ಸಂತಿಬಸ್ತವಾಡ ಹಾಲು ಉತ್ಪಾದಕರ ಸಹಕಾರಿ ಸಂಘ, ಕೆ ಎಮ್ ಎಫ್ ಬೆಳಗಾವಿ, ಕಿಣಯೆ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ನಂದಾದೀಪ ಕಣ್ಣಿನ ಆಸ್ಪತ್ರೆ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಕಣ್ಣಿನ ಮತ್ತು ಬಿಪಿ, ಶುಗರ್ ತಪಾಸಣೆ ಯ ಉಚಿತ ಆರೋಗ್ಯ ಶಿಬಿರ ನಡೆಯಿತು.
250 ಜನರು ಕಣ್ಣಿನ ತಪಾಸಣೆ ಮಾಡಿಕೊಂಡರು. 150ಕ್ಕಿಂತಲೂ ಹೆಚ್ಚಿನ ಜನರು ಬಿಪಿ ಮತ್ತು ಶುಗರ್ ತಪಾಸಣೆ ಮಾಡಿಸಿಕೊಂಡು ಉಚಿತ ಔಷಧಿಯನ್ನು ಪಡೆದುಕೊಂಡರು. ನಂದಾದೀಪ ಕಣ್ಣಿನ ಆಸ್ಪತ್ರೆಯ ವೈದ್ಯರು ಕಣ್ಣಿನ ತಪಾಸಣೆಯನ್ನು ಮಾಡಿದರು ಮತ್ತು ಸಲಹೆಗಳನ್ನು ನೀಡಿದರು. ಸಬ್ಸಿಡಿ ಹಣದಲ್ಲಿ ಕನ್ನಡಕವನ್ನು ಕೊಟ್ಟರು. ಕಿಣಯೆ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ಕಾರ್ಯ ಕರ್ತರು, ಆರೋಗ್ಯ ಕಾರ್ಯ ಕರ್ತೆ ಮತ್ತು ಸಿಎಚ್ ಓ ರವರು ಬಿಪಿ ಮತ್ತು ಶುಗರ್ ತಪಾಸಣೆ ಮಾಡಿ ಉಚಿತವಾಗಿ ಔಷಧಿಯನ್ನು ನೀಡಿದರು. ಬಂದಂತಹ ಜನರಿಗೆ ಟಿಬಿ ರೋಗದ ಬಗ್ಗೆ ಮಾಹಿತಿ ನೀಡಿ ಕಫವನ್ನು ಸಂಗ್ರಹಿಸಿ ತೆಗೆದುಕೊಂಡು ಹೋದರು.
ಈ ಕಾರ್ಯಕ್ರಮದಲ್ಲಿ. ಸಂತಿಬಸ್ತವಾಡ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರು ಭರ್ಮಾ ಗುಡುಂಕೇರಿ ಉಪಾಧ್ಯಕ್ಷರು ನಾಗೇಂದ್ರ ಸಿದ್ದನ್ನವರ ಮತ್ತು ಆಡಳಿತ ಮಂಡಳಿಯ ಸದಸ್ಯರು, ಕೆ ಎಂ ಎಫ್ ನ ಶೋಭಾ ಹುದ್ದಾರ ಮತ್ತು ಶ್ಯಾಮಲಾರವರು, ಕಿಣಯೆ ಪ್ರಾಥಮಿಕ ಆರೋಗ್ಯ ಕೇಂದ್ರದ ಅಶೋಕ ಕೋರೆ ಮತ್ತು ಆರೋಗ್ಯ ಕಾರ್ಯಕರ್ತರು ಆಶಾಕಾರ್ಯಕರ್ತೆಯರು ಭಾಗವಹಿಸಿದ್ದರು.