Uncategorized

ತೀವ್ರ ಕುತೂಹಲ ಕೆರಳಿಸಿದ ಪಾಲಿಕೆ ಸಭೆ

Share

ಇವತ್ತು ಬೆಳಗಾವಿಯಲ್ಲಿ ನಗರ ಸೇವಕರ ಮೇಲೆ ಹಲ್ಯೆ ಆಗಿದೆ ನಾಳೆ ಸಾರ್ವಜನಿಕರ ಮೇಲೆ ಹಲ್ಯೆ ಆಗುತ್ತದೆ ಇದರ ಬಗ್ಗೆ ಕೂಲಂಕುಷವಾಗಿ ತನಿಖೆ ಆಗಲಿ ನಮ್ಮ ಪಕ್ಷದ ನಗರ ಸೇವಕನ ತಪ್ಪು ಇದ್ದರೆ ೧೫ ದಿನಾ ಬಂಧನ ಮಾಡಿ ಅವರನ್ನ ಪಕ್ಷದಿಂದ ಉಚ್ಚಾಟನೆ ಮಾಡುತ್ತೇವೆ ಎಂದು ಶಾಸಕ ಅಭಯ ಪಾಟೀಲ ಹೇಳಿದರು

ತೀವ್ರ ಕುತೂಹಲ ಕೆರಳಿಸಿದ ಪಾಲಿಕೆ ಸಭೆ ಕಾಂಗ್ರೆಸ್ ಬಿಜೆಪಿ ಮಧ್ಯೆ ಜಿದ್ದಾಜಿದ್ದಿನ ಅಖಾಡ ಆಗಿತ್ತು ಪಾಲಿಕೆ ನಾಡಗೀತೆ ಯೊಂದಿಗೆ ಪಾಲಿಕೆ ಸಭೆ ಆರಂಭವಾಯಿತು ಬಿಜೆಪಿ ನಗರಸೇವಕ ಅಭಿಜಿತ್ ಜವಳಕರ ಮೇಲೆ ಹಲ್ಲೆ, ಅರೇಸ್ಟ್ ಪ್ರಕರಣವನ್ನು ನಗರ ಸೇವಕರು ಖಂಡನೆ ಮಾಡಿದರು .

ಬುದುವರ ನಡೆದ ಪಾಲಿಕೆ ಸಭೆಯಲ್ಲಿ ಮಾತನಾಡಿದ ಶಾಸಕ ಅಭಯ ಪಾಟೀಲ ಜವಳಕರ ಅವರ ಬಂಧನ ಮಾಡಿದ್ದೂ ಸಂಪೂರ್ಣ ತನಿಖೆ ಆಗಬೇಕು ಬೆಕಾಯ್ದೆಸಿರಿ ಪೊಲೀಸ ಅಧಿಕಾರಿ ಬಂಧನ ಮಾಡಿ ಉಳಿದ ೫೨ ಜನ ನಗರ ಸೇವಕರಲ್ಲಿ ಕೆಲಸ ಯಾವ ರೀತಿ ಮಾಡಬೇಕು ಎಂಬ ಅನುಮಾನ ಹುಟ್ಟಿಸಿದ್ದಾರೆ ಭಾಗ್ಯ ನಗರದಲ್ಲಿ ಪರವಾನಿಗೆ ಇಲ್ಲದೆ ನಿರ್ಮಿಸುತ್ತಿರುವ ಟಾವರ್ ವಿಚಾರವಾಗಿ ಅಲ್ಲಿನ ಸ್ಥಳೀಯರು ನನಗು ದೂರು ನೀಡಿದ್ದರು ಅದೇ ರೀತಿ ನಗರ ಸೇವಕ ಅಭಿಜಿತ್ ಜವಳಕರ ಅವರ ಗಮನಕ್ಕೆ ತಂದಿದ್ದಾರೆ ಒಬ್ಬ ಜವಾಬ್ದಾರಿ ನಗರಸೇವಕನ ಮೇಲೆ ಈ ರೀತಿ ಹಲ್ಯೆ ಆಗಿರುವದನ್ನ ನಾನು ಖಂಡಿಸುತ್ತೇನೆ ಆಸ್ಪತ್ರೆಯಲ್ಲಿರುವಾಗ ಸಲೈನ್ ಕಿತ್ತು ಸ್ವತಃ ಪೊಲೀಸರೇ ಡಿಸ್ಜಾರ್ಜ್ ಪ್ರತಿಯನ್ನ ತಯಾರು ಮಾಡಿ ಅವರನ್ನ ಬಂಧನ ಮಾಡಿರುವುದು ರಾಜಕೀಯ ಪ್ರಭಾವದಲ್ಲಿ ಎಂದು ಭಾಸವಾಗುತ್ತಿದೆ ಈ ವಿಷಯ ತರ್ಕಕ್ಕೆ ಏರಿದರು ಕೂಡಾ ಕಮೀಷನರ ಅವರು ಇನ್ನು ಸೀರಿಯಸ್ ಆಗಿಲ್ಲ ಆಸ್ಪತ್ರೆಯವರು ಕಮಿಷನರ್ ಅವರಿಗೆ ದೂರು ನೀಡಲು ಹೋದರೆ ಅವರ ಮೇಲೆ ಧಮ್ಕಿ ಹಾಕುವ ಕೆಲಸ ಆಗುತ್ತಿದೆ ಈ ಕೂಡಲೇ ಜವಳಕರ ಅವರನ್ನು ಬಂಧನ ಮಾಡಿರುವ ಸಿಪಿಐ ಅವರನ್ನ ಕೆಲಸದಿಂದ ಅಮಾನತು ಮಾಡಬೇಕು ಪೊಲೀಸರು ಒಂದು ತಪ್ಪು ಮುಚ್ಚಲು ಹೋಗಿ ಮೂರೂ ತಪ್ಪನ್ನ ಮಾಡುತ್ತಿದ್ದಾರೆ ಇವತ್ತು ನಗರ ಸೇವಕರ ಮೇಲೆ ಹಲ್ಯೆ ಆಗಿದೆ ನಾಳೆ ಸಾರ್ವಜನಿಕರ ಮೇಲೆ ಹಲ್ಯೆ ಆಗುತ್ತದೆ ಇದರ ಬಗ್ಗೆ ಕೂಲಂಕುಷವಾಗಿ ತನಿಖೆ ಆಗಲಿ ನಮ್ಮ ಪಕ್ಷದ ನಗರ ಸೇವಕನ ತಪ್ಪು ಇದ್ದರೆ ೧೫ ದಿನಾ ಬಂಧನ ಮಾಡಿ ಅವರನ್ನ ಪಕ್ಷದಿಂದ ಉಚ್ಚಾಟನೆ ಮಾಡುತ್ತೇವೆ ಎಂದರು .

