ಬೆಳಗಾವಿ ಬಸವೇಶ್ವರ ವೃತ್ತದ ಬಳಿ ಉದ್ಯಾನವನದಲ್ಲಿ ಕಳೆದ ಹಲವು ವರ್ಷಗಳಿಂದ ಬೆಳಕಿನ ವ್ಯವಸ್ಥೆ ಇರಲಿಲ್ಲ. ಇಲ್ಲಿನ ಜನರ ಸಮಸ್ಯೆ ಸ್ಪಂದಿಸಿದ ಕಾರ್ಪೊರೇಟರ್ ನಿತಿನ್ ಜಾಧವ್ ಅವರು ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಮಾರ್ಗದರ್ಶನದಲ್ಲಿ ಎಲ್ ಇಡಿ ದೀಪಗಳನ್ನು ಅಳವಡಿಸಿದ್ದಾರೆ
ಬಸವೇಶ್ವರ ಗಾರ್ಡನ್ನಲ್ಲಿ ಮಕ್ಕಳಿಗೆ ಹಾಗೂ ಹಿರಿಯ ನಾಗರಿಕರಿಗೆ ಬೀದಿ ದೀಪಗಳ ಕೊರತೆಯಿಂದ ಸಮಸ್ಯೆ ಆಗಿತ್ತು , ದೀಪಗಳನ್ನು ಅಳವಡಿಸುವಂತೆ ನಾಗರಿಕರು. ಕಾರ್ಪೊರೇಟರ್ ಜಾಧವ್ ಗಮನಕ್ಕೆ ತಂದಿದ್ದರು, ಮನವಿಗೆ ಸ್ಪಂದಿಸಿದ ಪಾಲಿಕೆ ಸದಸ್ಯೆ ದೀಪಗಳನ್ನು ಅಳವಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಎಲ್ ಇಡಿ ದೀಪಗಳ ಮೇಲ್ವಿಚಾರಕ ರೋಹಿತ್ ಸೋನವಾನೆ ಸಹಕಾರ ನೀಡಿದರು.
ಈ ಸಂದರ್ಭದಲ್ಲಿ ಅಭಿಜಿತ್ ತನ್ವಾಡೆ, ರಾಜು ಜಕ್ಕನವರ, ಉಪಸ್ಥಿತರಿದ್ದರು