಯುತ್ತಿದ್ದೇನೆ ಹೋಟೆಲ್ ಉದ್ಯಮದಲ್ಲಿ ಪಾದಾರ್ಪಣೆ ಮಾಡುವ ಹಂಬಲ ಅನೇಕ ವರ್ಷಗಳಿಂದ ನನ್ನಲ್ಲಿ ಇತ್ತು ಸಂಸದೆ ಮಂಗಲಾ ಅಂಗಡಿ ತಾಯಿ ಸ್ಥಾನದಲ್ಲಿ ಇದ್ದುಕೊಂಡು ಸದಾ ಮಾರ್ಗದರ್ಶನ ಮಾಡುತ್ತಿದ್ದಾರೆ ಅದೇ ರೀತಿ ನಮ್ಮ ತಂದೆ ಮೋಹನ ಅಂಗಡಿ ಅವರು ಬೆಂಗಾವಲಾಗಿ ನನ್ನ ಎಲ್ಲಾ ಕೆಲಸಕ್ಕೂ ಉತ್ತೇಜನ ಮಾಡುತ್ತಿದ್ದಾರೆ . ನೆಹರು ನಗರದಲ್ಲಿ ಹೋಟೆಲ್ ನಿರ್ಮಿಸಿ ಜನರಿಗೆ ಉತ್ತಮ ಗುಣಮಟ್ಟದ ಆಹಾರ ನೀಡಬೇಕೆಂಬುದನ್ನ ಅನೇಕ ವರ್ಷಗಳಿಂದ ಅಂದುಕೊಂಡಿದ್ದೆ ಈ ಭಾಗದಲ್ಲಿ ಅನೇಕ ಕಾಲೇಜಗಳು ಶಿಕ್ಷಣ ಸಂಸ್ಥೆಗಳು ಇವೆ . ನನ್ನ ಕನಸ್ಸನ್ನು ಸಾಕಾರ ಮಾಡಿದ್ದೂ ಚೋಕಾ ಹೋಟೆಲ್ ,ಈ ಜೋಕಾ ಬ್ರಾಂಡ್ ಮೂಲತಃ ದೆಹಲಿಯದ್ದು ಕರ್ನಾಟಕದಲ್ಲಿ ಪ್ರಥಮಬಾರಿಗೆ ದಾವಣಗೆರೆಯಲ್ಲಿ ನಿರ್ಮಾಣವಾಗಿತ್ತು ಆಹಾರವನ್ನು ಸವಿದಾಗ ತುಂಬಾ ಒಳ್ಳೆಯ ಗುಣಮಟ್ಟದ ಆಹಾರವಾಗಿತ್ತು ಜೋಕಾ ಡೈನರ್ ಹೋಟೆಲನಲ್ಲಿ ನಾರ್ಥ್ ಇಂಡಿಯನ್ ಡಿಸ್ಸಿಸ್ ,ಮಲ್ಟಿ ಕ್ಯೂಜಿನ್ ಕಾಂಟಿನೆಂಟಲ್ ಫುಡ್ ಸ್ಯಾಂಡ್ವಿಜ್ ,ಪಿಜ್ಜಾ ,ಬರಗರ ಸೇರಿದಂತೆ ಹಲವು ಪದಾರ್ಥಗಳಿವೆ ,ನಮ್ಮ ಜೋಕಾ ಹೋಟೆಲ್ ಪಕ್ಕದಲ್ಲಿ ೪ ರಿಂದ ೫ ಕಾಲೇಜಇದ್ದಾವೆ ಬೆಳಗಾವಿ ವಿದ್ಯಾರ್ಥಿಗಳು ,ನಾರ್ಥ ಇಂಡಿಯನ್ ವಿದ್ಯಾರ್ಥಿಗಳು ,ಗೋವಾದಿಂದ ಬಂದಂತಹ ಯುವಕ ಯುವತಿಯರು ಇದ್ದಾರೆ ಅವರಿಗೆಲ್ಲ ಗುಣಮಟ್ಟ ಆಹಾರ ನೀಡಬೇಕೆಂಬುದು ಮೂಲ ಉದ್ದೇಶವಾಗಿದೆ ಅನೇಕ ರೀತಿ ವಿಧವಿಧವಾದ ಆಹಾರಗಳು ನಮ್ಮಲ್ಲಿ ದೊರೆಯುತ್ತವೆ ಸಾಮಾನ್ಯವಾಗಿ ಹೋಟೆಲಗಳಿಗೆ ದಾಬಾಗಳಿಗೆ ಊಟಕ್ಕೆ ಹೋದಾಗ ನಾರ್ಥ್ ಇಂಡಿಯನ್ಸ್ ಆಹಾರ ಮಾತ್ರ ಸಿಗುತ್ತೆ ಆದರೆ ಜೋಕಾ ಹೋಟೆಲನಲ್ಲಿ ಮಲ್ಟಿ ಕ್ಯೂಜಿನ್ ಕಾಂಟಿನೆಂಟಲ್ ಆಹಾರ ಸಿಗುತ್ತದೆ ಎಲ್ಲರು ಕುಟುಂಬ ಸಮೇತ ಆಗಮಿಸಿ ಉತ್ತಮ ಆಹಾರ ಸವಿಯಿರಿ ಉದ್ಘಾಟನೆ ಕಾರ್ಯಕ್ರಮಕ್ಕೆ ಅನೇಕ ಸ್ವಾಮೀಜಿಗಳು ,ರಾಜಕೀಯ ಗಣ್ಯರು ಕುಟುಂಬದವರು ,ಸ್ನೇಹಿತರು ಯುವಕರು ಆಗಮಿಸಿ ಶುಭ ಹಾರೈಸಿದ್ದಾರೆ ೨೦ ತಾರೀಕಿಗೆ ಗ್ರಾಹಕರಿಗೆ ಗುಣಮಟ್ಟದ ಆಹಾರ ನೀಡಲು ನಾವೇ ತಯಾರಿದ್ದೇವೆ ಎಲ್ಲರು ಆಗಮಿಸಿ ಶುಚಿ ರುಚಿ ಆಹಾರ ಸವಿಯಿರಿ ಎಂದರು .
ಈ ಸಂದರ್ಭದಲ್ಲಿ ಬಿಜೆಪಿಯ ಯುವ ಮುಖಂಡ ಮುರಗೇಂದ್ರಗೌಡಾ ಪಾಟೀಲ ,ಮಾಳಮಾರುತಿ ಠಾಣೆಯ ಸಿಪಿಐ ಕಾಳಿಮಿರ್ಚಿ ,ಬಿಜೆಪಿಯ ಯುವ ಮುಖಂಡ ವಿರೇಶ ಕಿವಡಸಣ್ಣನವರ,ಕಾರ್ಪೊರೇಟರ ರಾಜು ದೋಣಿ ,ಕಾಂಗ್ರೇಸ ಯುವ ಮುಖಂಡ ಮೃಣಾಲ್ ಹೆಬ್ಬಾಳಕರ ,ಮಾರುತಿ ಜಿರಲಿ ,ಧನಂಜಯ ಜಾಧವ ,ಸೈಯದ್ ಹಾಗು ಮುಜಾಹಿದ್ ,ಮಹಾಂತೇಶ ವಕ್ಕುಂದ ಸೇರಿದಂತೆ ಅನೇಕ ಗಣ್ಯಾತಿ ಗಣ್ಯರು ಯುವಕರು ಆಗಮಸಿ ಯುವ ಉದ್ಯಮಿ ಚೇತನ ಅಂಗಡಿ ಅವರಿಗೆ ಶುಭ ಹಾರೈಸಿದರು