ರಾಜ್ಯರಾಜಕಾರಣದಲ್ಲಿ ಏನು ನಡೆಯುತ್ತಿದೆ ? ಯಾರಿಗೂ ಅರ್ಥವಾಗದ ಗೊಂದಲದ ಘಳಿಗೆಯಲ್ಲಿ ಬೆಳಗಾವಿ ಜಿಲ್ಲೆಯ ಯರಗಟ್ಟಿಯಲ್ಲಿ ನಡೆದ ಕನ್ನಡದ ಜಾತ್ರೆ ಕಾರ್ಯಕ್ರಮದಲ್ಲಿ ಜಿಲ್ಲೆಯ ಗಣ್ಯ ವ್ಯಕ್ತಿಯೊಬ್ಬರು ಮಹತ್ವದ ಸುಳಿವು ಕೊಟ್ಟಿದ್ದಾರೆ. ಪೂರ್ವ ದಿಕ್ಕಿನಲ್ಲಿ ಸೂರ್ಯ ಹುಟ್ಟುವದು ಎಷ್ಟು ಸತ್ಯವೋ ಮಾಸ್ಟರ್ ಮೈಂಡ್, ಸತೀಶ್ ಜಾರಕಿಹೊಳಿ ಅವರು ಮುಂದಿನ ಸಿಎಂ ಆಗುವದು ಅಷ್ಟೇ ಸತ್ಯ. ಎಂದು ಹೇಳಿದವರು ಸವದತ್ತಿ ಯಲ್ಲಮ್ಮನ ಕ್ಷೇತ್ರದ ಶಾಸಕ,ಸತೀಶ್ ಜಾರಕಿಹೊಳಿ ಪರಮಾಪ್ತ ವಿಶ್ವಾಸ್ ವೈದ್ಯ ಅವರು ಹೇಳಿದ ಮಾತು ಇದಾಗಿದೆ.
ಸತೀಶ್ ಜಾರಕಿಹೊಳಿ ಅವರು ಒಂದು ದಿನ ಸಿಎಂ ಆಗ್ತಾರೆ ಎನ್ನುವ ಪೋಸ್ಟರ್ ಗಳು ಹಲವಾರು ವರ್ಷಗಳಿಂದ ಸತೀಶ್ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಆದ್ರೆ ಶಾಸಕರೊಬ್ಬರು ಸತೀಶ್ ಜಾರಕಿಹೊಳಿ ಅವರೇ ಮುಂದಿನ ಸಿಎಂ ಎಂದು ಬಹಿರಂಗವಾಗಿ ಸಾರ್ವಜನಿಕ ಸಭೆಯೊಂದರಲ್ಲಿ ಹೇಳುವ ಮೂಲಕ ರಾಜ್ಯರಾಜಕರಾರಣದ ಮಹತ್ವದ ಬೆಳವಣಿಗೆ ಮತ್ತು ಅದರ ಫಲಿತಾಂಶವನ್ನು ಪ್ರಕಟಿಸಿದ್ದಾರೆ. ಈ ಮೊದಲೇ ಕೆಲ ಕಾರಣಾಂತರಗಳಿಂದ ಸತೀಶ್ ಜಾರಕಿಹೊಳಿ ಅಸಮಾಧಾನಗೊಂಡಿದ್ದು, ತಮ್ಮ ರಾಜಕೀಯ ವರಸೆ ತೋರಿಸಲು ಮುಂದಾಗಿದ್ದರು. ಇದಕ್ಕೆ ಹೈಕಮಾಂಡ್ ಬ್ರೇಕ್ ಹಾಕಿ ಅಸಮಾಧಾನವನ್ನು ಶಮನ ಮಾಡಲು ಮುಂದಾಗಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕೆ ಹಾಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ನ ಡುವೆ ಮುಸುಕಿನ ಗುದ್ದಾಟ ಮಧ್ಯೆ ಕಾಂಗ್ರೆಸ್ ಶಾಸಕರೊಬ್ಬರು ಸಚಿವ ಸತೀಶ್ ಜಾರಕಿಹೊಳಿ ಹೆಸರು ತೇಲಿಬಿಟ್ಟಿದ್ದಾರೆ. ಹೌದು…ಸತೀಶ್ ಜಾರಕಿಹೊಳಿ ಸಿಎಂ ಆಗುವುದು ನೂರಕ್ಕೆ ನೂರರಷ್ಟು ಸತ್ಯ ಎಂದು ಶಾಸಕ ವಿಶ್ವಾಸ್ ವೈದ್ಯ ಹೊಸ ಬಾಂಬ್ ಸಿಡಿಸಿದ್ದು, ರಾಜ್ಯ ಕಾಂಗ್ರೆಸ್ನಲ್ಲಿ ಕಂಪನ ಸೃಷ್ಟಿಸಿದೆ. ಸತೀಶ್ ಜಾರಕಿಹೊಳಿ ಸಮಾಧಾನಗೊಂಡವರಂತೆ ಕಂಡುಬಂದಿಲ್ಲ. ಹೀಗಾಗಿ ಮೊನ್ನೇ ಅಷ್ಟೇ ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಅವರ ಸಹೋದರ್ ಡಿಕೆ ಸುರೇಶ್ ಪತ್ರೇಕವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದ್ದರು.
ರಾಜಕಾರಣದ ಬೆಳವಣಿಗೆಗಳ ಬಗ್ಗೆ ನಾವು,ನೀವು ಊಹೆ ಮಾಡಬಹುದು.ವಿಮರ್ಶೆ ಮಾಡಿ ಹೀಗೆ ಆಗುತ್ತೆ ಹಾಗೆ ಆಗುತ್ತೆ ಅಂತಾ ಹೇಳಬಹುದು ನಮಗೆ ಬೇಕಾದ ಹಾಗೆ ಕಲ್ಪನೆ ಮಾಡಬಹುದು ಆದ್ರೆ ಶಾಸಕರಿಗೆ ರಾಜಕಾರಣ ಎಲ್ಲಿ ಹೇಗೆ ನಡೆಯುತ್ತಿದೆ ಅನ್ನೋದು ಗೊತ್ತಿರುತ್ತದೆ.ಯಾಕಂದ್ರೆ ಅವರು ಎಲ್ಲ ಬೆಳವಣಿಗೆಗಳ ಪ್ರತ್ಯಕ್ಷದರ್ಶಿಯೂ ಆಗಿರುತ್ತಾರೆ.ಹೀಗಾಗಿ ಅವರು ಹೇಳಿದ್ದು ನೂರಕ್ಕೆ ನೂರು ಸತ್ಯ ಎಂದು ನಾವು ನಂಬಲೇಬೇಕು. ಶಾಸಕ ವಿಶ್ವಾಸ ವೈದ್ಯ ಮಾತನಾಡಿ ಉತ್ತರ ಕರ್ನಾಟಕದವರು ಸಿಎಂ ಆಗುವ ಕಾಲ ಕೂಡಿ ಬಂದಿದೆ ಸತೀಶ ಜಾರಕಿಹೊಳಿ ಅವರು ಈ ಭಾಗದಲ್ಲಿ ಅಷ್ಟೇ ಅಲ್ಲದೆ ಕರ್ನಾಟಕ ರಾಜ್ಯದಲ್ಲಿ ಉನ್ನತ ಸಚಿವರಾಗಿ ಹಲವು ಸಾಮಾಜಿಕ ಕಾರ್ಯ ಮಾಡಿದ್ದಾರೆ ನಮ್ಮ ಭಾಗದ ಒಬ್ಬ ಶಾಸಕನನ್ನು ಮುಖ್ಯಮಂತ್ರಿ ಆಗಿ ನೋಡುವುದು ನಮ್ಮ ಭಾಗದವರ ಹಲವು ವರ್ಷದ ಕನಸಾಗಿದೆ ಆದಷ್ಟು ಬೇಗಾ ಮುಂದಿನ ಸಿಎಂ ಸತೀಶ್ ಜಾರಕಿಹೊಳಿ ಅಗಲಿದ್ದಾರೆ ಎಂದು ಹೇಳುವ ಮೂಲಕ ಸಂಚಲನ ಮೂಡಿಸಿದ್ದು ಸತ್ಯ. ಯಾಕಪ್ಪಾ ಅಂದ್ರೆ ಈ ಮಾತನ್ನು ಹೇಳಿದ್ದು ಶಾಸಕ ವಿಶ್ವಾಸ್ ವೈದ್ಯ ಇವರ ಮಾತಿನ ಮೇಲೆ ವಿಶ್ವಾಸ ಇಡಲೇಬೇಕು.
ಸತೀಶ್ ಜಾರಕಿಹೊಳಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ವಿಶ್ವಾಸ್ ವೈದ್ಯ ಅವರ ಈ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.