ಹಿರೇ ಬಾಗೇವಾಡಿ ಮತ್ತು ಬೈಲವಾಡ ವಲಯದ ಮುರಕೀಬಾವಿ ಕಾರ್ಯ ಕ್ಷೇತ್ರದ ಮಹಿಳಾ ಜ್ಞಾನವಿಕಾಸದ ಕಾರ್ಯಕ್ರಮದ ಅಡಿಯಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಉಚಿತ ಟ್ಯೂಷನ್ ಕ್ಲಾಸ್ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು
ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯೋಪಾಧ್ಯಯರಾದ ಆರ್‌ಸಿ ಕಂಠಿ ವಹಿಸಿದ್ದರು ಮಾನ್ಯ ಯೋಜನಾಧಿಕಾರಿಗಳಾದ ಯೋಗೀಶ್ ಊರಿನ ಹಿರಿಯರಾದ ಅಪ್ಪಾ ಸಾಹೇಬ್ ಪಾಟೀಲ್ ಅವರು, ಜ್ಞಾನವಿಕಾಸ ಕೇಂದ್ರದ ಅಧ್ಯಕ್ಷರಾದ ಸುಂಕದ ಅವರು ಉಪಸ್ಥಿತರಿದ್ದು ಈ ಕಾರ್ಯಕ್ರಮವನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟನೆ ಮಾಡಲಾಯಿತು.
ತಾಲೂಕಿನ ಯೋಜನಾಧಿಕಾರಿಗಳಾದ ಯೋಗೀಶ್ ಮಾತನಾಡುತ್ತಾ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಮತ್ತು ಅಮ್ಮನವರ ಕನಸಿನ ಕೂಸಾದ ಜ್ಞಾನ ವಿಕಾಸ ಕಾರ್ಯಕ್ರಮದ ಬಗ್ಗೆ ಈ ಕಾರ್ಯಕ್ರಮದಲ್ಲಿ ಎಸ್ ಎಸ್ ಎಲ್ ಸಿ ಓದುವಂತಹ ವಿದ್ಯಾರ್ಥಿಗಳಿಗೆ ಉಚಿತವಾಗಿ ಟ್ಯೂಷನ್ ಕ್ಲಾಸ್ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಈ ಕಾರ್ಯಕ್ರಮದಲ್ಲಿ ಎಲ್ಲ ವಿದ್ಯಾರ್ಥಿಗಳು ಸಹ ಕಲಿತು ಉತ್ತಮ ರೀತಿಯಲ್ಲಿ ಅಂಕ ಪಡೆದು ತಂದೆ ತಾಯಿ ಗುರು ಹಿರಿಯರಿಗೆ ಊರಿಗೆ ಶಾಲೆಗೆ ಒಳ್ಳೆಯ ಹೆಸರನ್ನು ತರಬೇಕೆಂದು ಶುಭ ಹಾರೈಸಿದರು ಹಾಗೆ ಊರಿನ ಗಣ್ಯರಾದಂತಹ ಅಪ್ಪಾ ಸಾಹೇಬ್ ಪಾಟೀಲ್ ರವರು ವಿದ್ಯಾರ್ಥಿಗಳಿಗೆ ಉತ್ತಮ ರೀತಿಯಲ್ಲಿ ಓದಿ ದೇಶಕ್ಕೆ ಒಳ್ಳೆಯ ಪ್ರಜೆಯಾಗಿ ಶಾಲೆಯ ಶಾಲೆಗೆ ಒಳ್ಳೆಯ ಹೆಸರನ್ನು ತಂದುಕೊಟ್ಟು ತಂದು ಕೊಡಬೇಕೆಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಶಿಕ್ಷಕರಾದ ಆರ್ ಸಿ ಕಂಠಿ ಮಾತನಾಡುತ್ತಾ ಧರ್ಮಸ್ಥಳ ಸಂಸ್ಥೆಯ ಕಾರ್ಯಕ್ರಮಗಳ ಉತ್ತಮವಾಗಿದ್ದು ನಮ್ಮ ಶಾಲೆಗೂ ಸಹ ಉಚಿತ ಬೆಂಚ್ ಗಳನ್ನು ವಿತರಣೆ ಮಾಡಿದ್ದು ಹಾಗೂ ಇಂದಿನ ದಿನ ನಮ್ಮ ಶಾಲೆಗೆ ಉಚಿತ ಟ್ಯೂಷನ್ ಕ್ಲಾಸ್ ಸಹ ಸಿಕ್ಕಿರುವಂತದ್ದು ನಮ್ಮ ಶಾಲೆಯ ವಿದ್ಯಾರ್ಥಿಗಳ ಅದೃಷ್ಟ ಎಂದು ತಿಳಿಸಿ ಶಾಲೆಗೆ ಕೀರ್ತಿಯನ್ನು ತರಬೇಕೆಂದು ಶುಭ ಹಾರೈಸಿದರು.
ಈ ಕಾರ್ಯಕ್ರಮವನ್ನು ಹಿರೇ ಬಾಗೇವಾಡಿ ತಾಲೂಕಿನ ಜ್ಞಾನವಿಕಾಸ ಸಮನ್ವಯಾಧಿಕಾರಿಗಳಾದ ಮಾಲಿನಿಯವರು ನಿರೂಪಿಸಿದರು ಶಾಲೆಯ ಸಹ ಶಿಕ್ಷಕರಾದ ಎಸ್ ಕೆ ತಲ್ಲೂರು ರವರು ಸ್ವಾಗತಿಸಿದರು
ಈ ಸಂದರ್ಭದಲ್ಲಿ ಕೆವಿ ಚಬ್ಬಿ , ಸಾವಕ್ಕ ವಕುಂದ್ ಶೋಭಾ ಕುರುಗುಂದ್, ಮಧು ಅರಳಿಕಟ್ಟಿ ಹಾಗೆ ಟ್ಯೂಷನ್ ಶಿಕ್ಷಕರಾದ ಸುನಿತಾ ಹುಣಸಿಕಟ್ಟಿ ಹಾಗೂ ಮುದ್ದು ಮಕ್ಕಳು ಉಪಸ್ಥಿತರಿದ್ದರು.
ವರದಿಗಾರರು
ಶಾನೂಲ ಮ
ಬೈಲಹೊಂಗಲ