ಮಂಗಳೂರು: ಮತ್ತೆ ನಳಿನ್ ಕುಮಾರ್ ಕಟೀಲ್ (Nalin Kumar Kateel) ಗೆಲ್ಲಿಸಿ ಕೊಡಿ ಎಂದು ಹೇಳುವ ಮೂಲಕ ಮುಂದಿನ ಲೋಕಸಭಾ ಅಭ್ಯರ್ಥಿ (MP Ticket) ನಳಿನ್ ಕುಮಾರ್ ಎಂಬುದನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ಅವರು ಇಂದು ರಿವೀಲ್ ಮಾಡಿದ್ದಾರೆ.
ಮಂಗಳೂರು ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಮತ್ತೆ ನಳಿನ್ ಕಟೀಲ್ ಗೆಲ್ಲಿಸಿ ಕೊಡಿ. ಮುಂದಿನ ಲೋಕಸಭಾ ಚುನಾವಣೆಯನ್ನ ನಾವು ಗಂಭೀರವಾಗಿ ತೆಗೆದುಕೊಳ್ಳಬೇಕಿದೆ. ಮತ್ತೊಮ್ಮೆ ನಮ್ಮ ಪಕ್ಷದ ಅಭ್ಯರ್ಥಿಯಾದ ನಳಿನ್ ಕುಮಾರ್ ಕಟೀಲ್ ರನ್ನ ಗೆಲ್ಲಿಸುವ ಕೆಲಸ ಮಾಡಬೇಕಿದೆ ಎಂದು ಹೇಳುವ ಮೂಲಕ ನಳಿನ್ ಕಟೀಲ್ ಪರ ವಿಜಯೇಂದ್ರ ಬ್ಯಾಟಿಂಗ್ ಮಾಡಿದ್ದಾರೆ.
ದ.ಕ ಲೋಕಸಭಾ ಬಿಜೆಪಿ ಅಭ್ಯರ್ಥಿ ಆಯ್ಕೆ ಸದ್ಯ ಭಾರೀ ಗೊಂದಲದ ಗೂಡಾಗಿದೆ. ಅರುಣ್ ಕುಮಾರ್ ಪುತ್ತಿಲ (Arun Kumar Puttila) ಬಂಡಾಯದಿಂದ ಜಿಲ್ಲೆ ಸುದ್ದಿಯಲ್ಲಿದೆ. ಹಲವರಿಂದ ಮುಂದಿನ ಸಂಸದ ಸ್ಥಾನದ ಟಿಕೆಟ್ ಗಾಗಿ ಬಿಜೆಪಿಯಲ್ಲಿ ಬೇಡಿಕೆ ಇಡುವ ಸಾಧ್ಯತೆಗಳಿವೆ. ಇನ್ನೊಂದೆಡೆ ಬ್ರಿಜೇಶ್ ಚೌಟ ಅವರು ಈ ಬಾರಿಯ ಎಂಪಿ ಅಭ್ಯರ್ಥಿ ಎಂದೂ ಹೇಳಲಾಗುತ್ತಿದೆ
Uncategorized
ಮತ್ತೆ ನಳಿನ್ ಕುಮಾರ್ ಕಟೀಲ್ ಗೆಲ್ಲಿಸಿ ಕೊಡಿ: ವಿಜಯೇಂದ್ರ