ಶಾಸಕ ರಾಜು ಶೇಠ್ ಅವರು ಮಾತನಾಡುತ್ತಾ ನಗರ ಸೇವಕ ಅಭಿಜಿತ್ ಜವಳಕರ ಅವರ ಮೇಲೆ ಈ ರೀತಿ ಹಲ್ಯೆ ಆಗಿರುವದನ್ನ ನಾನು ಖಂಡಿಸುತ್ತೇನೆ ಈ ರೀತಿ ಹಲ್ಯೆ ಯಾರ ಮೇಲೆ ಆಗಬಾರದು ಮತ್ತು ಮಹಾಪೌರರು ಪೊಲೀಸ ಕಮಿಷನರ ಕಚೇರಿಯ ಮುಂದೆ ನೆಲದ ಮೇಲೆ ಕುಳಿತುಕೊಂಡು ಧರಣಿ ಮಾಡಿರುವುದು ನಮಗೆ ಅವಮಾನ ವಾಗಿದೆ ಮೇಯರ್ ಗೆ ಅಪಮಾನ ಆದ್ರೆ ಇಡೀ ಬೆಳಗಾವಿ ಮಹಾನಗರ ಜನತೆ ಅಪಮಾನ ನಗರದ ಪ್ರಥಮ ಪ್ರಜೆಗೆ ಗೌರವ ನೀಡುವುದು ಕರ್ತವ್ಯ ಆಗಿರುತ್ತದೆ ಪೊಲೀಸ ಕಮಿಷನರ ಅವರು ಈ ರೀತಿ ವರ್ತನೆ ಮಾಡಿದ್ದೂ ತಪ್ಪು ಎಂದರು ಈ ಪ್ರಕರಣದ ಬಗ್ಗೆ ಸಿಒಡಿ, ಸಿಐಡಿ ತನಿಖೆ ಮಾಡಲು ಅವಕಾಶವಿದೆ ಪೊಲೀಸ್ ಆಯುಕ್ತರಿಗೆ ಕರೆಸುವ ಅಧಿಕಾರ ಮೇಯರ್ ಗಿದೆ ಎಂದು ಅಸಮಾಧಾನ ಹೊರಹಾಕಿದರು

ಬಿಜೆಪಿ ಸದಸ್ಯ ಅಭಿಜಿತ್ ಜವಳಕರ ಮಾತನಾಡುತ್ತಾ ಹೀಗೆ ಧಮ್ಕಿ ಹಾಕಿದ್ರೆ ನಾವು ಹೇಗೆ ಜನರ ಮಧ್ಯೆ ಹೋಗಿ ಕೆಲಸ ಮಾಡಬೇಕು ಪ್ರಶ್ನಿಸಿದರು ಟಿಳಕವಾಡಿ ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದರು .

ಸಭೆಯಲ್ಲಿ ಮೇಯರ್ ಶೋಭಾ ಸೋಮನಾಚೆ, ಉಪ‌ ಮೇಯರ್‌ ರೇಷ್ಮಾ ಪಾಟೀಲ್ ಸೇರಿ ನಗರಸೇವಕರು ಬಾಗಿಯಾಗಿದ್ದರು

Tags: