ಬಸವೇಶ್ವರ ವೃತ್ತದ ಸಮೀದಲ್ಲಿರುವ ತಿನಿಸು ಕಟ್ಟೆಯಲ್ಲಿ ಕಾನೂನು ಬಾಹಿರವಾಗಿ ಮಳಿಗೆ ಪಡೆದಿರುವ ಪಾಲಿಕೆಯ ಸದಸ್ಯರ ಸದಸ್ಯತ್ವವನ್ನು ವಜಾ ಮಾಡಬೇಕೆಂದು ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ ಸುಜೀತ ಮುಳಗುಂದ ಸೋಮವಾರ ಪ್ರಾದೇಶಿಕ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.
ಪಾಲಿಕೆ ಸದಸ್ಯರಾದ ವಾಡ್೯ ನಂಬರ್ 23 ರ ಸದಸ್ಯ ಜಯಂತ ಜಾಧವ, ವಾಡ್೯ ನಂಬರ್ 41 ರ ಸದಸ್ಯ ಮಂಗೇಶ ಪವಾರ್ ಇವರು ತಮ್ಮ ರಾಜಕೀಯ ಪ್ರಭಾವದಿಂದ ತಿನಿಸು ಕಟ್ಟೆಯಲ್ಲಿ ತಮ್ಮ ಕುಟುಂಬದವರಿಗೆ ಮಳಿಗೆ ನೀಡಿದ್ದಾರೆ. ತತಕ್ಷಣ ಇವರನ್ನು ಪಾಲಿಕೆ ಸದಸ್ಯತ್ವದಿಂದ ವಜಾ ಮಾಡಬೇಕೆಂದು ಆಗ್ರಹಿಸಿದ್ದಾರೆ
ವಿಷಯಕ್ಕೆ ಕುರಿತಂತೆ ಪ್ರಾದೇಶಿಕ ಆಯುಕ್ತರು ಜಿಲ್ಲಾಧಿಕಾರಿಗಳಿಗೆ ನೋಟಿಸ ಜಾರಿಮಾಡಿದ್ದರು ತಕ್ಷಣವೇ ಜಿಲ್ಲಾಧಿಕಾರಿಗಳು ಕಾರ್ಪೊರೇಷನಗೆ ಬೆಳಗಾವಿ ಮಹಾನಗರ ಪಾಲಿಕೆ ಸದಸ್ಯರನ್ನು ಅನರ್ಹತೆ ಮಾಡುವ ಕುರಿತು ನೋಟೀಸ ರವಾನೆ ಮಾಡಿದ್ದಾರೆ ಕೆ.ಎಂ.ಸಿ ಕಾಯ್ದೆ-1976, ಸೆಕ್ಷನ್ 26(1)(ಕೆ) ಯ ಸ್ಪಷ್ಟ ಉಲ್ಲಂಘನೆ ಮಾಡಿದ ಜಯಂತ್ ಜಾಧವ್., ಮಂಗೇಶ್ ಪವಾರ್ ಇಬ್ಬರೂ ಮಹಾನಗರ ಪಾಲಿಕೆಯ ಸದಸ್ಯರನ್ನು ಅನರ್ಹತೆಗೊಳಿಸಿ ಸದಸ್ಯತ್ವವನ್ನು ರದ್ದುಪಡಿಸಬೇಕೆಂದು ನೋಟೀಸನ್ನು ರವಾನೆ ಮಾಡಿದ್ದಾರೆ.
ಸಾಮಾಜಿಕ ಕಾರ್ಯಕರ್ತ ಸುಜೀತ್ ಮ. ಮುಳಗುಂದ ಅವರು ತೆಗದುಕೊಂಡ ಈ ನಿರ್ಧಾರದಿಂದ ಅಕ್ರಮವೆಸಗಿದ ಸದಸ್ಯರ ಮೇಲೆ ಕಾನೂನು ಯಾವ ರೀತಿ ಕ್ರಮ ಜರಗಿಸುತ್ತದೆ ಎಂಬುದನ್ನು ಕಾದುನೋಡಬೇಕಿದೆ