ಬಿಜೆಪಿ ನಗರ ಸೇವಕ ಅಭಿಜಿತ್ ಬಂಧನ ಖಂಡಿಸಿ ಬೆಳಗಾವಿ ನಗರ ಪೊಲೀಸ್ ಆಯುಕ್ತರ ಕಚೇರಿಯ ಮುಂದೆ ಬಿಜೆಪಿ ಮುಖಂಡರು ನೆಲದ ಮೇಲೆ ಕುಳಿತುಕೊಂಡು ಧರಣಿ ಮಾಡಿದರು.
ನವೆಂಬರ್ 23 ರಂದು ಭಾಗ್ಯನಗರದಲ್ಲಿ ಮೊಬೈಲ್ ಟವರ್ ಅನುಮತಿ ವಿಚಾರವಾಗಿ ಬಿಜೆಪಿ ನಗರ ಸೇವಕ ಅಭಿಜಿತ್ ಹಾಗೂ ಸ್ಥಳಿಯ ರಮೇಶ್ ಪಾಟೀಲ ನಡುವೆ ಗಲಾಟೆ ನಡೆದಿತ್ತು ನಗರ ಸೇವಕ ಅಭಿಜಿತ್ ಬಂದಿಸುವಂತೆ ರಮಾಕಾಂತ್ ಕೂಂಡೂಸ್ಕರ ನೇತೃತ್ವದಲ್ಲಿ ನಿನ್ನೆ ಸಂಜೆ ಪ್ರತಿಭಟನೆ ನಡೆಸಲಾಗಿತ್ತು ಪ್ರತಿಭಟನೆ ಹಿನ್ನೆಲೆಯಲ್ಲಿ ತಡರಾತ್ರಿಯಲ್ಲಿ ನಗರ ಪೊಲೀಸರು ಆಸ್ಪತ್ರೆಗೆ ನುಗ್ಗಿ ಅಭಿಜಿತ್ ನನ್ನ ಬಂದಿಸಿದ್ದರು ಇಂದು ಬೆಳಿಗ್ಗೆ ಬಂಧನ ಖಂಡಿಸಿ ಪೋಲಿಸ್ ಆಯುಕ್ತರ ಕಚೇರಿಯ ಮುಂದೆ ಮಹಾ ನಗರ ಪಾಲಿಕೆ ಮೇಯರ್ ಶೋಭಾ ಸೋಮನಾಚೆ, ಮಾಜಿ ಶಾಸಕರಾದ ಸಂಜಯ್ ಪಾಟೀಲ್, ಅನಿಲ್ ಬೆನಕೆ , ಬಿಜೆಪಿ ಮುಖಂಡ ಎಂ ಬಿ ಜಿರಲಿ , ಧನಂಜಯ ಜಾದವ್ ಮುರಗೇಂದ್ರ ಗೌಡಾ ಹಾಗು ಹಲವು ನಾಯಕರು ಧರಣಿ ನಡೆಸಿದರು ಕಮೀಷನರ ಅವರ ಜೊತೆ ಮಾತನಾಡಬೇಕೆಂದು ಬಿಜೆಪಿ ನಾಯಕರು ಹೇಳಿದ್ರು ಅವರನ್ನ ಕೆಲ ಕಾಲ ಒಳಗಡೆ ಬಿಡದೆ ಇರುವುದು ರಾಜಕೀಯ ಆಟವೆಂದು ಬಿಜೆಪಿ ನಾಯಕರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.
