ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಭೈರವಾಡಗಿ ಗ್ರಾಮದಲ್ಲಿ ಪೋಷಣ ಅಭಿಯಾನ, ಭೇಟಿ ಬಚಾವ್ ಭೇಟಿ ಪಡಾವೋ, ಬಾಲ್ಯ ವಿವಾಹ ನಿಷೇಧ ಮತ್ತು ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಸೀಮಂತ, ಅನ್ನಪ್ರಾಶನ, ಬಾಲ್ಯ ವಿವಾಹ ನಿಷೇಧ ಸಹಿ ಅಭಿಯಾನ ಹಾಗೂ ಮಕ್ಕಳಿಗೆ ಶೂ ಮತ್ತು ಸಮವಸ್ತ್ರ ವಿತರಣೆ ಮಾಡಲಾಯಿತು. ಯಾಳವಾರ ಅಂಗನವಾಡಿ ಕೇಂದ್ರದ ಐದು ವರ್ಷ 10ತಿಂಗಳ ಮಗು ಶಿವಾನಂದ್ ಬಡಿಗೇರ 60 ಸಾಮಾನ್ಯ ಜ್ಞಾನ ಪ್ರಶ್ನೆಗಳಿಗೆ ಯಾವುದೇ ತಪ್ಪುಗಳಿಲ್ಲದೆ, ತಡವರಿಸದೆ, ನಿರರ್ಗಳವಾಗಿ ಉತ್ತರಗಳನ್ನು ನೀಡಿದ್ದು ಕಾರ್ಯಕ್ರಮದ ಆಕರ್ಷಣೆಯಾಗಿತ್ತು. ಕಾರ್ಯಕ್ರಮದಲ್ಲಿ ಹಾಜರಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷರು ಸದಸ್ಯರು ಹಾಗೂ ಊರಿನ ಹಿರಿಯರು ಮಗುವಿಗೆ ಅಭಿನಂದನೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಮಗುವನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಅಂಗನವಾಡಿ ಮಕ್ಕಳಿಂದ ಸಾಂಸ್ಕೃತಿಕ ಚಟುವಟಿಕೆಗಳು ಜರುಗಿದವು.