Uncategorized

ಪೊಲೀಸ ಕಮಿಷನರ ನಿಸಪಕ್ಷಪಾತ ತನಿಖೆ ಮಾಡದೆ ಹೋದ್ರೆ ಅವರ ಮೇಲೆ ತನಿಖೆಗೆ ಆಗ್ರಹ ಮಾಡಬೇಕಾಗುತ್ತದೆ:ಶಾಸಕ ಅಭಯ ಪಾಟೀಲ

Share

ಅಭಿಜಿತ್ ಜವಳಕರ ಬಂಧನ ಮಾಡಿರುವ ಹಿನ್ನೆಲೆಯಲ್ಲಿ ಪೊಲೀಸ ಕಮಿಷನರ ನಿಸಪಕ್ಷಪಾತ ತನಿಖೆ ಮಾಡದೆ ಹೋದ್ರೆ ಅವರ ಮೇಲೆ ತನಿಖೆಗೆ ಆಗ್ರಹ ಮಾಡಬೇಕಾಗುತ್ತದೆ ಎಂದು ಶಾಸಕ ಅಭಯ ಪಾಟೀಲ ಎಚ್ಚರಿಕೆ ನೀಡಿದ್ದಾರೆ

ಈ ಕುರಿತು ವಿಡಿಯೋ ಸಂದೇಶ ನೀಡಿದ ಅವರು ಟಿಳಕವಾಡಿ ಪೊಲೀಸ ಅಧಿಕಾರಿಗಳು ಜವಳಕರ ಅವರನ್ನ ಬೆಕಾಯ್ದೆಸಿರಿ ಬಂಧನ ಮಾಡಿರುವ ಕುರಿತು ನಾವು ಹೇಳಿದಾಗ ಇವತ್ತು ಸ್ವತಃ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳು ಕಮೀಷನರ ಅವರಿಗೆ ಪತ್ರ ನೀಡಿದ್ದಾರೆ ಇದು ಒಂದೇ ಸಾಕ್ಷಿ ಸಾಕು ಪೊಲೀಸ ಅಧಿಕಾರಿ ಮತ್ತು ಅವರ ಜೊತೆಗಿದ್ದ ಸಿಬ್ಬಂದಿ ಗಳನ್ನ ಅಮಾನತು ಮಾಡಲು ,ಕಮಿಷನರ ಅವರು ಯಾವ ಕಾರಣಕ್ಕೆ ರಾಜಕೀಯ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ ಪೊಲೀಸ ಕಮಿಷನರ ಅವರು ನಿಸಪಕ್ಷಪಾತ ತನಿಖೆ ಮಾಡಲಿಲ್ಲ ಎಂದರೆ ಅವರ ಮೇಲೆ ಸಂಶಯ ಬರುತ್ತದೆ ಅವರ ಮೇಲೆ ತನಿಖೆಗೆ ಒತ್ತಾಯ ಮಾಡಬೇಕಾಗುತ್ತದೆ ಅದಕ್ಕೆ ನಾನು ಪೊಲೀಸ ಕಮಿಷನರ ಅವರಿಗೆ ಮನವಿ ಮಾಡುತ್ತೇನೆ ರಾಜಕೀಯ ಪ್ರಭಾವಕ್ಕೆ ಒಳಗಾಗದೆ ಬೇಗಾ ಕ್ರಮ ಕೈಗೊಳ್ಳಬೇಕು ಇಲ್ಲದೆ ಹೋದರೆ ಮುಂದಿನ ಹೋರಾಟದ ಬಗ್ಗೆ ನಾಳೆ ನಡೆಯುವ ಮಹಾನಗರ ಪಾಲಿಕೆಯ ಸಭೆಯಲ್ಲಿ ನಿರ್ಣಯಮಾಡುತ್ತೇವೆ ,ಜವಳಕರ ಅವರು ಆಸ್ಪತ್ರೆಗೆ ದಾಖಲಾದ ನಂತರದಿಂದ ಡಿಸ್ಜಾರ್ಜ್ ಆಗುವರೆಗೆ ಆಸ್ಪತ್ರೆಯಲ್ಲಿರುವ ಎಲ್ಲಾ ಪುಟೇಜಗಳನ್ನೂ ಸಂಗ್ರಹಮಾಡುವ ಕೆಲಸ ನಮ್ಮ ಕಾರ್ಯಕರ್ತರು ಮಾಡಿದ್ದಾರೆ ಆಸ್ಪತ್ರೆಯಲ್ಲಿರುವ ಸಿಬ್ಬಂದಿಗೆ ಟಿಳಕವಾಡಿ ಪೊಲೀಸರು ಧಮ್ಕಿ ಕೊಡುವ ಕೆಲಸ ನಿಲ್ಲಸಬೇಕು ಎಂದರು

Tags: