ಗೃಹ ಸಚಿವ ಜಿ ಪರಮೇಶ್ವರ ಬೆಳಗಾವಿ ಭೇಟಿ ಹಿನ್ನೆಲೆಯಲ್ಲಿ ನಗರದ ಹಿಂಡಲಗಾ ಜೈಲಗೆ ದಿಡೀರ ಭೇಟಿ ನೀಡಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳ ಬಗ್ಗೆ ಜೈಲ್ ಅಧಿಕಾರಿಗಳಿಗೆ ಸಕತ್ ಕ್ಲಾಸ್ ತೆಗೆದುಕೊಂಡರು
ಬೆಳಗಾವಿ ಹಿಂಡಲಗಾ ಕಾರಾಗೃಹ ಅನೇಕ ವಿಚಾರಗಳ ಕುರಿತು ಚರ್ಚೆಯಲ್ಲಿದೆ ಈ ಹಿಂದೆ ಕಾರಾಗೃಹದಲ್ಲಿ ಕೈದಿಗಳಿಗೆ ಪೊಬೈಲ್ ನೀಡುವುದು ಮತ್ತು ಕೈದಿಗಳ ನಡುವೆ ಮಾರಾ ಮಾರಿ ವಿಚಾರ ಕೈದಿಗಳಿಂದ ಬೆದರಿಕೆ ಕರೆ ಮತ್ತು ಅಕ್ರಮ ಚಟುವಟಿಕೆಗಳು ಸಾಕಷ್ಟು ಸುದ್ದಿಗಳು ಕೇಳಿಬಂದಿದ್ದವು ಈ ವಿಷಯಗಳನ್ನ ಗೃಹ ಮಂತ್ರಿ ಗಂಭೀರವಾಗಿ ಪರಿಗಣಿಸಿ ಇಂದು ಸೋಮವಾರ ಬೆಳಗಾವಿ ಭೇಟಿ ಹಿನ್ನೆಲೆಯಲ್ಲಿ ವಿಷಯ ತಿಳಿಸದೇ ದಿಡೀರನೆ ಭೇಟಿ ನೀಡಿದ್ದಾರೆ . ತದ ನಂತರ ಮೇಲಧಿಕಾರಿಗಳಿಗೆ ಕಾರಾಗೃಹದ ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಖಡಕ್ ಆಗಿ ಸೂಚನೆ ರವಾನೆ ಮಾಡಿದ್ದಾರೆ .
ಮಾಧ್ಯಮಗಳೊಂದಿಗೆ ಮಾತನಾಡಿ ಅವರು ಹಿಂಡಲಗಾ ಕಾರಾಗೃಹದಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಬಗ್ಗೆ ನನಗೆ ಹಲವು ಬಾರಿ ದೂರುಗಳು’ಬಂದಿದ್ದವು ಅವುಗಳನ್ನು ನಾನು ಗಂಭೀರವಾಗಿ ಪರಿಗಣಿಸಿ ಇಂದು ಭೇಟಿ ನೀಡಿ ಪರಿಶೀಲನೆ ಮಾಡಿದ್ದೇನೆ ಮುಂದೆ ಅಹಿತಕರ ಘಟನೆ ನಡೆಯದಂತೆ ಸೂಕ್ತ ಕ್ರಮ ಜಾರಿಮಾಡುವಂತೆ ಮೇಲಧಿಕಾರಿಗಳಿಗೆ ಹಾಗು ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದೇನೆ ಎಂದರು
ಒಟ್ಟಿನಲ್ಲಿ ಬೆಳಗಾವಿ ಹಿಂಡಲಗಾ ಕಾರಾಗೃಹದಲ್ಲಿ ಈ ತರ ನಡೆಯುವ ಘಟನೆಗಳಿಗೆ ಯಾವಾಗ ಬ್ರೇಕ್ ಬೀಳುತ್ತೆ ಎಂಬುದನ್ನು ಕಾದುನೋಡಬೇಕಿದೆ.
Uncategorized
ಹಿಂಡಲಗಾ ಕಾರಾಗೃಹಕ್ಕೆ ಗೃಹ ಸಚಿವ ಜಿ ಪರಮೇಶ್ವರ ದಿಡೀರ ಭೇಟಿ : ಅಧಿಕಾರಿಗಳಿಗೆ ಖಡಕ ವಾರ್ನಿಂಗ್