ಪೊಲೀಸ್ ಆಯುಕ್ತ ಸಿದ್ದರಾಮಪ್ಪ ಜೊತೆಗೆ ಬಿಜೆಪಿ ನಾಯಕರು ಮಾತುಕತೆ ನಡೆಸಿದರು ಭೇಟಿ ಬಳಿಕ ಮಾಜಿ ಶಾಸಕ ಅನಿಲ್ ಬೆನಕೆ ಮಾಧ್ಯಮದ ಜೊತೆ ಮಾತನಾಡುತ್ತಾ
ಕಾಂಗ್ರೆಸ್ ಸರ್ಕಾರದ ಪ್ರತಿನಿಧಿಗಳಿಂದ ಪೊಲೀಸ್ ಇಲಾಖೆಯ ಮೇಲೆ ಒತ್ತಡ ಹೆರುವ ಕೆಲಸ ಮಾಡುತ್ತಿದೆ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಸದ್ಯ ಬಿಜೆಪಿ ಆಡಳಿತವಿದ
ಮಹಾನಗರ ಪಾಲಿಕೆಯನ್ನ ಕಾಂಗ್ರೆಸನವರು ಸೂಪರ್ ಸೀಡ್ ಮಾಡೋ ಪ್ಲ್ಯಾನ್ ವಿಫಲವಾಗಿದೆ ನಗರ ಸೇವಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಯ ಬಿಲ್ ಕೂಡಾ ತುಂಬಿರ ಲ್ಲ, ಬಲವಾಂತವಾಗಿ ಬಂಧನ ಮಾಡಲಾಗಿದೆ. ಪೊಲೀಸ್ ಅಧಿಕಾರಿಯನ್ನು ಅಮಾನತ್ತು ಮಾಡೋವರೆಗೆ ನಮ್ಮ ಹೋರಾಟ ಮುಂದುವರೆಯುತ್ತದೆ ಮುಂದಿನ ಹೋರಾಟದ ಬಗ್ಗೆ ಕೋರ್ ಕಮಿಟಿಯಲ್ಲಿ ಚರ್ಚಿಸಿ ತೀರ್ಮಾನ ಮಾಡ್ತಿವಿ ನಿನ್ನೆ ನಮ್ಮ ಪಕ್ಷದ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಕರೆ ಮಾಡಿ ನಗರ ಸೇವಕರಿಗೆ ಧೈರ್ಯ ತುಂಬಿದ್ದಾರೆ
ಪಾಲಿಕೆ ರಾಜಕೀಯದಲ್ಲಿ ಆಸಕ್ತಿ ಇರೋವರು ಒತ್ತಡ ತರುತ್ತಿದ್ದಾರೆ ಜಿಲ್ಲಾ ಉಸ್ತುವಾರಿ ಸಚಿವ ಸೇರಿ ಸ್ಥಳೀಯ ಶಾಸಕರು ಎಲ್ಲರೂ ಬೆನ್ನು ಬಿದಿದ್ದಾರೆ.
ಮೂರು ದಿನಗಳ ಬಳಿಕ ಯಾಕೆ ಬಂಧನ ಆಯಿತ ಅಂದೇ ಬಂಧಿಸಬಹುದು ಇತ್ತು. ಎಂಇಎಸ್ ಅಷ್ಟೇ ಅಲ್ಲ ಎಲ್ಲರೂ ಸೇರಿ ಪ್ರತಿಭಟನೆ ಮಾಡಿದ್ದಾರೆ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರವನ್ನು ಅಂತ್ಯಗೊಳಿಸಲು ಪ್ಲ್ಯಾನ್ ಮಾಡಲಾಗುತ್ತಿದೆ ಅದು ಯಾವುದೇ ಕಾರಣಕ್ಕೂ ಆಗಲ್ಲ ನಾವು ಯಾವುದೇ ಕಾರಣಕ್ಕೂ ಹೆದೆಲ್ಲ, ಹೆದರಿಸುವ ಪ್ರಯತ್ನ ಮಾಡುವುದು ತಪ್ಪು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಮುಖಂಡ ಎಂ ಬಿ ಜಿರಲಿ ಮಾತನಾಡುತ್ತಾ ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಶೋಭಾ ಸೋಮನಾಚೆ, ಮಾಜಿ ಶಾಸಕರಾದ ಸಂಜಯ್ ಪಾಟೀಲ್, ಅನಿಲ್ ಬೆನಕೆ , ಧನಂಜಯ ಜಾದವ್ ಅವರು ನಾವು ಕೂಡಿಕೊಂಡು ಕಮಿಷನರ ಅವರಿಗೆ ಭೇಟಿ ಆಗಿ ಬೆಳಗಾವಿಯಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಗಮನವನ್ನ ಸೆಳೆಯುವ ಪ್ರಯತ್ನ ಮಾಡಿದ್ದೇವೆ ನಿನ್ನೆ ದಿನ ನಗರ ಸೇವಕರನ್ನ ಆಸ್ಪತ್ರೆಯಿಂದ ನೇರವಾಗಿ ಬಂಧನ ಮಾಡಿರುವ ಕುರಿತು ಮಾತನಾಡಿದ್ದೇವೆ ಇಡೀ ಬೆಳಗಾವಿ ಮಹಾನಗರದಲ್ಲಿ ಸಂಶಯಸ್ಪಾದ ವಿಚಾರಗಳು ನಡೆಯುತ್ತಿವೆ ಪೊಲೀಸರು ಯಾರದೋ ನಿಯಂತ್ರಣದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬ ವಿಚಾರವನ್ನ ಕಮೀಷನರ ಅವರ ಗಮನಕ್ಕೆ ತಂದಿದ್ದೇವೆ ಕೂಡಲೇ ಅದಿಕರಿಯನ್ನ ಕೆಲಸದಿಂದ ವಜಾ ಮಾಡಿ ತನಿಖೆ ಮಾಡಬೇಕು ಜನರಿಗೆ ನ್ಯಾಯ ದೊರಕಿಸಿಕೊಡುವ ಕೆಲಸವನ್ನ ಇಲಾಖೆ ಮಾಡಬೇಕು ಎಂದರು .
ಶಾಸಕ ಅಭಯ ಪಾಟೀಲ ಮಾತನಾಡುತ್ತಾ ನಗರ ಸೇವಕರನ್ನು ಬೆಕಾಯ್ದೆಸಿರಿ ಬಂಧನ ಮಾಡುವ ಕೆಲಸವನ್ನ ಸಿಪಿಐ ಅವರು ಮಾಡಿದ್ದಾರೆ ನಾವು ಅದನ್ನ ಖಂಡನೆ ಮಾಡುತ್ತೇವೆ ವೈದ್ಯರ ಮೇಲೆ ಡಿಸ್ಜಾರ್ಜ್ ಮಾಡುವಂತೆ ಒತ್ತಡ ಹಾಕಿ ರಾಜಕೀಯ ಪ್ರೇರಣೆಯಿಂದ ಬಂಧನ ಮಾಡಿರುವುದು ಬೇಸರದ ವಿಚಾರ ಈ ರೀತಿ ಗುಂಡಾ ವರ್ತನೆಗಳು ನಡೆಯುತ್ತಿರುವುದು ಬೆಳಗಾವಿ ಜನರಲ್ಲಿ ಆತಂಕ ಸೃಷ್ಠಿ ಮಾಡಿದೆ ನಾನು ಸರ್ಕಾರಕ್ಕೆ ಆಗ್ರಹ ಮಾಡುತ್ತೇನೆ ಗೃಹ ಸಚಿವ ಜಿ ಪರಮೇಶ್ವರ ಅವರು ಸಜ್ಜನ ವ್ಯಕ್ತಿ ಕೂಡಲೇ ಈ ವಿಚಾರಕ್ಕೆ ಸುಕ್ತ ನ್ಯಾಯ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಕಮಿಷನರ್ ಸಿದ್ರಾಮಪ್ಪ ಮಾತನಾಡುತ್ತಾ 23 ರಂದು ಭಾಗ್ಯ ನಗರದ ನಿವಾಸಿ ರಮೇಶ ಪಾಟೀಲ್ ಮತ್ತು ಪಾಲಿಕೆ ಸದಸ್ಯ ಅಭಿಜೀತ್ ಜವಳಕರ ನಡುವೆ ಮೊಬೈಲ್ ಟವರ್ ವಿಷಯಕ್ಕೆ ಸಣ್ಣ ಗಲಾಟೆ ನಡೆದಿತ್ತು ಪ್ರಾಥಮಿಕ ತನಿಖೆ ಪ್ರಕಾರ ಗಲಾಟೆಯಲ್ಲಿ ರವಿ ಪಾಟೀಲ್ ಹಾಗೂ ಪಾಲಿಕೆ ಸದಸ್ಯ ನಡುವೆ ಹೊಡದಾಟ ಯಾಗಿದೆ ಎಂದು ತಿಳಿದು ಬಂದಿದೆ , ಹಾಗಾಗಿ ಪಾಲಿಕೆ ಸದಸ್ಯ ಜವಳಕರ ಗಲಾಟೆ ಯಾದ ನಂತರ ರವಿ ಪಾಟೀಲ್ ವಿರುದ್ದ ತಿಲಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುತ್ತಾರೆ ಪ್ರಕರಣ ದಾಖಲಿಸಿದ ನಂತರ ರವಿ ಪಾಟೀಲ್ ಅವರನ್ನು ತಿಲಕವಾಡಿ ಪೊಲೀಸರು ಬಂಧಿಸುತ್ತಾರೆ ಪಾಲಿಕೆ ಸದಸ್ಯೆ ಅಭಿಜೀತ್ ಜವಳಕರ ಮೇಲೆ ರವಿ ಪಾಟೀಲ್ ಪತ್ನಿ ಬಂದು ದೂರು ದಾಖಲಿಸುತ್ತಾರೆ ಅದೇ ರೀತಿಯಾಗಿ ಅಭಿಜೀತ್ ಜವಳಕರನ್ನು ನಿನ್ನೆ ರಾತ್ರಿ ಆಸ್ಪತ್ರೆಯಿಂದ ಡಿಸ್ಟಾರ್ಜ್ ಆದಮೇಲೆ ಅಭಿಜೀತ್ ಜವಳಕರನ್ನು ಬಂಧಿಸಲಾಗಿದೆ ಇದರಲ್ಲಿ ಯಾವದೇ ರಾಜಕೀಯ ಒತ್ತಡವಿಲ್ಲ ಎಂದರು .
ಸದ್ಯ ಈ ವಿಚಾರ ಬೆಳಗಾವಿ ಜನತೆಯಲ್ಲಿ ಗೊಂದಲದ ವಾತಾವರಣವನ್ನ ಸೃಷ್ಟಿ ಮಾಡಿದೆ .